Gold Rate Today Bangalore: 22 ಕ್ಯಾರಟ್ ಚಿನ್ನದ ಬೆಲೆ 8,920 ರೂ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2025 April 20th: ಈ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಾವ ವ್ಯತ್ಯಯವನ್ನೂ ಕಂಡಿಲ್ಲ. ಶುಕ್ರವಾರ ಇದ್ದ ಬೆಲೆಯೇ ಮುಂದುವರಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 8,920 ರೂನಷ್ಟಿದ್ದರೆ, ಅಪರಂಜಿ ಚಿನ್ನದ ಬೆಲೆ 9,758 ರೂ ಇದೆ. ಬೆಳ್ಳಿ ಬೆಲೆ ಗ್ರಾಮ್​​ಗೆ 100 ರೂ ಮತ್ತು 110 ರೂನಲ್ಲಿ ಮುಂದುವರಿದಿದೆ.

Gold Rate Today Bangalore: 22 ಕ್ಯಾರಟ್ ಚಿನ್ನದ ಬೆಲೆ 8,920 ರೂ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ

Updated on: Apr 20, 2025 | 9:49 AM

ಬೆಂಗಳೂರು, ಏಪ್ರಿಲ್ 20: ಸತತವಾಗಿ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಸದ್ಯ ವಿಶ್ರಾಂತಿ ಪಡೆದಿದೆ. ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ (Gold and Silver rates) ಯಾವ ವ್ಯತ್ಯಯವೂ ಆಗಿಲ್ಲ. ಅಮೆರಿಕ ಮೊದಲಾದ ಕೆಲ ಮಾರುಕಟ್ಟೆಗಳಲ್ಲಿ ಮಾತ್ರ ಚಿನ್ನದ ಬೆಲೆ ಅಲ್ಪ ಹೆಚ್ಚಳ ಕಂಡಿದೆ. ಭಾರತದಲ್ಲಿ ಶನಿವಾರ ಮತ್ತು ಭಾನುವಾರ ಅದೇ ಬೆಲೆ ಮುಂದುವರಿದಿದೆ. ಆದರೆ, ಏಪ್ರಿಲ್ 8ರಂದು 8,225 ರೂಗೆ ಕುಸಿದಿದ್ದ ಆಭರಣ ಚಿನ್ನದ ಬೆಲೆ ಈಗ 8,920 ರೂಗೆ ಏರಿರುವುದು ಗಮನಾರ್ಹ. ಕೆಲವೇ ದಿನಗಳ ಅಂತರದಲ್ಲಿ ಬೆಲೆ ಬರೋಬ್ಬರಿ 700 ರೂಗಳಷ್ಟು ಹೆಚ್ಚಳ ಆಗಿದೆ. ಆದರೆ, ಬೆಳ್ಳಿ ಬೆಲೆ ತನ್ನ ಗರಿಷ್ಠ ಮಟ್ಟದಿಂದ ಕೆಳಗೇ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 89,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 97,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 89,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 20ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 97,580 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,190 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 97,580 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 89,450 ರೂ
  • ಚೆನ್ನೈ: 89,450 ರೂ
  • ಮುಂಬೈ: 89,450 ರೂ
  • ದೆಹಲಿ: 89,600 ರೂ
  • ಕೋಲ್ಕತಾ: 89,450 ರೂ
  • ಕೇರಳ: 89,450 ರೂ
  • ಅಹ್ಮದಾಬಾದ್: 89,500 ರೂ
  • ಜೈಪುರ್: 89,600 ರೂ
  • ಲಕ್ನೋ: 89,600 ರೂ
  • ಭುವನೇಶ್ವರ್: 89,450 ರೂ

ಇದನ್ನೂ ಓದಿ:

ಇದನ್ನೂ ಓದಿ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,650 ರಿಂಗಿಟ್ (89,940 ರುಪಾಯಿ)
  • ದುಬೈ: 3,712.50 ಡಿರಾಮ್ (86,300 ರುಪಾಯಿ)
  • ಅಮೆರಿಕ: 1,005 ಡಾಲರ್ (85,800 ರುಪಾಯಿ)
  • ಸಿಂಗಾಪುರ: 1,362 ಸಿಂಗಾಪುರ್ ಡಾಲರ್ (88,700 ರುಪಾಯಿ)
  • ಕತಾರ್: 3,735 ಕತಾರಿ ರಿಯಾಲ್ (87,490 ರೂ)
  • ಸೌದಿ ಅರೇಬಿಯಾ: 3,780 ಸೌದಿ ರಿಯಾಲ್ (86,010 ರುಪಾಯಿ)
  • ಓಮನ್: 394 ಒಮಾನಿ ರಿಯಾಲ್ (87,360 ರುಪಾಯಿ)
  • ಕುವೇತ್: 304.10 ಕುವೇತಿ ದಿನಾರ್ (84,690 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,000 ರೂ
  • ಚೆನ್ನೈ: 11,000 ರೂ
  • ಮುಂಬೈ: 10,000 ರೂ
  • ದೆಹಲಿ: 10,000 ರೂ
  • ಕೋಲ್ಕತಾ: 10,000 ರೂ
  • ಕೇರಳ: 11,000 ರೂ
  • ಅಹ್ಮದಾಬಾದ್: 10,000 ರೂ
  • ಜೈಪುರ್: 10,000 ರೂ
  • ಲಕ್ನೋ: 10,000 ರೂ
  • ಭುವನೇಶ್ವರ್: 11,000 ರೂ
  • ಪುಣೆ: 10,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us