
ಭಾರತೀಯರಿಗೆ ಚಿನ್ನದ ಮೇಲಿನ ಹೂಡಿಕೆ ಎಂದರೆ ಅಚ್ಚುಮೆಚ್ಚು. ಆದರೆ, ನೀವು ಯಾವ ರೂಪದಲ್ಲಿ ಚಿನ್ನವನ್ನು ಖರೀದಿಸುತ್ತೀರಿ (ಭೌತಿಕ ಚಿನ್ನ, ಡಿಜಿಟಲ್ ಚಿನ್ನ, ಗೋಲ್ಡ್ ಇಟಿಎಫ್ ಅಥವಾ ಸಾವರಿನ್ ಗೋಲ್ಡ್ ಬಾಂಡ್), ಮತ್ತು ಅದನ್ನು ಮಾರಿ ಎಷ್ಟು ಲಾಭ ಗಳಿಸುತ್ತೀರಿ ಎಂಬುದರ ಆಧಾರದ ಮೇಲೆ ಅದರ ಮೇಲಿನ ಆದಾಯ ತೆರಿಗೆ ನಿಯಮಗಳು ಬದಲಾಗುತ್ತವೆ. ಚಿನ್ನಕ್ಕೆ ಜಿಎಸ್ಟಿ ಇರುತ್ತದೆ, ಖರೀದಿಸುವಾಗಲೂ ಮತ್ತು ಮಾರುವಾಗಲೂ ಜಿಎಸ್ಟಿ ಇರುತ್ತದೆ. ಆದಾಯ ತೆರಿಗೆ ವಿಚಾರಕ್ಕೆ ಬಂದರೆ ಮಾರಿದಾಗ ಸಿಗುವ ಲಾಭಕ್ಕೆ ತೆರಿಗೆಗಳು ಇರುತ್ತವೆ. ಇತ್ತೀಚಿನ ಬಜೆಟ್ ನಿಯಮಗಳ ಅನ್ವೇಷಣೆಯೊಂದಿಗೆ, ಹೂಡಿಕೆದಾರರು ಚಿನ್ನದ ಮೇಲಿನ ಬಂಡವಾಳ ಲಾಭದ ತೆರಿಗೆ (Capital Gains Tax) ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅತ್ಯಗತ್ಯ. ಯಾವ ರೀತಿಯ ಚಿನ್ನದ ಹೂಡಿಕೆಗೆ ಎಷ್ಟು ತೆರಿಗೆ ಅನ್ವಯಿಸುತ್ತದೆ ಎಂಬ ವಿವರ ಇಲ್ಲಿದೆ:
ಆಭರಣ, ಕಾಯಿನ್, ಬಿಸ್ಕತ್ ಇತ್ಯಾದಿ ಭೌತಿಕ ಚಿನ್ನವನ್ನು ನೀವೆಷ್ಟು ವರ್ಷ ಕಾಲ ಇಟ್ಟುಕೊಂಡು ಮಾರಾಟ ಮಾಡುತ್ತೀರಿ ಎಂಬುದರ ಮೇಲೆ ತೆರಿಗೆ ನಿರ್ಧಾರವಾಗುತ್ತದೆ. ಮಾರಾಟದಿಂದ ಸಿಗುವ ಲಾಭದ ಮೇಲೆ ಎರಡು ರೀತಿಯ ತೆರಿಗೆ ಅನ್ವಯ ಆಗುತ್ತದೆ. ಅಲ್ಪಾವಧಿ ಲಾಭ ಗಳಿಕೆ ಮತ್ತು ದೀರ್ಘಾವಧಿ ಲಾಭ ಗಳಿಕೆ ತೆರಿಗೆ ವಿಧಗಳಿರುತ್ತವೆ:
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು
ವಿವಿಧ ಮೊಬೈಲ್ ಆಪ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸುವ ಡಿಜಿಟಲ್ ಚಿನ್ನಕ್ಕೂ ಭೌತಿಕ ಚಿನ್ನಕ್ಕಿರುವ ನಿಯಮಗಳೇ ಅನ್ವಯಿಸುತ್ತವೆ:
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಗೋಲ್ಡ್ ಇಟಿಎಫ್ ಮತ್ತು ಫಂಡ್‌ಗಳ ನಿಯಮಗಳು ಇತ್ತೀಚಿನ ತಿದ್ದುಪಡಿಗಳ ನಂತರ ಬದಲಾಗಿವೆ:
ತೆರಿಗೆ ಉಳಿತಾಯದ ದೃಷ್ಟಿಯಿಂದ ಸರ್ಕಾರಿ ಗೋಲ್ಡ್ ಬಾಂಡ್‌ಗಳು ಅತ್ಯಂತ ಆಕರ್ಷಕವಿವೆ. ಆದರೆ, ಸದ್ಯ ಹೊಸ ಬಾಂಡ್ಗಳನ್ನು ವಿತರಿಸುತ್ತಿಲ್ಲವಾದರೂ ಸುಮಾರು ಹತ್ತು ವರ್ಷಗಳ ಕಾಲ ಹೂಡಿಕೆಗೆ ಅವಕಾಶ ಇತ್ತು. ನೀವೀಗಾಗಲೇ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ದರೆ, ಅದು ಮೆಚ್ಯೂರಿಟಿ ಆದಾಗ ಸಿಗುವ ಲಾಭಕ್ಕೆ ಏನೇನು ತೆರಿಗೆ ಅನ್ವಯ ಆಗುತ್ತದೆ ಎನ್ನುವ ವಿವರ ಇಂತಿದೆ:
ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ
ಚಿನ್ನದಲ್ಲಿ ಹೂಡಿಕೆ ಮಾಡುವ ಮುನ್ನ ಕೇವಲ ಲಾಭವನ್ನಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅದನ್ನು ಮಾರಾಟ ಮಾಡುವಾಗ ಕೈ ಸೇರುವ ನಿವ್ವಳ ಹಣದ ಮೇಲಾಗುವ ತೆರಿಗೆಯ ಪರಿಣಾಮವನ್ನು ಲೆಕ್ಕ ಹಾಕುವುದು ಜಾಣತನ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ