ಸುಮಲತಾ ಅಂಬರೀಷ್​ಗೆ ದಂಡ ಕಕ್ಕಿದ ಎಚ್​ಡಿಎಫ್​ಸಿ ಲೈಫ್ ಕಂಪನಿ; ಏಜೆಂಟ್​​ಗಳ ಸುಳ್ಳು ಭರವಸೆಯ ಫಲಶೃತಿ

Sumalatha Ambareesh and HDFC Life case: ಇನ್ಷೂರೆನ್ಸ್ ಏಜೆಂಟ್ ಸುಳ್ಳು ಭರವಸೆ ನೀಡಿ ತಪ್ಪು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಗ್ರಾಹಕ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯಲು ಸಾಧ್ಯವಿದೆ. ಸುಮಲತಾ ಅಂಬರೀಷ್ ಅವರಿಗೂ ಇನ್ಷೂರೆನ್ಸ್ ಏಜೆಂಟ್​ನಿಂದ ಅನ್ಯಾಯವಾಗಿದ್ದು, ಅವರಿಗೆ ಕೋರ್ಟ್​ ಪರಿಹಾರ ಕೊಡಿಸಿದೆ. ಸುಮಲತಾ ಅಂಬರೀಷ್​ಗೆ ಹೂಡಿಕೆ ಹಣವನ್ನು ಬಡ್ಡಿಸಮೇತ ವಾಪಸ್ ಮಾಡುವಂತೆ ಎಚ್​ಡಿಎಫ್​ಸಿ ಲೈಫ್ ಸಂಸ್ಥೆಗೆ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.

ಸುಮಲತಾ ಅಂಬರೀಷ್​ಗೆ ದಂಡ ಕಕ್ಕಿದ ಎಚ್​ಡಿಎಫ್​ಸಿ ಲೈಫ್ ಕಂಪನಿ; ಏಜೆಂಟ್​​ಗಳ ಸುಳ್ಳು ಭರವಸೆಯ ಫಲಶೃತಿ
ಸುಮಲತಾ ಅಂಬರೀಷ್​
Follow us
|

Updated on: Jun 11, 2024 | 2:48 PM

ಬೆಂಗಳೂರು, ಜೂನ್ 11: ಬಹಳಷ್ಟು ಬಾರಿ ಇನ್ಷೂರೆನ್ಸ್ ಏಜೆಂಟ್​ಗಳು ಯಾವುದ್ಯಾವುದೋ ಭರವಸೆಗಳನ್ನು ನೀಡಿ ವಿವಿಧ ಹಣಕಾಸು ಪ್ಲಾನ್​ಗಳನ್ನು ಮಾರಲು ಯತ್ನಿಸುತ್ತಾರೆ. ನಿಗದಿತ ಗುರಿಯೊಂದಿಗೆ ಹೂಡಿಕೆ ಮಾಡಿದವರಿಗೆ ನಿರಾಸೆಯಾಗುತ್ತದೆ. ಇನ್ಷೂರೆನ್ಸ್ ಕಂಪನಿಗಳು ಮತ್ತು ಏಜೆಂಟ್​ಗಳು ಇಂಥ ವಂಚನೆ ಮಾಡಿದರೆ ಗ್ರಾಹಕರ ರಕ್ಷಣೆಗೆ ಪ್ರಬಲ ಕಾನೂನುಗಳಿವೆ. ಮಾಜಿ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರಿಗೆ ಎಚ್​ಡಿಎಫ್​ಸಿ ಲೈಫ್ ಸಂಸ್ಥೆ ದಂಡ ಕಟ್ಟಿಕೊಟ್ಟಿರುವ ಘಟನೆ ನಡೆದಿದೆ. ನಿಶ್ಚಿತ ಠೇವಣಿ ಪ್ಲಾನ್ ಎಂದು ಭರವಸೆ ನೀಡಿ ಇನ್ಷೂರೆನ್ಸ್ ಪ್ಲಾನ್​ಗೆ ಹಣ ಹಾಕಿಸಲಾಗಿತ್ತು. ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಈ ಪ್ರಕರಣದ ವಿಚಾರಣೆ ಮಾಡಿ, ಸುಮಲತಾ ಅಂಬರೀಷ್ ಪರವಾಗಿ ತೀರ್ಪು ನೀಡಿದೆ. ಸುಮಲತಾ ಅವರು ಮಾಡಿದ್ದ ಹೂಡಿಕೆ ಮೊತ್ತವನ್ನು ಬಡ್ಡಿಸಹಿತವಾಗಿ ಮರಳಿಸುವಂತೆ ಎಚ್​ಡಿಎಫ್​ಸಿ ಲೈಫ್ ಸಂಸ್ಥೆಗೆ ಆಯೋಗ ಆದೇಶ ನೀಡಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 10 ಲಕ್ಷ ರೂ ದಂಡ ಹಾಗು 25,000 ರೂ ಕೇಸ್ ವೆಚ್ಚದ ಹಣವನ್ನು ಕೊಡುವಂತೆ ಸೂಚಿಸಿದೆ.

ರವಿಶಂಕರ್, ಸುನೀತಾ ಚನ್ನಬಸಪ್ಪ ಬಾಗೆವಾಡಿ ಅವರಿದ್ದ ಆಯೋಗದಿಂದ ಈ ತೀರ್ಪು ಬಂದಿದೆ. ಸುಮಲತಾಗೆ ಸುಳ್ಳು ಭರವಸೆ ಕೊಟ್ಟ ಏಜೆಂಟ್ ಅನ್ನು ವಿಶಾಲಾಕ್ಷಿ ಎಂದು ಗುರುತಿಸಲಾಗಿದೆ. ಈಕೆ ವಿರುದ್ಧ ಎಚ್​ಡಿಎಫ್​ಸಿ ಲೈಫ್ ಸಂಸ್ಥೆ ಕ್ರಿಮಿನಲ್ ಕಾನೂನು ಪ್ರಕಾರ ಕ್ರಮ ಜರುಗಿಸಲು ಮುಂದಾಗಿದೆ.

ಇದನ್ನೂ ಓದಿ: ದುಬಾರಿಯಾಗಲಿದೆ ಯೂರೋಪ್ ಪ್ರವಾಸ; ಶೆಂಗನ್ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ; ಯಾವುದಿದು ವೀಸಾ?

ಸುಮಲತಾ ಅಂಬರೀಷ್ ಅವರಿಂದ 2015ರಲ್ಲಿ 40 ಲಕ್ಷ ರೂ ಹೂಡಿಕೆ ಪಡೆಯಲಾಗಿತ್ತು. ಆ 40 ಲಕ್ಷ ರೂ ಜೊತೆಗೆ 2017ರಿಂದ ಶೇ. 7.5ರ ಬಡ್ಡಿಯೊಂದಿಗೆ ವಾಪಸ್ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ. ಅಂದರೆ ಸುಮಲತಾ ಅಂಬರೀಷ್ ಅವರಿಗೆ 40 ಲಕ್ಷ ರೂ ಅಸಲು, 21 ಲಕ್ಷ ರೂ ಬಡ್ಡಿ, 10 ಲಕ್ಷ ರೂ ಪರಿಹಾರ ಹಾಗೂ 25,000 ರೂ ಕೋರ್ಟ್ ವೆಚ್ಚ ಇಷ್ಟೂ ಸೇರಿ 71,000 ರೂನಷ್ಟು ಹಣವನ್ನು ಎಚ್​ಡಿಎಫ್​ಸಿ ಲೈಫ್ ನೀಡಬೇಕಾಗುತ್ತದೆ.

ಮಾಜಿ ಸಂಸದೆ ನೀಡಿದ್ದ ದೂರಿನ ಪ್ರಕಾರ ಎಚ್​ಡಿಎಫ್​ಸಿ ಲೈಫ್​ನ ಏಜೆಂಟ್ ಅವರು ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ನಲ್ಲಿ ಶೇ. 9ರಷ್ಟು ಬಡ್ಡಿ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಅದನ್ನು ನಂಬಿ ಸುಮಲತಾ ಅಂಬರೀಷ್ 2015ರ ಮೇ 15ರಂದ 40 ಲಕ್ಷ ರೂ ಚೆಕ್ ನೀಡುತ್ತಾರೆ. 2016ರ ನವೆಂಬರ್​ಗೆ 43.60 ಲಕ್ಷ ರೂ ಮರಳುತ್ತದೆ ಎಂದು ಅವರಿಗೆ ನಂಬಿಸಲಾಗಿತ್ತು.

ಆದರೆ, ಸುಮಲತಾ ಅವರು ಎಫ್​ಡಿಗೆಂದು ಕೊಟ್ಟಿದ್ದ ಹಣವನ್ನು ಪೆನ್ಷನ್ ಪ್ಲಾನ್​ಗೆ ಹೂಡಿಕೆ ಮಾಡಲಾಗಿತ್ತು. ಇದು ಗೊತ್ತಾಗಿ, ಸಂಸದೆಯು ಎಚ್​ಡಿಎಫ್​ಸಿ ಲೈಫ್ ಸಂಸ್ಥೆಯನ್ನು ಸಂಪರ್ಕಿಸಿ ಹೂಡಿಕೆಯನ್ನು ಹಿಂಪಡೆಯುವುದಾಗಿ ಹೇಳಿದರು. ಇದಕ್ಕೆ ಸಂಸ್ಥೆ ಒಪ್ಪಿರಲಿಲ್ಲ. ಈ ಕಾರಣಕ್ಕೆ ಗ್ರಾಹಕ ವೇದಿಕೆಯ ಮೊರೆ ಹೋದರು ಸುಮಲತಾ ಅಂಬರೀಷ್.

ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್​ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು

ದೂರದಾರೆಯು ವಿದ್ಯಾವಂತೆಯಾಗಿದ್ದಾರೆ. ಅವರು ಫಾರ್ಮ್​ಗೆ ಸಹಿ ಹಾಕುವಾಗ ಅದು ಇನ್ಷೂರೆನ್ಸ್ ಪಾಲಿಸಿ ಎಂದು ಗೊತ್ತಾಗಿರಬೇಕಲ್ಲವೇ? ಆದರೂ ಯಾಕೆ ಸಹಿ ಮಾಡಿದ್ದರು ಎಂಬುದು ಎಚ್​​ಡಿಎಫ್​ಸಿ ಲೈಫ್ ಸಂಸ್ಥೆಯ ವಾದವಾಗಿತ್ತು. ಅಂತಿಮವಾಗಿ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ನ್ಯಾಯಾಧೀಶರು ಎಚ್​ಡಿಎಫ್​ಸಿ ಲೈಫ್ ಸಂಸ್ಥೆಯನ್ನೇ ದೋಷಿಯನ್ನಾಗಿ ಮಾಡಿ ಸುಮಲತಾ ಪರವಾಗಿ ತೀರ್ಪು ಕೊಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ