ಇವರಿಲ್ಲದೇ ಏನೂ ಇಲ್ಲ… ಭಾರತ ಮೂಲದ ಟೆಕ್ಕಿ ಅಶೋಕ್ ಎಲ್ಲುಸಾಮಿಯನ್ನು ಹಾಡಿಹೊಗಳಿದ ಇಲಾನ್ ಮಸ್ಕ್

Elon Musk Praises his employee Ashok Elluswamy: ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರು ಭಾರತ ಮೂಲದ ಟೆಕ್ಕಿ ಅಶೋಕ್ ಎಲ್ಲುಸ್ವಾಮಿಯನ್ನು ಪ್ರಶಂಸಿಸಿದ್ದಾರೆ. ಅಶೋಕ್ ಇಲ್ಲದೇ ಹೋಗಿದ್ದರೆ ಇವತ್ತು ಟೆಸ್ಲಾ ಮಾಮೂಲಿಯ ಇತರ ಕಾರ್ ಕಂಪನಿಗಳಂತಾಗಿರುತ್ತಿತ್ತು ಎಂದು ಮಸ್ಕ್ ಹೇಳಿದ್ದಾರೆ. ಚೆನ್ನೈನವರಾದ ಅಶೋಕ್ ಅವರು ಟೆಸ್ಲಾ ಎಐ ಆಟೊಪೈಲಟ್ ಸಾಫ್ಟ್​​ವೇರ್ ವಿಭಾಗದ ಡೈರೆಕ್ಟರ್ ಆಗಿದ್ದಾರೆ.

ಇವರಿಲ್ಲದೇ ಏನೂ ಇಲ್ಲ... ಭಾರತ ಮೂಲದ ಟೆಕ್ಕಿ ಅಶೋಕ್ ಎಲ್ಲುಸಾಮಿಯನ್ನು ಹಾಡಿಹೊಗಳಿದ ಇಲಾನ್ ಮಸ್ಕ್
ಅಶೋಕ್ ಎಲ್ಲುಸಾಮಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2024 | 12:12 PM

ವಾಷಿಂಗ್ಟನ್, ಜೂನ್ 10: ಇಲಾನ್ ಮಸ್ಕ್​ಗೆ ಟೆಸ್ಲಾದ ಅಗತ್ಯ ಇರುವುದಕ್ಕಿಂತ ಹೆಚ್ಚು, ಟೆಸ್ಲಾಗೆ ಇಲಾನ್ ಮಸ್ಕ್ ಅವಶ್ಯಕತೆ ಇದೆ ಎಂದು ಕಂಪನಿಯ ಛೇರ್​ವುಮನ್ ಮೊನ್ನೆ ಹೇಳಿದ್ದು ಸುದ್ದಿಯಾಗಿತ್ತು. ಈಗ ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರು ಭಾರತ ಮೂಲದ ಟೆಕ್ಕಿಯಾದ ಅಶೋಕ್ ಎಲ್ಲುಸಾಮಿ (Ashok Elluswamy) ಬಗ್ಗೆ ಇದೇ ಮಾತುಗಳನ್ನಾಡಿದ್ದಾರೆ. ಎಲ್ಲುಸ್ವಾಮಿ ಇಲ್ಲದೇ ಹೋಗಿದ್ದರೆ ಎಲ್ಲಾ ಕಾರ್ ಕಂಪನಿಗಳಂತೆಯೇ ಟೆಸ್ಲಾ ಕೂಡ ಇರುತ್ತಿತ್ತು ಎಂದು ಸ್ವತಃ ಮಸ್ಕ್ ಅವರೇ ಹೇಳಿದ್ದಾರೆ. ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿಯಾಗಿದ್ದು, ಸದ್ಯ ಆಟೊ ಪೈಲಟ್ ಸಿಸ್ಟಂ ಇರುವ ಕಾರನ್ನು ಅಳವಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಟೆಸ್ಲಾ ಮುಂಚೂಣಿಯಲ್ಲಿದೆ. ಇದರ ಶ್ರೇಯವನ್ನು ಎಲ್ಲುಸ್ವಾಮಿ ಮತ್ತು ‘ಆಸಂ’ ತಂಡಕ್ಕೆ ಮಸ್ಕ್ ಕೊಡುತ್ತಾರೆ. ತಮಿಳುನಾಡು ಮೂಲದ ಅಶೋಕ್ ಅವರು ಈಗ ಟೆಸ್ಲಾ ಎಐ/ಆಟೊಪೈಲಟ್ ಸಾಫ್ಟ್​ವೇರ್ ವಿಭಾಗದ ನಿರ್ದೇಶಕರಾಗಿದ್ದಾರೆ.

‘ಟೆಸ್ಲಾ ಎಐ/ಆಟೊಪೈಲಟ್ ತಂಡಕ್ಕೆ ಸೇರಿದ ಮೊದಲ ವ್ಯಕ್ತಿ ಅಶೋಕ್. ಅಂತಿಮವಾಗಿ ಅವರು ಸಮಗ್ರ ಎಐ/ಆಟೊಪೈಲಟ್ ಸಾಫ್ಟ್​ವೇರ್ ತಂಡವನ್ನು ಮುನ್ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಮತ್ತು ನಮ್ಮ ಆಸಮ್ ತಂಡ ಇಲ್ಲದೇ ಹೋಗಿದ್ದರೆ ಆಟೊನಮಿ ಸಪ್ಲೈಯರ್​ಗೆ ಎದುರು ನೋಡುವಂತಹ ಮಟ್ಟದ ಒಂದು ಕಾರ್ ಕಂಪನಿ ಆಗಿರುತ್ತಿತ್ತು,’ ಎಂದು ಇಲಾನ್ ಮಸ್ಕ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಅಶೋಕ್ ಎಲ್ಲುಚಾಮಿಯನ್ನು ಉಲ್ಲೇಖಿಸಿ ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಆ ಪ್ಯಾಕೇಜ್​ಗೆ ನೀವು ಒಪ್ಪದಿದ್ರೆ ಇಲಾನ್ ಮಸ್ಕ್ ಬಿಟ್ಟುಹೋಗ್ತಾರೆ: ಷೇರುದಾರರನ್ನು ಎಚ್ಚರಿಸಿದ ಟೆಸ್ಲಾ ಅಧ್ಯಕ್ಷೆ

ಇಲಾನ್ ಮಸ್ಕ್​ಗೆ ಅಶೋಕ್ ಗೌರವ

ಇದಕ್ಕೂ ಮುನ್ನ ಅಶೋಕ್ ಎಲ್ಲುಸಾಮಿ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಟೆಸ್ಲಾಗೆ ಇಲಾನ್ ಮಸ್ಕ್ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದರು.

‘ಇಲಾನ್ ಅವರ ಮಹತ್ವಾಕಾಂಕ್ಷೆ ಇಲ್ಲದೇ ಹೋಗಿದ್ದರೆ ಟೆಸ್ಲಾ ಒಂದು ಮಾಮೂಲಿಯ ಕಾರ್ ಕಂಪನಿಯಾಗಿರುತ್ತಿತ್ತು. ಭವಿಷ್ಯದಲ್ಲಿ ಸಂಪೂರ್ಣ ಸ್ವಯಂಚಾಲಿತ ಕಾರುಗಳು ಮತ್ತು ಗೃಹಬಳಕೆಯ ರೋಬೋಗಳು ಬಹಳ ಸಾಮಾನ್ಯವಾಗಿರಲಿವೆ. ಈ ಹಿಂದಿನಿಂದಲೂ ಈ ವ್ಯವಸ್ಥೆ ಇರಬೇಕಿತ್ತು ಎಂದು ಈ ಪ್ರಪಂಚ ಭಾವಿಸುತ್ತಿರುತ್ತದೆ. ಇದರ ದೂರದೃಷ್ಟಿ ಗೊತ್ತಿರುವ ಇಲಾನ್ ಮಸ್ಕ್ ಅವರಿಂದ ಇದು ಸಾಧ್ಯ. ಅಲ್ಲಿಯವರೆಗೆ ನಮಗೆ ಇಲಾನ್ ಮಸ್ಕ್ ಅವಶ್ಯಕವಾಗಿರುತ್ತಾರೆ,’ ಎಂದು ಎಲ್ಲಿಸ್ವಾಮಿ ತಮ್ಮ ಪೋಸ್ಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ

ಚೆನ್ನೈನಿಂದ ಟೆಸ್ಲಾವರೆಗೆ

ತಮಿಳುನಾಡಿನ ಅಶೋಕ್ ಎಲ್ಲುಸಾಮಿ ಅವರು ಚೆನ್ನೈನಲ್ಲಿ ಬಿಇ ಮಾಡಿ, ಅಮೆರಿಕದ ಕಾರ್ನೆಜೀ ಮೆಲಾನ್ ಯೂನಿವರ್ಸಿಟಿಯಲ್ಲಿ ರೋಬೋಟಿಕ್ಸ್ ಸಿಸ್ಟಮ್ಸ್ ಡೆವಲಪ್ಮೆಂಟ್ ಕೋರ್ಸ್ ಮಾಡಿದರು. ಬಳಿಕ ವಾಬ್ಕೋ ವೆಹಿಕಲ್ ಕಂಟ್ರೋಲ್ ಸಿಸ್ಟಮ್ಸ್ ಮತ್ತು ವೋಲ್ಸ್​ವಾಗನ್ ಕಂಪನಿಗಳಲ್ಲಿ ಕೆಲಸ ಮಾಡಿದರು.

ಹತ್ತು ವರ್ಷಗಳ ಹಿಂದೆ ಟೆಸ್ಲಾದ ಆಟೊಪೈಲಟ್ ತಂಡಕ್ಕೆ ಅಶೋಕ್ ಸೇರ್ಪಡೆಯಾಗಿದ್ದು. ಆ ತಂಡದ ಮೊದಲ ಸದಸ್ಯರೇ ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್