Gold Rate Today Bangalore: ಕಳೆದ 10 ದಿನದಲ್ಲಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1,300 ರೂ ಇಳಿಕೆ; ಇವತ್ತಿನ ದರಪಟ್ಟಿ

Bullion Market 2025 March 2nd: ಚಿನ್ನದ ಬೆಲೆಯ ಸತತ ಇಳಿಕೆ ಈ ವಾರಾಂತ್ಯದವರೆಗೂ ಆಗಿದೆ. ಕಳೆದ 10 ದಿನದಲ್ಲಿ 130 ರೂನಷ್ಟು ಬೆಲೆ ಇಳಿಕೆಯಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲ 7,940 ರೂ ಇದೆ. 18 ಕ್ಯಾರಟ್ ಚಿನ್ನದ ಬೆಲೆ 6,497 ರೂಗೆ ಇಳಿದಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ 97 ರೂನಲ್ಲಿ ಮುಂದುವರಿದಿದೆ. ಚೆನ್ನೈ ಮೊದಲಾದೆಡೆ 105 ರೂ ಇದೆ.

Gold Rate Today Bangalore: ಕಳೆದ 10 ದಿನದಲ್ಲಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1,300 ರೂ ಇಳಿಕೆ; ಇವತ್ತಿನ ದರಪಟ್ಟಿ
ಚಿನ್ನ

Updated on: Mar 02, 2025 | 9:47 AM

ಬೆಂಗಳೂರು, ಮಾರ್ಚ್ 02: ಕಳೆದ ವಾರ ಸಾಕಷ್ಟು ಏರಿಕೆ ಕಂಡಿದ್ದ ಚಿನ್ನದ ಬೆಲೆ ಈ ವಾರ ನಾಲ್ಕು ದಿನ ಸತತ ಇಳಿಕೆ ಕಂಡಿದೆ. ವಾರಾಂತ್ಯದಲ್ಲೂ ಚಿನ್ನದ ಬೆಲೆ ಗ್ರಾಮ್​ಗೆ 20 ರೂನಷ್ಟು ಕಡಿಮೆ ಆಗಿದೆ. ಹತ್ತು ದಿನಗಳ ಹಿಂದಿನ ಬೆಲೆಗೆ ಹೋಲಿಸಿದರೆ ಒಂದು ಗ್ರಾಮ್ ಚಿನ್ನದ ಬೆಲೆ 130 ರೂನಷ್ಟು ಕಡಿಮೆ ಆಗಿದೆ. ಫೆಬ್ರುವರಿ 20ರಂದು ಆಭರಣ ಚಿನ್ನದ ಬೆಲೆ 8,070 ರೂ ಇತ್ತು. ಈಗ ಅದು 7,940 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 8,662 ರೂಗೆ ಇಳಿದಿದೆ. 18 ಕ್ಯಾರಟ್​ನ ಚಿನ್ನದ ಬೆಲೆ 6,500 ರೂ ಗಡಿಯೊಳಗೆ ಬಂದಿದೆ. ಚಿನ್ನದ ಬೆಲೆ ಏರಿಳಿತ ತೀವ್ರವಾಗುತ್ತಿದ್ದರೂ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 97 ರೂನಲ್ಲಿ ಮುಂದುವರಿದಿದೆ. ಮುಂಬೈ ಮೊದಲಾದ ಕಡೆಯೂ ಇದೇ ಬೆಲೆ ಇದೆ. ಚೆನ್ನೈ ಇತ್ಯಾದಿ ಕಡೆ ಬೆಳ್ಳಿ ಬೆಲೆ 105 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 79,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 86,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 79,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,700 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 02ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 86,620 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 64,970 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 86,620 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 79,400 ರೂ
  • ಚೆನ್ನೈ: 79,400 ರೂ
  • ಮುಂಬೈ: 79,400 ರೂ
  • ದೆಹಲಿ: 79,550 ರೂ
  • ಕೋಲ್ಕತಾ: 79,400 ರೂ
  • ಕೇರಳ: 79,400 ರೂ
  • ಅಹ್ಮದಾಬಾದ್: 79,450 ರೂ
  • ಜೈಪುರ್: 79,550 ರೂ
  • ಲಕ್ನೋ: 79,550 ರೂ
  • ಭುವನೇಶ್ವರ್: 79,400 ರೂ

ಇದನ್ನೂ ಓದಿ: ಆ್ಯಪಲ್ ಉತ್ಪನ್ನಗಳಿಗಾಗಿ, ಚೀನಾ, ವಿಯೆಟ್ನಾಂಗೆ ಭಾರತದಿಂದ ಎಲೆಕ್ಟ್ರಾನಿಕ್ ಬಿಡಿಭಾಗಗಳ ಪೂರೈಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,070 ರಿಂಗಿಟ್ (79,790 ರುಪಾಯಿ)
  • ದುಬೈ: 3,205 ಡಿರಾಮ್ (76,340 ರುಪಾಯಿ)
  • ಅಮೆರಿಕ: 870 ಡಾಲರ್ (76,100 ರುಪಾಯಿ)
  • ಸಿಂಗಾಪುರ: 1,204 ಸಿಂಗಾಪುರ್ ಡಾಲರ್ (77,920 ರುಪಾಯಿ)
  • ಕತಾರ್: 3,230 ಕತಾರಿ ರಿಯಾಲ್ (77,510 ರೂ)
  • ಸೌದಿ ಅರೇಬಿಯಾ: 3,260 ಸೌದಿ ರಿಯಾಲ್ (76,030 ರುಪಾಯಿ)
  • ಓಮನ್: 340 ಒಮಾನಿ ರಿಯಾಲ್ (77,250 ರುಪಾಯಿ)
  • ಕುವೇತ್: 262.50 ಕುವೇತಿ ದಿನಾರ್ (74,340 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,700 ರೂ
  • ಚೆನ್ನೈ: 10,500 ರೂ
  • ಮುಂಬೈ: 9,700 ರೂ
  • ದೆಹಲಿ: 9,700 ರೂ
  • ಕೋಲ್ಕತಾ: 9,700 ರೂ
  • ಕೇರಳ: 10,500 ರೂ
  • ಅಹ್ಮದಾಬಾದ್: 9,700 ರೂ
  • ಜೈಪುರ್: 9,700 ರೂ
  • ಲಕ್ನೋ: 9,700 ರೂ
  • ಭುವನೇಶ್ವರ್: 10,500 ರೂ
  • ಪುಣೆ: 9,700

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us