Gold Silver Price on 18th September: ಚಿನ್ನ, ಬೆಳ್ಳಿ ಬೆಲೆ ಸತತ ಇಳಿಕೆ; ಅಮೆರಿಕದ ಬಡ್ಡಿದರ ಪರಿಷ್ಕರಣೆಯಾದರೆ ಏನಾಗುತ್ತೆ?
Bullion Market 2024 September 18th: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಇಳಿಕೆ ಆಗಿವೆ. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿದರ ಎಷ್ಟು ಇಳಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿ ಮಾರುಕಟ್ಟೆ ಇದೆ. ಇಂದು ಆಭರಣ ಚಿನ್ನದ ಬೆಲೆ 6,864 ರೂಗೆ ಇಳಿದಿದೆ. ಬೆಳ್ಳಿ ಬೆಲೆ 86 ರೂನಿಂದ 96 ರೂವರೆಗೂ ಇದೆ.
ಬೆಂಗಳೂರು, ಸೆಪ್ಟಂಬರ್ 18: ಚಿನ್ನದ ಬೆಲೆ ಭಾರತದಲ್ಲಿ ಸತತ ಎರಡನೇ ದಿನ ಇಳಿಕೆಯಾಗಿದೆ. ನಿನ್ನೆ ಗ್ರಾಮ್ಗೆ 15ರಿಂದ 16ರೂನಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಒಂದು ರೂನಷ್ಟು ಅಗ್ಗಗೊಂಡಿದೆ. ಬೆಳ್ಳಿ ಬೆಲೆಯೂ ಇಂದು ಗ್ರಾಮ್ಗೆ ಒಂದು ರೂನಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲಿ ನಿನ್ನೆ ಚಿನ್ನದ ಬೆಲೆ ಒಂದಷ್ಟು ಏರಿಕೆ ಆಗಿತ್ತು. ಇವತ್ತು ಬಹುತೇಕ ತಟಸ್ಥವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಇಂದು ಬಡ್ಡಿದರ ಎಷ್ಟು ಕಡಿತಗೊಳಿಸಬಹುದು ಎನ್ನುವ ಕುತೂಹಲ ಹೂಡಿಕೆದಾರರಲ್ಲಿ ಇದೆ. ಇದೇ ನಿರೀಕ್ಷೆಯಲ್ಲಿ ಚಿನಿವಾರಪೇಟೆಯಲ್ಲಿ ಎಂದಿನಂತೆ ಇಂದು ವ್ಯವಹಾರ ಗೌಣವಾಗಿದೆ. ಇಂದು ರಾತ್ರಿ ಫೆಡರಲ್ ರಿಸರ್ವ್ ತನ್ನ ದರ ಪರಿಷ್ಕರಣೆ ನಿರ್ಧಾರ ಪ್ರಕಟಸಲಿದೆ. 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ಆಗುವ ನಿರೀಕ್ಷೆ ಕಳೆದ ಒಂದು ತಿಂಗಳಿಂದಲೂ ಇದೆ. ಒಂದು ವೇಳೆ 50 ಮೂಲಾಂಕಗಳಷ್ಟು ದರ ಇಳಿಕೆಯಾದರೆ ಚಿನಿವಾರ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 68,640 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 68,640 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,600 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 18ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,640 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,880 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 930 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,640 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,880 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 68,640 ರೂ
- ಚೆನ್ನೈ: 68,640 ರೂ
- ಮುಂಬೈ: 68,640 ರೂ
- ದೆಹಲಿ: 68,790 ರೂ
- ಕೋಲ್ಕತಾ: 68,640 ರೂ
- ಕೇರಳ: 68,640 ರೂ
- ಅಹ್ಮದಾಬಾದ್: 68,690 ರೂ
- ಜೈಪುರ್: 68,790 ರೂ
- ಲಕ್ನೋ: 68,790 ರೂ
- ಭುವನೇಶ್ವರ್: 68,640 ರೂ
ಇದನ್ನೂ ಓದಿ: Petrol Diesel Price on September 18: ಬಿಹಾರ, ಛತ್ತೀಸ್ಗಢದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,510 ರಿಂಗಿಟ್ (69,250 ರುಪಾಯಿ)
- ದುಬೈ: 2,887.50 ಡಿರಾಮ್ (65,610 ರುಪಾಯಿ)
- ಅಮೆರಿಕ: 785 ಡಾಲರ್ (65,760 ರುಪಾಯಿ)
- ಸಿಂಗಾಪುರ: 1,045 ಸಿಂಗಾಪುರ್ ಡಾಲರ್ (67,640 ರುಪಾಯಿ)
- ಕತಾರ್: 2,925 ಕತಾರಿ ರಿಯಾಲ್ (67,220 ರೂ)
- ಸೌದಿ ಅರೇಬಿಯಾ: 2,940 ಸೌದಿ ರಿಯಾಲ್ (65,620 ರುಪಾಯಿ)
- ಓಮನ್: 308 ಒಮಾನಿ ರಿಯಾಲ್ (67,020 ರುಪಾಯಿ)
- ಕುವೇತ್: 232.80 ಕುವೇತಿ ದಿನಾರ್ (63,940 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,600 ರೂ
- ಚೆನ್ನೈ: 9,600 ರೂ
- ಮುಂಬೈ: 9,100 ರೂ
- ದೆಹಲಿ: 9,100 ರೂ
- ಕೋಲ್ಕತಾ: 9,100 ರೂ
- ಕೇರಳ: 9,600 ರೂ
- ಅಹ್ಮದಾಬಾದ್: 9,100 ರೂ
- ಜೈಪುರ್: 9,100 ರೂ
- ಲಕ್ನೋ: 9,100 ರೂ
- ಭುವನೇಶ್ವರ್: 9,600 ರೂ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ