ಹೊಸ ಇಪಿಎಫ್​ಒ ಆಟೊ ಸೆಟಲ್ಮೆಂಟ್ ನಿಯಮ; ಸುಲಭವಾಗಿ ಹಣ ಹಿಂಪಡೆಯಿರಿ

EPFO new auto-settlement rules: ಇಪಿಎಫ್​ಒ 2020ರಲ್ಲಿ ಪರಿಚಯಿಸಿದ್ದ ಪಿಎಫ್ ಆಟೊ ಮೋಡ್ ಸೆಟಲ್ಮೆಂಟ್ ಸೌಲಭ್ಯವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. 1952ರ ಇಪಿಎಫ್ ಸ್ಕೀಮ್​ನ 68ಬಿ, 68ಜೆ ಮತ್ತು 68ಕೆ ಪ್ಯಾರಾ ಅಡಿಯಲ್ಲಿ ಸಲ್ಲಿಸಲಾಗುವ ಕ್ಲೇಮ್ ಅನ್ನು ಯಾಂತ್ರಿಕವಾಗಿ ಸೆಟ್ಲ್ ಮಾಡಲಾಗುತ್ತದೆ. 50,000 ರೂವರೆಗೂ ಇದ್ದ ಇದರ ಮಿತಿಯನ್ನು ಒಂದು ಲಕ್ಷ ರೂವರೆಗೂ ಹೆಚ್ಚಿಸಲಾಗಿದೆ. ಮನೆ ಖರೀದಿ, ಮನೆ ನಿರ್ಮಾಣ, ಮದುವೆ, ಶಿಕ್ಷಣ, ಆಸ್ಪತ್ರೆ ವೆಚ್ಚ ಈ ಕಾರಣಗಳಿಗೆ ಒಂದು ಲಕ್ಷ ರೂವರೆಗೂ ಇಪಿಎಫ್ ಹಣ ಪಡೆಯುವುದು ಸುಲಭ. ಯಾವ ಅಧಿಕಾರಿಯ ಮಧ್ಯಪ್ರವೇಶ ಇಲ್ಲದೇ ಆಟೋ ಆಗಿ ಕ್ಲೇಮ್ ಸೆಟ್ಲ್ ಆಗುತ್ತದೆ.

ಹೊಸ ಇಪಿಎಫ್​ಒ ಆಟೊ ಸೆಟಲ್ಮೆಂಟ್ ನಿಯಮ; ಸುಲಭವಾಗಿ ಹಣ ಹಿಂಪಡೆಯಿರಿ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2024 | 11:05 AM

ನವದೆಹಲಿ, ಮೇ 15: ಇಪಿಎಫ್​ಒ ಸಂಸ್ಥೆ ತನ್ನ ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಆಟೊ ಮೋಡ್ ಸೆಟಲ್ಮೆಂಟ್ ಸೌಲಭ್ಯವನ್ನು (Auto-mode Settlement facility) ಕೆಲ ವರ್ಷಗಳ ಹಿಂದೆ ಪರಿಚಯಿಸಿತ್ತು. ಇದರಲ್ಲಿ ಸುಲಭವಾಗಿ ಇಪಿಎಫ್ ಖಾತೆಯಿಂದ ಮುಂಗಡ ಹಣವನ್ನು ಹಿಂಪಡೆಯಬಹುದಾಗಿದೆ. 1952ರ ಇಪಿಎಫ್ ಸ್ಕೀಮ್​ನ 68ಜೆ, 68ಕೆ ಮತ್ತು 68ಬಿ ಪ್ಯಾರಾ ಅಡಿಯಲ್ಲಿ ಸಲ್ಲಿಸಲಾಗುವ ಕ್ಲೇಮ್​ಗಳನ್ನು ಸ್ವಯಂಚಾಲಿತವಾಗಿ ಸೆಟಲ್ ಮಾಡಲಾಗುತ್ತದೆ. ಅಂದರೆ ಇಪಿಎಫ್​ಒನ ಅಧಿಕಾರಿಗಳ ಅನುಮೋದನೆಯ ಅಗತ್ಯ ಇರುವುದಿಲ್ಲ. ಎಲ್ಲವೂ ಯಾಂತ್ರಿಕವಾಗಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ. ಈಗ ಇಂತಹ ಆಟೊ ಸೆಟಲ್ಮೆಂಟ್ ಸೌಲಭ್ಯದಲ್ಲಿ ಹಿಂಪಡೆಯಲಾಗುವ ಹಣದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಇಪಿಎಫ್ ಹಣಕ್ಕಾಗಿ ಸಲ್ಲಿಸಲಾದ ಕ್ಲೈಮ್​ಗಳಲ್ಲಿ ಹೆಚ್ಚಿನವು ತಿರಸ್ಕೃತಗೊಳ್ಳುತ್ತಿವೆ ಎಂಬಂತಹ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಗಮನ ಸೆಳೆದಿದೆ.

ಇಪಿಎಫ್ ಸ್ಕೀಮ್​ನ ಪ್ಯಾರಾ 68ಬಿ ಮತ್ತು 68ಕೆ ಏನು ಹೇಳುತ್ತೆ?

  • ಪ್ಯಾರಾ 68ಬಿ ಯಲ್ಲಿ ಮನೆ ಅಥವಾ ನಿವೇಶನ ಖರೀದಿಸಲು; ಅಥವಾ ಮನೆ ಕಟ್ಟಲು ಹಣ ಹಿಂಪಡೆಯಬಹುದು.
  • ಪ್ಯಾರಾ 68ಕೆ ಅಡಿಯಲ್ಲಿ ಮದುವೆ, ಉನ್ನತ ಶಿಕ್ಷಣಕ್ಕೆ ಇಪಿಎಫ್ ಅಡ್ವಾನ್ಸ್ ಹಣ ಹಿಂಪಡೆಯಬಹುದು.
  • ಪ್ಯಾರಾ 68ಜೆ ಅಡಿಯಲ್ಲಿ ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹಣ ಹಿಂಪಡೆಯಬಹುದು.

ಇದನ್ನೂ ಓದಿ: ಇಪಿಎಫ್​ಒ ಹೊಸ ಆದೇಶ: ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂವರೆಗೆ ಪಿಎಫ್ ಹಣ ಪಡೆಯುವ ಅವಕಾಶ

ಅಡ್ವಾನ್ಸ್ ಹಿಂಪಡೆಯುವ ಹಣದ ಮಿತಿ ಎರಡು ಪಟ್ಟು ಹೆಚ್ಚಳ

1952ರ ಇಪಿಎಫ್ ಸ್ಕೀಮ್​ನ ಮೇಲಿನ ಮೂರು ಪ್ಯಾರಾಗಳಾದ 68ಬಿ, 68ಜೆ ಮತ್ತು 68ಕೆ ಅಡಿಯಲ್ಲಿ ಸಲ್ಲಿಸಲಾಗುವ ಕ್ಲೇಮ್​ಗಳನ್ನು ಆಟೊ ಸೆಟ್ಲ್ ಮಾಡಲಾಗುತ್ತದೆ. ಈವರೆಗೆ ಇದಕ್ಕೆ 50,000 ರೂ ಮಿತಿ ಇತ್ತು. ಈಗ ಅದನ್ನು ಒಂದು ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ ಒಂದು ಲಕ್ಷ ರೂವರೆಗಿನ ಹಣಕ್ಕೆ ಕ್ಲೇಮ್ ಮಾಡಿದರೆ ಅದು ಅಧಿಕಾರಿಯ ಮಧ್ಯಪ್ರವೇಶ ಇಲ್ಲದೇ ಯಾಂತ್ರಿಕವಾಗಿ ಸೆಟ್ಲ್ ಆಗುತ್ತದೆ.

ಪ್ಯಾರಾ 68ಕೆ ಪ್ರಕಾರ ಮದುವೆ ಎಂದರೆ ಇಪಿಎಫ್ ಸದಸ್ಯರ ಮದುವೆಯೇ ಎಂದಲ್ಲ, ಕುಟುಂಬದಲ್ಲಿ ಮಕ್ಕಳು, ಸಹೋದರ, ಸಹೋದರಿಯವರ ಮದುವೆ ನಡೆಯುವುದಿದ್ದರೆ ಅದಕ್ಕೂ ಪಿಎಫ್ ಹಣ ಹಿಂಪಡೆಯಲು ಸಾಧ್ಯ.

ಇದನ್ನೂ ಓದಿ: ಇಪಿಎಫ್ ಖಾತೆ ವಿಲೀನಗೊಳಿಸಬಹುದು, ಆದರೆ ಎರಡು ಯುಎಎನ್ ಸಂಖ್ಯೆ ಸೇರಿಸಲು ಸಾಧ್ಯವಾ? ಇಲ್ಲಿದೆ ಕ್ರಮ

ಗಮನಿಸಬೇಕಾದ ಸಂಗತಿ ಎಂದರೆ, ಈ ಮೇಲಿನ ಕಾರಣಗಳಿಗೆ ನೀವು ಪಿಎಫ್ ಹಣ ಕ್ಲೇಮ್ ಮಾಡುವುದಿದ್ದರೆ ಸಂಬಂಧಿತ ದೃಢೀಕರಣ ದಾಖಲೆಗಳನ್ನು ಕೊಡಬೇಕಾಗುತ್ತದೆ. ಉದಾಹರಣೆಗೆ, ಉನ್ನತ ಶಿಕ್ಷಣಕ್ಕೆ ಹಣ ಪಡೆಯುವುದಿದ್ದರೆ ಶಿಕ್ಷಣ ಸಂಸ್ಥೆಯಿಂದ ಕೋರ್ಸ್​ನ ಅಂದಾಜು ವೆಚ್ಚದ ಪ್ರಮಾಣಪತ್ರ ಪಡೆದು ಅದರ ಫೋಟೋಕಾಪಿಯನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ