AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF: ಇಪಿಎಫ್​ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್

Employee Provident Fund: ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಸಾಕಷ್ಟು ಪ್ರಯೋಜನಗಳನ್ನು ತಂದುಕೊಡುವ ಹೂಡಿಕೆ ಮತ್ತು ನಿವೃತ್ತಿ ಭದ್ರತೆಯ ಸಾಧನ. ಉದ್ಯೋಗಿ ಹಾಗೂ ಅವರು ಕೆಲಸ ಮಾಡುವ ಕಂಪನಿ ಸೇರಿ ಇಪಿಎಫ್ ಖಾತೆಗೆ ಹಣ ತುಂಬಿಸಲಾಗುವುದು. ಸರ್ಕಾರ ಈ ಹಣಕ್ಕೆ ಬಡ್ಡಿ ತುಂಬುತ್ತದೆ. ಉದ್ಯೋಗಿ ಹೆಚ್ಚಿನ ಕೊಡುಗೆ ನೀಡಬೇಕೆಂದರೆ ವಿಪಿಎಫ್​ಗೆ ಅರ್ಜಿ ಹಾಕಬಹುದು. ಇಪಿಎಫ್​ನ ಹಣಕ್ಕೆ ಯಾವ ತೆರಿಗೆಯೂ ಅನ್ವಯ ಆಗುವುದಿಲ್ಲ. ಹೀಗಾಗಿ, ತೆರಿಗೆ ಪಾವತಿದಾರರಾಗಿದ್ದರೆ ಇಪಿಎಫ್ ಉತ್ತಮ ಯೋಜನೆ ಆಗುತ್ತದೆ.

EPF: ಇಪಿಎಫ್​ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್
ಇಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 22, 2024 | 1:05 PM

ಇಪಿಎಫ್ ಎಂಬುದು ಕಾರ್ಮಿಕರ ಭವಿಷ್ಯದ ಭದ್ರತೆಗೆಂದು ಸರ್ಕಾರ ಶುರು ಮಾಡಿದ್ದ ಯೋಜನೆ. ಮೊದಮೊದಲು ಕೈಗಾರಿಕೆಗಳ ಕಾರ್ಮಿಕರಿಗೆ ಸೀಮಿತವಾಗಿದ್ದ ಈ ಸ್ಕೀಮ್ ಇದೀಗ ಬಹುತೇಕ ಎಲ್ಲಾ ಉದ್ಯೋಗಿಗಳಿಗೂ ಸಿಗುತ್ತದೆ. ಒಂದು ಕಂಪನಿ ಒಬ್ಬ ಉದ್ಯೋಗಿಯ ಮೂಲವೇತನದ (basic salary) ಶೇ. 12ರಷ್ಟು ಹಣ ಪಿಎಫ್ ಖಾತೆಗೆ ಸಂದಾಯವಾಗುತ್ತದೆ. ಕಂಪನಿ ಕೂಡ ಅಷ್ಟೇ ಪ್ರಮಾಣದ ಹಣವನ್ನು ಖಾತೆಗೆ ತುಂಬಿಸುತ್ತದೆ. ಈ ಖಾತೆಯಲ್ಲಿರುವ ಹಣಕ್ಕೆ ಸರ್ಕಾರ ವರ್ಷಕ್ಕೆ ಒಮ್ಮೆ ಬಡ್ಡಿಹಣ ತುಂಬುತ್ತದೆ. ಈ ರೀತಿಯಲ್ಲಿ ಇಪಿಎಫ್ ಹಣ ಉದ್ಯೋಗಿಯ ಪಾಲಿಗೆ ಉತ್ತಮ ಹೂಡಿಕೆಯಾಗಿ ಮುಂದುವರಿಯುತ್ತಾ ಹೋಗುತ್ತದೆ. ಇದಕ್ಕೆ ಸಿಗುವ ಬಡ್ಡಿಯೂ ಕೂಡ ಎಫ್​ಡಿ ಇತ್ಯಾದಿಗಿಂತ ಹೆಚ್ಚೇ ಇರುತ್ತದೆ. ನಿವೃತ್ತಿ ಕಾಲದೊಳಗೆ ಉದ್ಯೋಗಿಯ ಪಿಎಫ್ ಖಾತೆಯಲ್ಲಿ ಸಾಕಷ್ಟು ಹಣ ಶೇಖರಣೆ ಆಗಿರುತ್ತದೆ.

ಇಪಿಎಫ್​ನಿಂದ ತೆರಿಗೆ ಲಾಭಗಳುಂಟು…

ಇಪಿಎಫ್ ಉತ್ತಮ ಹೂಡಿಕೆ ಎನ್ನುವುದು ಹೌದು. ಇದರ ಜೊತೆಗೆ ತೆರಿಗೆ ಪಾವತಿದಾರರಿಗೆ ಹೆಚ್ಚಿನ ಉಳಿತಾಯಕ್ಕೆ ದಾರಿ ಮಾಡುತ್ತದೆ. ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂ ಟ್ಯಾಕ್ಸ್ ಡಿಡಕ್ಷನ್​ಗೆ ಅವಕಾಶ ಇದೆ. ಅದರಲ್ಲಿ ಇಪಿಎಫ್ ಹೂಡಿಕೆಯನ್ನು ಬಳಸಿಕೊಳ್ಳಬಹುದು.

ಇಪಿಎಫ್​ಗೆ ಮಾಡಲಾಗುವ ಕೊಡುಗೆಗೆ ತೆರಿಗೆ ವಿನಾಯಿತಿ ಇರುತ್ತದೆ. ಇದಕ್ಕೆ ಸಿಗುವ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಇಪಿಎಫ್ ಹಣ ಹಿಂಪಡೆಯುವಾಗ ಆ ಮೊತ್ತಕ್ಕೆ ಯಾವ ತೆರಿಗೆ ಕಡಿತ ಇರುವುದಿಲ್ಲ. ಹೀಗಾಗಿ, ಇಪಿಎಫ್​ನಿಂದ ಸ್ಪಷ್ಟ ತೆರಿಗೆ ಲಾಭ ಇರುತ್ತದೆ.

ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್​ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ

ಸಾಮಾನ್ಯವಾಗಿ ಮೂಲವೇತನದ ಶೇ. 12ರಷ್ಟು ಹಣವನ್ನು ಉದ್ಯೋಗಿ ತನ್ನ ಕೈಯಿಂದ ಇಪಿಎಫ್ ಖಾತೆಗೆ ಹಾಕಬಹುದು. ಗರಿಷ್ಠ ತಿಂಗಳಿಗೆ 15,000 ರೂವರೆಗೆ ಮಿತಿ ಇದೆ. ಇದರ ಜೊತೆಗೆ ಉದ್ಯೋಗಿ ವಾಲಂಟರಿ ಪಿಎಫ್, ಅಥವಾ ವಿಪಿಎಫ್ ಸೌಲಭ್ಯವನ್ನು ಪಡೆಯಬಹುದು. ಇದಕ್ಕಾಗಿ ಉದ್ಯೋಗಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿಪಿಎಫ್​ನಲ್ಲಿ ಉದ್ಯೋಗಿಗಳು ಹೆಚ್ಚಿನ ಕೊಡುಗೆ ನೀಡಬಹುದು. ಇಪಿಎಫ್​ನಲ್ಲಿ ಸಿಗುವಷ್ಟೇ ಬಡ್ಡಿಹಣ ವಿಪಿಎಫ್ ಹಣಕ್ಕೂ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ