ಚಿನ್ನ
Image Credit source: PTI
ಮುಖ್ಯಾಂಶಗಳು
- ಚಿನ್ನದ ಬೆಲೆ ಗುರುವಾರ ಗ್ರಾಮ್ಗೆ 25 ರೂ ಕಡಿಮೆಗೊಂಡಿದೆ.
- 22 ಕ್ಯಾರಟ್ ಚಿನ್ನದ ಬೆಲೆ 13,160 ರೂನಿಂದ 13,135 ರೂಗೆ ಇಳಿದಿದೆ.
- ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 235 ರೂ ಇದೆ.
ನವದೆಹಲಿ, ಜುಲೈ 16: ಚಿನ್ನದ ಬೆಲೆ ಹೊಯ್ದಾಟದ ಹಂತಕ್ಕೆ ಬಂದಿರುವಂತಿದೆ. ಮೊನ್ನೆ 140 ರೂ ಕಡಿಮೆಗೊಂಡು, ನಿನ್ನೆ 70 ರೂ ಹೆಚ್ಚಿದ್ದ ಬಂಗಾರದ ದರ (Gold Price) ಇವತ್ತು 25 ರೂ ತಗ್ಗಿದೆ. ವಿದೇಶಗಳಲ್ಲೂ ಇದರ ಬೆಲೆಯ ತೂಗುಯ್ಯಾಲೆ ಮುಂದುವರಿದಿದೆ. ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಕಳೆದ ಕೆಲ ದಿನಗಳಿಂದ ಇರುವ 235 ರು ಬೆಲೆಯೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,31,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,43,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,31,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 16ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,329 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,135 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,747 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,329 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,135 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,135 ರೂ
- ಚೆನ್ನೈ: 13,150 ರೂ
- ಮುಂಬೈ: 13,135 ರೂ
- ದೆಹಲಿ: 13,150 ರೂ
- ಕೋಲ್ಕತಾ: 13,135 ರೂ
- ಕೇರಳ: 13,135 ರೂ
- ಅಹ್ಮದಾಬಾದ್: 13,140 ರೂ
- ಜೈಪುರ್: 13,150 ರೂ
- ಲಕ್ನೋ: 13,150 ರೂ
- ಭುವನೇಶ್ವರ್: 13,135 ರೂ
ಇದನ್ನೂ ಓದಿ: ಹೊಸ ಐಆರ್ಸಿಟಿಸಿ ವೆಬ್ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 542 ರಿಂಗಿಟ್ (12,814 ರುಪಾಯಿ)
- ದುಬೈ: 486 ಡಿರಾಮ್ (12,745 ರುಪಾಯಿ)
- ಅಮೆರಿಕ: 133.50 ಡಾಲರ್ (12,857 ರುಪಾಯಿ)
- ಸಿಂಗಾಪುರ: 177.40 ಸಿಂಗಾಪುರ್ ಡಾಲರ್ (13,259 ರುಪಾಯಿ)
- ಕತಾರ್: 491.50 ಕತಾರಿ ರಿಯಾಲ್ (12,987 ರೂ)
- ಸೌದಿ ಅರೇಬಿಯಾ: 504 ಸೌದಿ ರಿಯಾಲ್ (12,924 ರುಪಾಯಿ)
- ಓಮನ್: 51.60 ಒಮಾನಿ ರಿಯಾಲ್ (12,907 ರುಪಾಯಿ)
- ಕುವೇತ್: 40.93 ಕುವೇತಿ ದಿನಾರ್ (12,820 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 235 ರೂ
- ಚೆನ್ನೈ: 240 ರೂ
- ಮುಂಬೈ: 235 ರೂ
- ದೆಹಲಿ: 235 ರೂ
- ಕೋಲ್ಕತಾ: 235 ರೂ
- ಕೇರಳ: 240 ರೂ
- ಅಹ್ಮದಾಬಾದ್: 235 ರೂ
- ಜೈಪುರ್: 235 ರೂ
- ಲಕ್ನೋ: 235 ರೂ
- ಭುವನೇಶ್ವರ್: 240 ರೂ
- ಪುಣೆ: 235
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ