ಇಪಿಎಫ್ ಖಾತೆ ವಿಲೀನಗೊಳಿಸಬಹುದು, ಆದರೆ ಎರಡು ಯುಎಎನ್ ಸಂಖ್ಯೆ ಸೇರಿಸಲು ಸಾಧ್ಯವಾ? ಇಲ್ಲಿದೆ ಕ್ರಮ

Multiple UANs, know what to do with them: ಬೇರೆ ಬೇರೆ ಕಾರಣಕ್ಕೆ ಒಂದಕ್ಕಿಂತ ಹೆಚ್ಚು ಇಪಿಎಫ್ ಯೂನಿವರ್ಸಲ್ ಅಕೌಂಟ್ ನಂಬರ್ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ಯುಎಎನ್ ಸಂಖ್ಯೆಗಳನ್ನು ವಿಲೀನಗೊಳಿಸುವುದು ಎರಡು ಇಪಿಎಫ್ ಖಾತೆಗಳನ್ನು ಮರ್ಜ್ ಮಾಡಿದಷ್ಟು ಸುಲಭವಲ್ಲ. ನೀವು ಇಪಿಫ್​ಒದ ನಿಗದಿತ ಇಮೇಲ್​ಗೆ ವಿವರವನ್ನು ಕಳುಹಿಸಬೇಕು. ಈಗ ಕೆಲಸ ಮಾಡುತ್ತಿರುವ ಸಂಸ್ಥೆಗೆ ಮಾಹಿತಿ ನೀಡಿ ಅವರ ಸಹಾಯದಿಂದ ಯುಎಎನ್ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಇಪಿಎಫ್ ಖಾತೆ ವಿಲೀನಗೊಳಿಸಬಹುದು, ಆದರೆ ಎರಡು ಯುಎಎನ್ ಸಂಖ್ಯೆ ಸೇರಿಸಲು ಸಾಧ್ಯವಾ? ಇಲ್ಲಿದೆ ಕ್ರಮ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 15, 2024 | 3:59 PM

ಇಪಿಎಫ್ ಖಾತೆದಾರರಿಗೆ ಇಪಿಎಫ್​ಒದಿಂದ ನೀಡುವ ಯೂನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ (UAN) ಬಗ್ಗೆ ನಿಮಗೆ ಗೊತ್ತಿರುತ್ತದೆ. ಪ್ರತೀ ಇಪಿಎಫ್ ಖಾತೆದಾರರಿಗೆ ಯುಎಎನ್ ನೀಡಲಾಗುತ್ತದೆ. ಒಂದೇ ಯುಎಎನ್ ನಂಬರ್ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ನಿರ್ವಹಿಸಬಹುದು. ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಆದರೆ, ಒಂದೇ ಯುಎಎನ್ ನಂಬರ್ ಉಳಿಸಬಹುದು. ಇದರಿಂದ ಇಪಿಎಫ್ ಖಾತೆಗಳ ನಿರ್ವಹಣೆ ಸುಲಭವಾಗುತ್ತದೆ.

ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಯುಎಎನ್ ನಂಬರ್ ಪಡೆಯುವ ಸಂಭವನೀಯತೆ ಇರುತ್ತದೆ. ಕೆಲಸ ಬದಲಿಸಿದಾಗ ಉದ್ಯೋಗಿ ಹೊಸ ಸಂಸ್ಥೆಗೆ ಹಿಂದಿನ ಯುಎಎನ್ ನಂಬರ್ ಕೊಡದೇ ಹೋದ ಸಂದರ್ಭದಲ್ಲಿ ಹೊಸ ಯುಎಎನ್ ನಂಬರ್ ಹಾಗೂ ಹೊಸ ಇಪಿಎಫ್ ಖಾತೆಯನ್ನು ಸೃಷ್ಟಿಸಲಾಗುತ್ತದೆ. ಈ ಮೂಲಕ ಎರಡೆರಡು ಯುಎಎನ್ ಅಸ್ತಿತ್ವದಲ್ಲಿ ಇರುತ್ತವೆ.

ಒಂದೇ ಯುಎಎನ್ ಅಡಿಯಲ್ಲಿ ಎರಡು ಇಪಿಎಫ್ ಖಾತೆಗಳನ್ನು ವಿಲೀನ ಮಾಡಬಹುದು. ಆದರೆ, ಎರಡು ಯುಎಎನ್ ಅನ್ನು ವಿಲೀನಗೊಳಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಆನ್​ಲೈನ್​ನಲ್ಲಿ ನೇರವಾಗಿ ಮಾಡಲು ಸಾಧ್ಯವಿಲ್ಲ. ಬೇರೆಯೇ ಕ್ರಮ ಇದೆ.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ಎರಡು ಯುಎಎನ್ ಸಂಖ್ಯೆ ವಿಲೀನಗೊಳಿಸುವ ಕ್ರಮಗಳು

ನಿಮ್ಮ ಹೊಸ ಯುಎಎನ್ ಮತ್ತು ಹಳೆಯ ಯುಎಎನ್ ವಿವರವನ್ನು uanepf@epfindia.gov.in ವಿಳಾಸಕ್ಕೆ ಇಮೇಲ್ ಕಳುಹಿಸಿ. ಬಳಿಕ ನೀವು ಕೆಲಸ ಮಾಡುವ ಈಗಿನ ಸಂಸ್ಥೆಗೆ ಈ ಎರಡು ಯುಎಎನ್ ಅಸ್ತಿತ್ವದಲ್ಲಿರುವ ಮಾಹಿತಿ ನೀಡಿ. ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡಬಹುದು.

ನೀವು ಕಳುಹಿಸಿದ ಮಾಹಿತಿಯನ್ನು ಆಧರಿಸಿ ನಿಮ್ಮ ಹಿಂದಿನ ಯುಎಎನ್ ಸಂಖ್ಯೆಯನ್ನು ಇಪಿಎಫ್​ಒ ಡೀ ಆಕ್ಟಿವೇಟ್ ಮಾಡಬಹುದು. ಹಾಗೊಂದು ವೇಳೆ ಡೀಆ್ಯಕ್ಟಿವೇಟ್ ಆದ ಬಳಿಕ ಅದರಲ್ಲಿನ ಇಪಿಎಫ್ ಖಾತೆಯ ಹಣವನ್ನು ನಿಮ್ಮ ಈಗಿನ ಯುಎಎನ್ ಸಂಖ್ಯೆಯ ಇಪಿಎಫ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಅದಕ್ಕಾಗಿ ಫಾರ್ಮ್ 13 ಅನ್ನು ಪಡೆದು ಭರ್ತಿ ಮಾಡಬೇಕು.

ಇಪಿಎಫ್​ಒ ವೆಬ್​ಸೈಟ್​ನಲ್ಲಿ ಈ ಫಾರ್ಮ್ 13 ಸಿಗುತ್ತದೆ. ಇದರಲ್ಲಿ ನಿಮ್ಮ ಹಿಂದಿನ ಸಂಸ್ಥೆ ಮತ್ತು ಈಗ ಕೆಲಸ ಮಾಡುವ ಸಂಸ್ಥೆ ಎರಡರಿಂದಲೂ ಸಹಿ ಮತ್ತು ಸೀಲ್ ಇರಬೇಕು. ಇದಾದ ಬಳಿಕ ಈ ಫಾರ್ಮ್ ಅನ್ನು ಈಗಿನ ಸಂಸ್ಥೆಗೆ ಸಲ್ಲಿಸಬೇಕು. ಅವರು ಮುಂದಿನ ಪ್ರಕ್ರಿಯೆ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಇಪಿಎಫ್​ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್

ಅರ್ಜಿ ಸಲ್ಲಿಸುವ ಮುನ್ನ ಈ ಸಂಗತಿ ನೆನಪಿರಲಿ…

ನಿಮ್ಮ ಹಿಂದಿನ ಯುಎಎನ್ ಮತ್ತು ಈಗಿನ ಯುಎಎನ್​ನಲ್ಲಿರುವ ಎಲ್ಲಾ ಕೆವೈಸಿ ವಿವರಗಳು ತಾಳೆಯಾಗುತ್ತಿರಬೇಕು. ಅಂದರೆ ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ಮಾಹಿತಿಯಲ್ಲಿ ವ್ಯತ್ಯಯ ಇರಕೂಡದು. ಇದ್ದರೆ ಎರಡು ಯುಎಎನ್ ಅನ್ನು ವಿಲೀನಗೊಳಿಸುವ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ