Post Office Accident Insurance: 520 ರೂಗೆ 10 ಲಕ್ಷ ರೂ; 12 ರೂಗೆ 2 ಲಕ್ಷ ರೂ ಆಕ್ಸಿಡೆಂಟ್ ಕವರೇಜ್ ಕೊಡುವ ಅಂಚೆ ಕಚೇರಿ ಸ್ಕೀಮ್​ಗಳು

Post Office Accident Insurance Plans: ಪೋಸ್ಟ್ ಆಫೀಸ್​ನಲ್ಲಿ ಬಹಳ ಉಪಯೋಗವಾಗುವಂತಹ ಎರಡು ಅಪಘಾತ ವಿಮೆ ಯೋಜನೆಗಳಿವೆ. ವಾರ್ಷಿಕ 520 ರೂ ಪ್ರೀಮಿಯಮ್​ಗೆ ಹತ್ತು ಲಕ್ಷ ರೂ ಆಕ್ಸಿಡೆಂಟ್ ಕವರೇಜ್ ಸಿಗುತ್ತದೆ. ಪಾಲಿಸಿದಾರ ಅಪಘಾತದಿಂದ ಮೃತಪಟ್ಟರೆ ನಾಮಿನಿಗೆ 10 ಲಕ್ಷ ರೂ ಪರಿಹಾರ ಸಿಗುತ್ತದೆ. ಹಾಗೆಯೇ, ಪಿಎಂ ಸುರಕ್ಷಾ ಬಿಮಾ ಯೋಜನೆಯಲ್ಲಿ ವರ್ಷಕ್ಕೆ 12 ರೂ ಮಾತ್ರವೇ ಪ್ರೀಮಿಯಮ್ ಪಾವತಿಸಿದರೆ ಎರಡು ಲಕ್ಷ ರೂ ವಿಮಾ ಕವರೇಜ್ ಸಿಗುತ್ತದೆ. ಈ ಇನ್ಷೂರೆನ್ಸ್ ಕವರೇಜ್​ಗಾಗಿ ಖಾಸಗಿ ವಿಮಾ ಕಂಪನಿಗಳ ಜೊತೆ ಅಂಚೆ ಕಚೇರಿ ಟೈಅಪ್ ಮಾಡಿಕೊಂಡಿರುತ್ತದೆ.

Post Office Accident Insurance: 520 ರೂಗೆ 10 ಲಕ್ಷ ರೂ; 12 ರೂಗೆ 2 ಲಕ್ಷ ರೂ ಆಕ್ಸಿಡೆಂಟ್ ಕವರೇಜ್ ಕೊಡುವ ಅಂಚೆ ಕಚೇರಿ ಸ್ಕೀಮ್​ಗಳು
ಅಂಚೆ ಕಚೇರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2024 | 5:13 PM

ಅಂಚೆ ಕಚೇರಿ ಈಗ ಪೋಸ್ಟ್​ಗಳನ್ನು ತಲುಪಿಸುವ ಕೇಂದ್ರವಾಗಿ ಉಳಿದಿಲ್ಲ. ಬ್ಯಾಂಕ್ ಹಾಗೂ ಸರ್ಕಾರಿ ಯೋಜನೆಗಳ ಕೇಂದ್ರವಾಗಿದೆ. ಅಂಚೆ ಕಚೇರಿಯಲ್ಲಿ ಬ್ಯಾಂಕ್ ರೀತಿಯಲ್ಲಿ ಸೇವಿಂಗ್ಸ್ ಅಕೌಂಟ್ ತೆರೆಯಬಹುದು, ನಿಶ್ಚಿತ ಠೇವಣಿ (Time deposits), ಆವರ್ತಿತ ಠೇವಣಿಗಳನ್ನು (Recurring Deposits) ಇಡಬಹುದು. ಸರ್ಕಾರದ ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳನ್ನು ಆರಂಭಿಸಬಹುದು. ಹಾಗೆಯೇ, ವಿಮಾ ಸೇವೆಯನ್ನೂ ಪೋಸ್ಟ್ ಆಫೀಸ್​ನಲ್ಲಿ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಆಕರ್ಷಕ ಎನಿಸುವ ಕೆಲ ಆಕ್ಸಿಡೆಂಟ್ ಇನ್ಷೂರೆನ್ಸ್ ಸ್ಕೀಮ್​ಗಳು (Accident insurance schemes) ಲಭ್ಯ ಇವೆ.

520 ರೂ ಪ್ರೀಮಿಯಮ್​ಗೆ 10 ಲಕ್ಷ ರೂ ಕವರೇಜ್

ಅಂಚೆ ಕಚೇರಿಯಲ್ಲಿ ನಿಮ್ಮ ಹೆಸರಿನಲ್ಲಿ 520 ರೂ ವಾರ್ಷಿಕ ಪ್ರೀಮಿಯಮ್ ಇರುವ ಅಪಘಾತ ವಿಮೆಯನ್ನು ತೆರೆಯಬಹುದು. ಇದಕ್ಕೆ 10 ಲಕ್ಷ ರೂ ಕವರೇಜ್ ಇರುತ್ತವೆ. ನಿಮಗೆ ಆಕಸ್ಮಿಕವಾಗಿ ಅಪಘಾತವಾಗಿ ನೀವು ಮೃತಪಟ್ಟಲ್ಲಿ ನೀವು ಹೆಸರಿಸಿದ ನಾಮಿನಿಗೆ 10 ಲಕ್ಷ ರೂ ಪರಿಹಾರ ಹಣ ಸಂದಾಯವಾಗುತ್ತದೆ.

ಇದನ್ನೂ ಓದಿ: ಗೃಹಜ್ಯೋತಿ ಸ್ಕೀಮ್: ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?

ಅಕಸ್ಮಾತ್ ಆ ದುರಂತದಲ್ಲಿ ನಿಮಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾದರೆ ಚಿಕಿತ್ಸಾ ವೆಚ್ಚಕ್ಕೆ 60,000 ರೂವರೆಗೂ ಹಣ ಸಿಗುತ್ತದೆ. ಈ ಇನ್ಷೂರೆನ್ಸ್ ಪ್ಲಾನ್​ಗಾಗಿ ಅಂಚೆ ಕಚೇರಿಯು ಟಾಟಾ ಮತ್ತು ಬಜಾಜ್ ಇನ್ಷೂರೆನ್ಸ್ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿರುತ್ತದೆ.

12 ರೂ ಪ್ರೀಮಿಯಮ್​ನ ಪಿಎಂ ಸುರಕ್ಷಾ ಬಿಮಾ ಯೋಜನೆ

ನೀವು ವರ್ಷಕ್ಕೆ ಕೇವಲ 12 ರೂ ಕಟ್ಟಿದರೂ ಸಾಕು ಎರಡು ಲಕ್ಷ ರೂ ಆಕ್ಸಿಡೆಂಟ್ ಕವರೇಜ್ ಪಡೆಯಬಹುದು. ಇದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಾಗಿದೆ. ಪಾಲಿಸಿದಾರ ಮೃತಪಟ್ಟರೆ ನಾಮಿನಿಗೆ 2 ಲಕ್ಷ ರೂ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಮಕ್ಕಳ ಉನ್ನತ ಶಿಕ್ಷಣಕ್ಕೆ 15 ವರ್ಷದಲ್ಲಿ ಮೂರು ಕೋಟಿ ರೂ ಗಳಿಸುವುದು ಹೇಗೆ?

ಅಪಘಾತದಲ್ಲಿ ಎರಡೂ ಕೈ ಅಥವಾ ಕಾಲು ಮುರಿದರೆ, ಅಥವಾ ದೃಷ್ಟಿ ಹೋದರೂ ಎರಡು ಲಕ್ಷ ರೂ ಪರಿಹಾರ ಸಿಗುತ್ತದೆ. ಒಂದು ಕೈ, ಅಥವಾ ಒಂದು ಕಾಲು, ಅಥವಾ ಒಂದು ಕಣ್ಣಿನ ದೃಷ್ಟಿ ಹೋದರೆ ಒಂದು ಲಕ್ಷ ರೂ ಪರಿಹಾರ ಸಿಗುತ್ತದೆ. ಈ ವಿಮೆಗೂ ಅಂಚೆ ಕಚೇರಿಯು ಖಾಸಗಿ ಇನ್ಸೂರೆನ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ