Gold Rates 17 November: ಮತ್ತೂ ಕುಸಿದ ಚಿನ್ನದ ಬೆಲೆ; 12 ದಿನದಲ್ಲಿ 915 ರೂ ಇಳಿಕೆ

Gold Price 17 November 2026: ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿದೆ. ಇಂದು ಮಂಗಳವಾರ ಬಂಗಾರದ ದರ ಗ್ರಾಮ್​ಗೆ 70 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 12,540 ರೂನಿಂದ 12,470 ರೂಗೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 13,604 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 190 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 190 ರೂ ಇದೆ.

Gold Rates 17 November: ಮತ್ತೂ ಕುಸಿದ ಚಿನ್ನದ ಬೆಲೆ; 12 ದಿನದಲ್ಲಿ 915 ರೂ ಇಳಿಕೆ
ಚಿನ್ನ
Image Credit source: Getty Images

Updated on: Nov 17, 2026 | 10:49 AM

ನವದೆಹಲಿ, ನವೆಂಬರ್ 17: ಬಂಗಾರದ ಆಭರಣ ಮಾಡಿಸಿಕೊಳ್ಳಬೇಕೆನ್ನುವವರಿಗೆ ಸುಗ್ಗಿ ಕಾಲ ಬಂದಂತಿದೆ. ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿದೆ. ಇವತ್ತು ಮಂಗಳವಾರ ಇದರ ಬೆಲೆ ಗ್ರಾಮ್​ಗೆ 70 ರೂ ಕಡಿಮೆಗೊಂಡಿದೆ. ಕಳೆದ 10-12 ದಿನಗಳಿಂದ ಬಂಗಾರದ ದರ 915 ರೂಗಳಷ್ಟು ಕುಸಿತವಾಗಿದೆ. ಆಭರಣ ಚಿನ್ನದ ಬೆಲೆ 12,500 ರೂ ಗಡಿಯೊಳಗೆ ಬಂದಿದೆ. ಇಂದು ಸೋಮವಾರ ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ತುಸು ಏರಿಕೆ ಆಗಿದೆ. ಅದು ಬಿಟ್ಟರೆ ಎಂಸಿಎಕ್ಸ್, ಫ್ಯೂಚರ್ಸ್ ಇತ್ಯಾದಿಯಲ್ಲಿ ಹಳದಿ ಲೋಹದ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,24,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,36,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,24,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 19,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 19,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,604
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,470
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,203
  • ಬೆಳ್ಳಿ ಬೆಲೆ 1 ಗ್ರಾಂಗೆ: 190 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,470 ರೂ
  • ಚೆನ್ನೈ: 12,470 ರೂ
  • ಮುಂಬೈ: 12,470 ರೂ
  • ದೆಹಲಿ: 12,485
  • ಕೋಲ್ಕತಾ: 12,470 ರೂ
  • ಕೇರಳ: 12,470 ರೂ
  • ಅಹ್ಮದಾಬಾದ್: 12,475 ರೂ
  • ಜೈಪುರ್: 12,485
  • ಲಕ್ನೋ: 12,485
  • ಭುವನೇಶ್ವರ್: 12,470 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 13,503 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 1699 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ 1 ಗ್ರಾಮ್​ಗೆ 13,417 ರೂ
  • ಬೆಳ್ಳಿ 1 ಗ್ರಾಮ್​ಗೆ 170 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 124.59 ಡಾಲರ್ (11,669 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.529 ಡಾಲರ್ (143 ರುಪಾಯಿ)

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಭಾರತದ ನಿರುದ್ಯೋಗ ದರ ಶೇ. 4.9ಕ್ಕೆ ಇಳಿಕೆ; ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ

Loading...

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 13,604 ರುಪಾಯಿ
  • ಮಲೇಷ್ಯಾ: 521 ರಿಂಗಿಟ್ (11,932 ರುಪಾಯಿ)
  • ದುಬೈ: 466 ಡಿರಾಮ್ (11,888 ರುಪಾಯಿ)
  • ಅಮೆರಿಕ: 127 ಡಾಲರ್ (11,900 ರುಪಾಯಿ)
  • ಸಿಂಗಾಪುರ: 170.30 ಸಿಂಗಾಪುರ್ ಡಾಲರ್ (12,386 ರುಪಾಯಿ)
  • ಕತಾರ್: 468.50 ಕತಾರಿ ರಿಯಾಲ್ (12,042 ರೂ)
  • ಸೌದಿ ಅರೇಬಿಯಾ: 481 ಸೌದಿ ರಿಯಾಲ್ (12,010 ರುಪಾಯಿ)
  • ಓಮನ್: 49.55 ಒಮಾನಿ ರಿಯಾಲ್ (12,058 ರುಪಾಯಿ)
  • ಕುವೇತ್: 39.23 ಕುವೇತಿ ದಿನಾರ್ (11,904 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 190 ರೂ
  • ಚೆನ್ನೈ: 190 ರೂ
  • ಮುಂಬೈ: 190 ರೂ
  • ದೆಹಲಿ: 190 ರೂ
  • ಕೋಲ್ಕತಾ: 190 ರೂ
  • ಕೇರಳ: 190 ರೂ
  • ಅಹ್ಮದಾಬಾದ್: 190 ರೂ
  • ಜೈಪುರ್: 190 ರೂ
  • ಲಕ್ನೋ: 190 ರೂ
  • ಭುವನೇಶ್ವರ್: 190 ರೂ
  • ಪುಣೆ: 190

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us