ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Prices) ಇಳಿಕೆಯ ಹಾದಿ ಮುಂದುವರಿದಿದೆ. ಭಾರತದ ಎಲ್ಲೆಡೆ ಈ ಎರಡೂ ಲೋಹಗಳ ಬೆಲೆ ಇಳಿಕೆ ಸತತವಾಗಿ ನಡೆಯುತ್ತಿದೆ. ಅಮೆರಿಕದ ಬಡ್ಡಿ ದರ ಏರಿಕೆ ಸಾಧ್ಯತೆಯ ಪರಿಣಾಮ ಚಿನ್ನದ ಮೇಲೆ ಆಗುತ್ತಿದೆ. ಭಾರತದಲ್ಲಿ ಚಿನ್ನ ಪ್ರಿಯರಿಗೆ ಈಗ ಸುಗ್ಗಿಯಂತಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಆಗುವಷ್ಟರಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸಕಾಲವಾಗಿರಬಹುದು. ಅಮೆರಿಕ, ದುಬೈನಲ್ಲಿ ಚಿನ್ನದ ಬೆಲೆ 49,000 ರೂ ಒಳಗೆ ಬಂದಿವೆ. ಸಿಂಗಾಪುರ, ಕುವೇತ್ನಲ್ಲಿ ಬೆಲೆ 49 ಸಾವಿರ ರೂ ಒಳಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,200 ರುಪಾಯಿಯಲ್ಲಿ ಇದೆ.
ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: Arecanut Price 22 June: ಇಂದಿನ ಅಡಿಕೆ ಧಾರಣೆ, ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ರೇಟ್ ಹೀಗಿದೆ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: Carbon Credit: ಇನ್ನೆರಡು ವಾರದಲ್ಲಿ ಕಾರ್ಬನ್ ಕ್ರೆಡಿಟ್ ವಹಿವಾಟು ವ್ಯವಸ್ಥೆ ರೂಪಿಸಲಿದೆ ಸರ್ಕಾರ; ಏನಿದು ಕಾರ್ಬನ್ ಕ್ರೆಡಿಟ್?
(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ