Gold Rates 26 October: ಚಿನ್ನದ ಬೆಲೆ ಸತತ ಏರಿಕೆ; ಎರಡು ದಿನದಲ್ಲಿ 25 ರೂ ಹೆಚ್ಚಳ

Gold Price 26 October 2026: ಚಿನ್ನದ ಬೆಲೆ ಸೋಮವಾರ ಗ್ರಾಮ್​ಗೆ 15 ರೂ ಏರಿದೆ. ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಇಲ್ಲ. 22 ಕ್ಯಾರಟ್ ಚಿನ್ನದ ಬೆಲೆ 13,070 ರೂನಿಂದ 13,085 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,275 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 220 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 225 ರೂ ಇದೆ.

Gold Rates 26 October: ಚಿನ್ನದ ಬೆಲೆ ಸತತ ಏರಿಕೆ; ಎರಡು ದಿನದಲ್ಲಿ 25 ರೂ ಹೆಚ್ಚಳ
ಚಿನ್ನ
Image Credit source: PTI

Updated on: Oct 26, 2026 | 11:04 AM

ನವದೆಹಲಿ, ಅಕ್ಟೋಬರ್ 26: ಚಿನ್ನದ ಬೆಲೆ ಸತತ ಎರಡನೇ ಬಾರಿ ಏರಿಕೆಯಾಗಿದೆ. ವಾರಾಂತ್ಯದಲ್ಲಿ 10 ರೂ ಹೆಚ್ಚಿದ್ದ ಇದರ ಬೆಲೆ ಇವತ್ತು ಸೋಮವಾರ 15 ರೂ ಏರಿದೆ. ಕಳೆದ ವಾರ ಸತತವಾಗಿ ಇಳಿಮುಖ ಕಂಡಿದ್ದ ಬಂಗಾರದ ದರ ಇವತ್ತು ಹೆಚ್ಚಿನ ದೇಶಗಳಲ್ಲಿ ಅಲ್ಪ ಇಳಿಕೆ ಕಂಡಿದೆ. ಆದರೆ, ಅಂತರರಾಷ್ಟ್ರೀಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತುಸು ಹೆಚ್ಚಳಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 22,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 22,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,275
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,085
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,706
  • ಬೆಳ್ಳಿ ಬೆಲೆ 1 ಗ್ರಾಂಗೆ: 220 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,085 ರೂ
  • ಚೆನ್ನೈ: 13,085 ರೂ
  • ಮುಂಬೈ: 13,085 ರೂ
  • ದೆಹಲಿ: 13,100
  • ಕೋಲ್ಕತಾ: 13,085 ರೂ
  • ಕೇರಳ: 13,085 ರೂ
  • ಅಹ್ಮದಾಬಾದ್: 13,090 ರೂ
  • ಜೈಪುರ್: 13,100
  • ಲಕ್ನೋ: 13,100
  • ಭುವನೇಶ್ವರ್: 13,085 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 129.06 ಡಾಲರ್ (12,267 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.745 ಡಾಲರ್ (166 ರುಪಾಯಿ)

ಇದನ್ನೂ ಓದಿ: ಜಾಗತಿಕ ಆರ್ಥಿಕ ಬಿಕ್ಕಟ್ಟುಗಳ ನಡುವೆಯೂ ಭಾರತದಿಂದ ಉತ್ತಮ ಆರ್ಥಿಕ ಬೆಳವಣಿಗೆ; ಬಲತುಂಬಿರುವ ಮೂಲಾಂಶಗಳು: ಆರ್​ಬಿಐ ಬುಲೆಟಿನ್

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 14,275 ರುಪಾಯಿ
  • ಮಲೇಷ್ಯಾ: 537 ರಿಂಗಿಟ್ (12,483 ರುಪಾಯಿ)
  • ದುಬೈ: 481.50 ಡಿರಾಮ್ (12,449 ರುಪಾಯಿ)
  • ಅಮೆರಿಕ: 132 ಡಾಲರ್ (12,534 ರುಪಾಯಿ)
  • ಸಿಂಗಾಪುರ: 174.60 ಸಿಂಗಾಪುರ್ ಡಾಲರ್ (12,961 ರುಪಾಯಿ)
  • ಕತಾರ್: 482.50 ಕತಾರಿ ರಿಯಾಲ್ (12,569 ರೂ)
  • ಸೌದಿ ಅರೇಬಿಯಾ: 495 ಸೌದಿ ರಿಯಾಲ್ (12,526 ರುಪಾಯಿ)
  • ಓಮನ್: 51.10 ಒಮಾನಿ ರಿಯಾಲ್ (12,603 ರುಪಾಯಿ)
  • ಕುವೇತ್: 40.30 ಕುವೇತಿ ದಿನಾರ್ (12,424 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 220 ರೂ
  • ಚೆನ್ನೈ: 225 ರೂ
  • ಮುಂಬೈ: 220 ರೂ
  • ದೆಹಲಿ: 220 ರೂ
  • ಕೋಲ್ಕತಾ: 220 ರೂ
  • ಕೇರಳ: 225 ರೂ
  • ಅಹ್ಮದಾಬಾದ್: 220 ರೂ
  • ಜೈಪುರ್: 220 ರೂ
  • ಲಕ್ನೋ: 220 ರೂ
  • ಭುವನೇಶ್ವರ್: 225 ರೂ
  • ಪುಣೆ: 220

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us