ಬಿಪಿಸಿಎಲ್ ಖಾಸಗಿಕರಣ ಇಲ್ಲ; ಒಳ್ಳೆಯ ಆದಾಯ ತರುತ್ತಿರುವ ಸರ್ಕಾರಿ ಸಂಸ್ಥೆಗಳ ಮಾರಾಟ ಇಲ್ಲ: ಪೆಟ್ರೋಲಿಯಂ ಸಚಿವರ ಸ್ಪಷ್ಟನೆ

No stake sales of BPCL: ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆಯನ್ನು ಖಾಸಗಿಗೆ ಮಾರಾಟ ಮಾಡುವ ಪ್ರಸ್ತಾಪವನ್ನು ಸರ್ಕಾರ ಸಂಪೂರ್ಣ ಕೈಬಿಟ್ಟಿದೆ. ಇಂದು ನೂತನ ಪೆಟ್ರೋಲಿಯಂ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹರದೀಪ್ ಸಿಂಗ್ ಪುರಿ, ಬಿಪಿಸಿಎಲ್ ಮಾರಾಟ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2022ರಲ್ಲಿ ಬಿಪಿಸಿಎಲ್​ನ ಶೇ. 52ರಷ್ಟು ಪಾಲನ್ನು ಮಾರುವುದಾಗಿ ಸರ್ಕಾರ ಹೇಳಿತು. ಕೆಲ ಕಂಪನಿಗಳು ಆಸಕ್ತಿ ತೋರಿದವಾದರೂ ಬಿಡ್ ಸಲ್ಲಿಕೆ ಆಗಿರಲಿಲ್ಲ.

ಬಿಪಿಸಿಎಲ್ ಖಾಸಗಿಕರಣ ಇಲ್ಲ; ಒಳ್ಳೆಯ ಆದಾಯ ತರುತ್ತಿರುವ ಸರ್ಕಾರಿ ಸಂಸ್ಥೆಗಳ ಮಾರಾಟ ಇಲ್ಲ: ಪೆಟ್ರೋಲಿಯಂ ಸಚಿವರ ಸ್ಪಷ್ಟನೆ
ಬಿಪಿಸಿಎಲ್ ಪೆಟ್ರೋಲ್ ಬಂಕ್
Follow us
|

Updated on: Jun 11, 2024 | 6:37 PM

ನವದೆಹಲಿ, ಜೂನ್ 11: ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ ಸಂಸ್ಥೆಯನ್ನು ಖಾಸಗಿಕರಣಗೊಳಿಸುವ (BPCL privatisation) ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ನೂತನ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ ಎಂದು ಬಿಸಿನೆಸ್ ಟುಡೇ ವಾಹಿನಿ ವರದಿ ಮಾಡಿದೆ. ಹೆಚ್ಚಿನ ಮಟ್ಟದಲ್ಲಿ ಆದಾಯ ಗಳಿಸುತ್ತಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸರ್ಕಾರದ ನೀತಿಯನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಪಿಸಿಎಲ್ ಮಾರಾಟ ಮಾಡುವ ಸಾಧ್ಯತೆಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

‘ಮಾರಾಟಕ್ಕಿಡಲಾಗಿದ್ದ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತವನ್ನು ಬಿಪಿಸಿಎಲ್ ಮೊದಲ ಮೂರು ಕ್ವಾರ್ಟರ್​ನಲ್ಲಿ ಗಳಿಸಿದೆ’ ಎಂದು ಪುರಿ ಹೇಳಿದ್ದಾರೆ. ಹಿಂದಿನ ಸರ್ಕಾರದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿದ್ದ ಹರ್ದೀಪ್ ಸಿಂಗ್ ಪುರಿ ಈ ಬಾರಿ ಪೆಟ್ರೋಲಿಯಂ ಖಾತೆ ಪಡೆದಿದ್ದಾರೆ. ಇವತ್ತು ಸಚಿವರಾಗಿ ಅವರದ್ದು ಮೊದಲ ದಿನವಾಗಿದ್ದು, ತಮ್ಮ ಸಚಿವಾಲಯದ ನೀತಿಯನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯಗಳಿಗೆ 1.39 ಲಕ್ಷ ಕೋಟಿ ರೂ ತೆರಿಗೆ ಹಂಚಿದ ಕೇಂದ್ರ; ಬಿಹಾರಕ್ಕೆ ಬಂಪರ್; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ರಾಜ್ಯವಾರು ಪಟ್ಟಿ

ಭಾರತ್ ಪೆಟ್ರೋಲಿಯಂ ನಿಗಮವು 2023-24ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬರೋಬ್ಬರಿ 19,000 ಕೋಟಿ ರೂಗಳಷ್ಟು ನಿವ್ವಳ ಲಾಭ ಮಾಡಿದೆ. ಮೂರನೇ ಕ್ವಾರ್ಟರ್​ನಲ್ಲಿ ನಿವ್ವಳ ಲಾಭ ಶೇ. 82ರಷ್ಟು ಹೆಚ್ಚಳವಾಗಿ 3,181.42 ಕೋಟಿ ರೂ ಆಗಿದೆ. ಒಟ್ಟು ಆದಾಯವು ಆ ಮೂರನೇ ಕ್ವಾರ್ಟರ್​ನಲ್ಲಿ 1.30 ಲಕ್ಷ ಕೋಟಿ ರೂನಷ್ಟಿದೆ.

ಇಂಡಿಯನ್ ಆಯಿಲ್ ಬಳಿಕ ಭಾರತದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಬಿಪಿಸಿಎಲ್ ಆಗಿದೆ. ಮುಂಬೈ, ಕೊಚ್ಚಿ ಮತ್ತು ಮಧ್ಯಪ್ರದೇಶದಲ್ಲಿ ಇದರ ರಿಫೈನರಿ ಘಟಕಗಳಿವೆ. ರಿಲಾಯನ್ಸ್ ಮತ್ತು ಇಂಡಿಯನ್ ಆಯಿಲ್ ಬಳಿಕ ಅತಿದೊಡ್ಡ ಆಯಿಲ್ ರಿಫೈನಿಂಗ್ ಸಾಮರ್ಥ್ಯ ಇರುವುದು ಬಿಪಿಸಿಎಲ್​ಗೆ.

ಹಿಂದಿನ ಸರ್ಕಾರದ ಬಂಡವಾಳ ಹಿಂತೆಗೆತದ ಅಜೆಂಡಾದಲ್ಲಿ ಬಿಪಿಸಿಎಲ್ ಮತ್ತು ಏರ್ ಇಂಡಿಯಾ ಇತ್ತು. ಬಿಪಿಸಿಎಲ್​ನ ಶೇ. 52.98ರಷ್ಟು ಪಾಲನ್ನು ಮಾರಾಟ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಈ ಮೂಲಕ 45,000 ಕೋಟಿ ರೂ ಗಳಿಸುವ ನಿರೀಕ್ಷೆ ಇತ್ತು. ಸೌದಿ ಅರಾಮ್ಕೋ, ಅಬುಧಾಬಿ ನ್ಯಾಷನಲ್ ಆಯಿಲ್ ಕೋ, ಎಕ್ಸಾನ್ ಮೋಬಿಲ್ ಸಂಸ್ಥೆಗಳು ಬಿಪಿಸಿಎಲ್​ನ ಬಹುಪಾಲನ್ನು ಖರೀದಿಸಲು ಆಸಕ್ತಿ ತೋರಿದವರಾದರೂ ಯಾರಿಂದಲೂ ಬಿಡ್ ಸಲ್ಲಿಕೆ ಆಗಲಿಲ್ಲ.

ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್​ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು

ಇದೇ ವೇಳೆ ಬಿಪಿಸಿಎಲ್ ಆದಾಯ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಲಾಭ ಕೂಡ ಚೆನ್ನಾಗಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತೈಲ ಸಂಸ್ಥೆಯನ್ನು ಖಾಸಗಿಗೆ ಕೊಡುವ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಡಿಎನ್​ಎ ಟೆಸ್ಟ್ ನಡೆದೇ ಇಲ್ಲ? ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಡಿಎನ್​ಎ ಟೆಸ್ಟ್ ನಡೆದೇ ಇಲ್ಲ? ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು