Gold Silver Price on 14th November: ಚಿನ್ನದ ಬೆಲೆಯಲ್ಲಿ ಮುಂದುವರಿದ ಕುಸಿತ; ಹತ್ತು ದಿನದಲ್ಲಿ ಕಿಲೋಗೆ 4.35 ಲಕ್ಷ ರೂನಷ್ಟು ಬೆಲೆ ಇಳಿಕೆ
Bullion Market 2024 November 14th: ನಿನ್ನೆ ಗ್ರಾಮ್ಗೆ 175 ರೂನಷ್ಟು ಇಳಿದಿದ್ದ ಚಿನ್ನದ ಬೆಲೆ ಇಂದು 110 ರೂ ಕಡಿಮೆ ಆಗಿದೆ. ಎರಡು ದಿನದಲ್ಲಿ ಬರೋಬ್ಬರಿ 300 ರೂ ಸಮೀಪದಷ್ಟು ಬೆಲೆ ಇಳಿಕೆ ಆಗಿದೆ. ಹತ್ತು ದಿನದಲ್ಲಿ ಗ್ರಾಮ್ಗೆ 435 ರೂನಷ್ಟು ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆ ಬಹಳ ದಿನದ ಬಳಿಕ 90 ರೂಗಿಂತ ಒಳಗೆ ಬಂದಿದೆ.
ಬೆಂಗಳೂರು, ನವೆಂಬರ್ 14: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿದಷ್ಟೇ ವೇಗದಲ್ಲಿ ಝರ್ರನೆ ಜಾರುತ್ತಿವೆ. ಈ ಎರಡೂ ಲೋಹಗಳ ಬೆಲೆ ಭಾರೀ ಮೊತ್ತದಷ್ಟು ಇಳಿಕೆ ಆಗುತ್ತಿದೆ. ಚಿನ್ನದ ಬೆಲೆ ಇಂದು ಗುರುವಾರ ಗ್ರಾಮ್ಗೆ 110 ರೂನಷ್ಟು ಕುಸಿತ ಕಂಡಿದೆ. ಅಪರಂಜಿ ಚಿನ್ನದ ಬೆಲೆ 120 ರೂನಷ್ಟು ಇಳಿದಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 435 ರೂನಷ್ಟು ಕುಸಿತ ಕಂಡಿದೆ. ಅಂದರೆ, ಕಿಲೋಗೆ 4 ಲಕ್ಷ ರೂಗೂ ಅಧಿಕ ಮೊತ್ತದಷ್ಟು ಬೆಲೆ ಕಡಿಮೆ ಆಗಿದೆ. ಬೆಳ್ಳಿ ಬೆಲೆಯೂ ಕುಸಿತದದಲ್ಲಿ ಚಿನ್ನಕ್ಕೆ ಪೈಪೋಟಿ ನೀಡುತ್ತಿದೆ. ಚೆನ್ನೈ ಮೊದಲಾದ ಕೆಲ ನಗರಗಳಲ್ಲಿ ಬಹಳ ದಿನಗಳ ಬಳಿಕ ಮೊದಲ ಬಾರಿಗೆ 100 ರೂ ಒಳಗೆ ಇಳಿದಿದೆ. ಬೆಂಗಳೂರಿನಲ್ಲೂ ಬೆಲೆ 90 ರೂಗಿಂತ ಒಳಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 69,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 75,650 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 69,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,950 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 14ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,650 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,740 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,650 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 69,350 ರೂ
- ಚೆನ್ನೈ: 69,350 ರೂ
- ಮುಂಬೈ: 69,350 ರೂ
- ದೆಹಲಿ: 69,500 ರೂ
- ಕೋಲ್ಕತಾ: 69,350 ರೂ
- ಕೇರಳ: 69,350 ರೂ
- ಅಹ್ಮದಾಬಾದ್: 69,400 ರೂ
- ಜೈಪುರ್: 69,500 ರೂ
- ಲಕ್ನೋ: 69,500 ರೂ
- ಭುವನೇಶ್ವರ್: 69,350 ರೂ
ಇದನ್ನೂ ಓದಿ: Petrol Diesel Price on November 14: ಮಹಾರಾಷ್ಟ್ರ, ಬಿಹಾರದಲ್ಲಿ ಪೆಟ್ರೋಲ್ ದರ ಇಳಿಕೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,680 ರಿಂಗಿಟ್ (69,200 ರುಪಾಯಿ)
- ದುಬೈ: 3,070 ಡಿರಾಮ್ (70,550 ರುಪಾಯಿ)
- ಅಮೆರಿಕ: 820 ಡಾಲರ್ (69,210 ರುಪಾಯಿ)
- ಸಿಂಗಾಪುರ: 1,109 ಸಿಂಗಾಪುರ್ ಡಾಲರ್ (69,560 ರುಪಾಯಿ)
- ಕತಾರ್: 3,080 ಕತಾರಿ ರಿಯಾಲ್ (71,310 ರೂ)
- ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,290 ರುಪಾಯಿ)
- ಓಮನ್: 324.50 ಒಮಾನಿ ರಿಯಾಲ್ (71,140 ರುಪಾಯಿ)
- ಕುವೇತ್: 248.30 ಕುವೇತಿ ದಿನಾರ್ (68,070 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,950 ರೂ
- ಚೆನ್ನೈ: 9,900 ರೂ
- ಮುಂಬೈ: 8,950 ರೂ
- ದೆಹಲಿ: 8,950 ರೂ
- ಕೋಲ್ಕತಾ: 8,950 ರೂ
- ಕೇರಳ: 9,900 ರೂ
- ಅಹ್ಮದಾಬಾದ್: 8,950 ರೂ
- ಜೈಪುರ್: 8,950 ರೂ
- ಲಕ್ನೋ: 8,950 ರೂ
- ಭುವನೇಶ್ವರ್: 9,900 ರೂ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ