ಟೆಸ್ಲಾ ಕಂಪನಿ ಕರ್ನಾಟಕಕ್ಕೆ ಬರುತ್ತಾ? ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಹೇಳಿದ್ದಿದು

HD Kumaraswamy takes charge as new Steel and Heavy Industries minister: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿದ್ದಾರೆ. ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾಗಿ ನಿನ್ನೆ ಜೂನ್ 11ರಂದು ಅಧಿಕಾರ ಸ್ವೀಕರಿಸಿದ್ದಾರೆ. ದೊಡ್ಡದೊಡ್ಡ ಕೈಗಾರಿಕೆಗಳ ವಿಚಾರವು ಈಗ ಕುಮಾರಸ್ವಾಮಿ ಅವರ ಸಚಿವಾಲಯದ ಸುಪರ್ದಿಗೆ ಬರುತ್ತದೆ. ಟೆಸ್ಲಾ ಫ್ಯಾಕ್ಟರಿ ಕರ್ನಾಟಕದಲ್ಲಿ ಸ್ಥಾಪನೆ ಆಗುವಂತೆ ಅವರು ಪ್ರಭಾವ ಬೀರುತ್ತಾರಾ ಎನ್ನುವ ಪ್ರಶ್ನೆ ಇದೆ. ತಾನು ಸ್ವಾರ್ಥಿ ಅಲ್ಲ, ಮಂತ್ರಿಯಾಗಿರುವುದು ಕರ್ನಾಟಕಕ್ಕೆ ಮಾತ್ರವಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಟೆಸ್ಲಾ ಕಂಪನಿ ಕರ್ನಾಟಕಕ್ಕೆ ಬರುತ್ತಾ? ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಹೇಳಿದ್ದಿದು
ಎಚ್ ಡಿ ಕುಮಾರಸ್ವಾಮಿ
Follow us
|

Updated on:Jun 12, 2024 | 12:21 PM

ನವದೆಹಲಿ, ಜೂನ್ 12: ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೊಡ್ಡ ದೊಡ್ಡ ಕೈಗಾರಿಕೆಗಳು ಕರ್ನಾಟಕದತ್ತ ಹೆಚ್ಚು ಒಲವು ತೋರಬಹುದು ಎನ್ನವ ಅನಿಸಿಕೆಗಳಿವೆ. ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾ ಕರ್ನಾಟಕದಲ್ಲಿ ಫ್ಯಾಕ್ಟರಿ (Tesla factory) ಸ್ಥಾಪನೆಗೆ ಮುಂದಾಗುತ್ತಾ ಪ್ರಭಾವ ಬೀರಲಿದ್ದಾರಾ ಕುಮಾರಸ್ವಾಮಿ? ಮಾಧ್ಯಮದವರ ಈ ಪ್ರಶ್ನೆಯನ್ನು ಎಚ್​​ಡಿಕೆ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ನಿನ್ನೆ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಅವರು, ತಾನು ಸ್ವಾರ್ಥ ವ್ಯಕ್ತಿಯಲ್ಲ. ತಾನು ಸಚಿವರಾಗಿರುವುದು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಎಂದು ಪ್ರತಿಕ್ರಿಯಿಸಿದ್ದಾರೆ.

‘ನನ್ನ ಕಾಳಜಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇಡೀ ದೇಶದ ಪ್ರಗತಿ ನನಗೆ ಮುಖ್ಯ. ಅದರ ಪ್ರಕಾರವಾಗಿ ನಾವು ಕೆಲಸ ಮಾಡುತ್ತೇವೆ. ನಾನು ಸ್ವಾರ್ಥ ವ್ಯಕ್ತಿ ಅಲಲ್. ದೇಶದ ಪ್ರಗತಿಗೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ,’ ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಕುಮಾರಸ್ವಾಮಿ ಹೇಳಿದ್ದಾರೆ.

ಇಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆ ಭಾರತಕ್ಕೆ ಬರುವುದು ಇನ್ನೂ ಪೂರ್ಣವಾಗಿ ಖಾತ್ರಿಯಾಗಿಲ್ಲ. ಭಾರತದಲ್ಲಿ ಯಾವುದೇ ಕಾರು ಮಾರಾಟವಾಗಬೇಕಾದರೆ ಸ್ಥಳೀಯವಾಗಿ ಅದರ ಉತ್ಪಾದನೆ ಆಗಬೇಕು. ಆಮದು ಮಾಡಿಕೊಳ್ಳುವ ಕಾರುಗಳಿಗೆ ಭಾರೀ ಪ್ರಮಾಣದ ಆಮದು ಶುಲ್ಕ ವಿಧಿಸಲಾಗುತ್ತದೆ. ಅಮೆರಿಕ, ಚೀನಾದಲ್ಲಿ ಟೆಸ್ಲಾಗೆ ದೊಡ್ಡ ಮಾರುಕಟ್ಟೆ ಇದ್ದು, ಈಗ ಭಾರತದ ಮೇಲೆ ಇಲಾನ್ ಮಸ್ಕ್ ಕಣ್ಣಿಟ್ಟಿದ್ದಾರೆ. ಭಾರತದಲ್ಲಿ ಈಗೀಗ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಬೆಳೆವಣಿಗೆ ಹೊಂದುತ್ತಿದೆ. ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಯಾವುದೇ ಎಲೆಕ್ಟ್ರಿಕ್ ಕಾರು ತಯಾರಕರಿಗೆ ಇದು ಸಕಾಲವಾಗಿದೆ.

ಇದನ್ನೂ ಓದಿ: ಕೇಂದ್ರದಲ್ಲಿ ಕುಮಾರಸ್ವಾಮಿ ಟೀಮ್​ನಲ್ಲಿರೋದು ಯಾರು? ಶೋಭಾ, ಸೋಮಣ್ಣಗೆ ಯಾರ ಅಡಿಯಲ್ಲಿ ಕೆಲಸ?

ಇಲಾನ್ ಮಸ್ಕ್ ಅವರು ಮುಂದಿನ ಕೆಲ ವರ್ಷದೊಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಕಾ ಘಟಕ ಸ್ಥಾಪಿಸುವ ಸಾಧ್ಯತೆ ಇದೆ. ಟೆಸ್ಲಾದಿಂದ ಹೂಡಿಕೆ ಆಗುವುದು ಖಚಿತವಾದಲ್ಲಿ ಅಲ್ಲಿಯವರೆಗೆ ಕಾರು ಆಮದು ಶುಲ್ಕದಲ್ಲಿ ಒಂದಿಷ್ಟು ವಿನಾಯಿತಿಯನ್ನು ಕೊಡಲು ಸರ್ಕಾರ ಸಿದ್ಧ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Wed, 12 June 24

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ