ಕ್ರೆಡಿಟ್ ಕಾರ್ಡ್ ಎಷ್ಟು ಬಳಸುತ್ತೀರಿ? ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆಗದಂತೆ ಎಚ್ಚರವಹಿಸಿ

Credit Utilization Ratio and credit score: ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯ ರೀತಿಯು ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತದೆ. ನೀವು ಅತಿಯಾಗಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಅದನ್ನು ನೆಗಟಿವ್ ಆಗಿ ನೋಡಲಾಗುತ್ತದೆ. ತಜ್ಞರ ಪ್ರಕಾರ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಶೇ. 30ಕ್ಕಿಂತ ಹೆಚ್ಚಿರಬಾರದು. ಅಂದರೆ ನಿಮ್ಮ ಕ್ರೆಡಿಟ್ ಕಾರ್ಡ್​ಗೆ ನಿಗದಿ ಮಾಡಲಾಗಿರುವ ಮಿತಿ ಹಣದಲ್ಲಿ ಶೇ. 30ಕ್ಕಿಂತ ಹೆಚ್ಚು ಮೊತ್ತವನ್ನು ಬಳಸಲು ಹೋಗಬೇಡಿ. ಇದರಿಂದ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳಲು ಸಹಾಯವಾಗುತ್ತದೆ.

ಕ್ರೆಡಿಟ್ ಕಾರ್ಡ್ ಎಷ್ಟು ಬಳಸುತ್ತೀರಿ? ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆಗದಂತೆ ಎಚ್ಚರವಹಿಸಿ
ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2024 | 5:39 PM

ಇವತ್ತು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾದ ಅಂಶ. ಸಿಬಿಲ್ (CIBIL), ಎಕ್ಸ್​ಪೀರಿಯಾ ಇತ್ಯಾದಿ ಕೆಲ ಏಜೆನ್ಸಿಗಳು ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಸೇವೆ ಒದಗಿಸುತ್ತವೆ. ಇವುಗಳ ನೀಡುವ ಅಂಕಗಳು ನಮ್ಮ ಹಣಕಾಸು ಶಿಸ್ತು, ಆರೋಗ್ಯವನ್ನು ಪ್ರತಿಫಲಿಸುತ್ತವೆ. ಸಾಲವನ್ನು ಹೇಗೆ ನಿಭಾಯಿಸುತ್ತೇವೆ ಇದು ಕ್ರೆಡಿಟ್ ಸ್ಕೋರ್​ಗೆ ಮಾನದಂಡವಾಗಿರುತ್ತದೆ. ಸಾಲ ನಿಭಾಯಿಸುವುದು ಎಂದರೆ, ಪರ್ಸನಲ್ ಲೋನ್, ಹೋಮ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಯನ್ನು ಸಕಾಲಕ್ಕೆ ಮರುಪಾವತಿ ಮಾಡುವುದು. ಈ ಮಧ್ಯೆ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ, ಅಥವಾ ಸಾಲ ಬಳಕೆ ಅನುಪಾತ ಎಂಬ ಅಂಶವೊಂದೂ ಕ್ರೆಡಿಟ್ ಸ್ಕೋರ್ ಅನ್ನು ಪ್ರಭಾವಿಸುತ್ತದೆ.

ಏನಿದು ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ?

ನಮಗೆ ಕೊಡುವ ಒಂದು ಕ್ರೆಡಿಟ್ ಕಾರ್ಡ್​ಗೆ ಒಂದು ಹಣದ ಮಿತಿ ಹಾಕಲಾಗಿರುತ್ತದೆ. ಆ ಮಿತಿಯೊಳಗೆ ನಾವು ಕಾರ್ಡ್ ಬಳಕೆ ಮಾಡಬೇಕು. ಇಲ್ಲಿ ಎಷ್ಟು ಬಳಕೆ ಮಾಡುತ್ತೇವೆ ಎಂಬುದು ನಮ್ಮ ಹಣಕಾಸು ಆರೋಗ್ಯವನ್ನು ಸೂಚಿಸುತ್ತದೆ. ತಜ್ಞರ ಪ್ರಕಾರ ಇದರ ಬಳಕೆ ಶೇ. 30ಕ್ಕಿಂತ ಹೆಚ್ಚಿರಬಾರದು.

ಇದನ್ನೂ ಓದಿ: ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ

ಉದಾಹರಣೆಗೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ 50 ಸಾವಿರ ರೂ ಇದ್ದರೆ 15,000 ರೂಗಿಂತ ಹೆಚ್ಚು ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಬಳಸದಂತೆ ನೋಡಿಕೊಳ್ಳಿ. ನೀವು ಕಾರ್ಡ್ ಬಳಸಿ 25,000 ರೂ ವೆಚ್ಚ ಮಾಡಿದರೆ ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಶೇ. 50 ಆಗಿ ಹೋಗುತ್ತದೆ. ಹೀಗಾಗಿ, ಮಿತಿಯೊಳಗೆ ವೆಚ್ಚ ಮಾಡುವುದು ಕಷ್ಟವಾಗಬಹುದು. ಇದಕ್ಕೂ ಕೆಲ ಉಪಾಯಗಳಿವೆ.

ಉಪಾಯ 1: ಹೆಚ್ಚು ಕ್ರೆಡಿಟ್ ಕಾರ್ಡ್ ಪಡೆಯುವುದು

ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್​ಗಳನ್ನು ಪಡೆದುಕೊಳ್ಳಬಹುದು. ಅದರಲ್ಲೂ ಲೈಫ್​ಟೈಮ್ ಫ್ರೀ ಇರುವಂತಹ ಕಾರ್ಡ್ ಸಿಕ್ಕರೆ ತಪ್ಪದೇ ಪಡೆಯಿರಿ. ಆಗ ನಿಮ್ಮ ಕ್ರೆಡಿಟ್​ನ ಒಟ್ಟಾರೆ ಮಿತಿ ಹೆಚ್ಚುತ್ತದೆ. ಒಂದು ಕಾರ್ಡ್​ಗೆ 50,000 ರೂ ಮಿತಿ ಇದ್ದರೆ, ಮತ್ತೊಂದು ಕಾರ್ಡ್​ಗೆ 40,000 ರೂ ಮಿತಿ ಇರಬಹುದು. ಇನ್ನೊಂದು ಕಾರ್ಡ್​ಗೆ 60,000 ರೂ ಕ್ರೆಡಿಟ್ ಮಿತಿ ಇರಬಹುದು. ನಿಮ್ಮ ಮೂರು ಕ್ರೆಡಿಟ್ ಕಾರ್ಡ್ ಸೇರಿ ಒಟ್ಟಾರೆ ಒಂದೂವರೆ ಲಕ್ಷ ರೂ ಕ್ರೆಡಿಟ್ ಮಿತಿ ಆಗುತ್ತದೆ. ಈಗ ನೀವು ಶೇ 30, ಎಂದರೆ 45,000 ರೂವರೆಗೂ ವೆಚ್ಚ ಮಾಡಬಹುದು.

ಇದನ್ನೂ ಓದಿ: ಚೆಕ್ ಲೀಫ್, ಪಾಸ್​ಬುಕ್ ಫೋಟೋ ಲಗತ್ತಿಸುವ ಅಗತ್ಯವಿಲ್ಲ; ಸರಳವಾಗಲಿದೆ ಪಿಎಫ್ ಹಣಕ್ಕೆ ಕ್ಲೇಮ್ ಪ್ರಕ್ರಿಯೆ

ಉಪಾಯ 2: ಕ್ರೆಡಿಟ್ ಮಿತಿ ಹೆಚ್ಚಿಸಿ

ನಿಮ್ಮ ಕಾರ್ಡ್​ನಲ್ಲಿ ಆರಂಭದಲ್ಲಿ ನಿಮ್ಮ ಆದಾಯ ಮತ್ತಿತರೆ ಅಂಶ ಪರಿಗಣಿಸಿ ಕ್ರೆಡಿಟ್ ಮಿತಿ ನಿಗದಿ ಮಾಡಲಾಗಿರುತ್ತದೆ. ನಿಮ್ಮ ಆದಾಯ ಹೆಚ್ಚಾಗಿದ್ದಲ್ಲಿ ನೀವು ಕ್ರೆಡಿಟ್ ಕಾರ್ಡ್ ಕಂಪನಿಯನ್ನು ಸಂಪರ್ಕಿಸಿ ಕ್ರೆಡಿಟ್ ಲಿಮಿಟ್ ಹೆಚ್ಚಿಸುವಂತೆ ಕೋರಬಹುದು. ಇದರಿಂದ ನಿಮಗೆ ಹೆಚ್ಚು ಕ್ರೆಡಿಟ್ ಸ್ಪೇಸ್ ಸಿಗುತ್ತದೆ. ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಮಿತಿಯನ್ನು ಪಾಲಿಸುವುದು ಸುಲಭವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್