US Green Card: ಗ್ರೀನ್​ ಕಾರ್ಡ್​ಗಾಗಿ ಅಮೆರಿಕದಲ್ಲಿ ಕಾಯುತ್ತಿರುವ ಸಾವಿರಾರು ಭಾರತೀಯರಿಗೆ ಗುಡ್​ ನ್ಯೂಸ್

| Updated By: Srinivas Mata

Updated on: Sep 13, 2021 | 6:35 PM

ಗ್ರೀನ್​ ಕಾರ್ಡ್​ಗಾಗಿ ಅಮೆರಿಕದಲ್ಲಿ ಕಾಯುತ್ತಿರುವ ಸಾವಿರಾರು ಮಂದಿ ಭಾರತೀಯರಿಗೆ ಶುಭ ಸುದ್ದಿ ಇದು. ಪೂರಕ ಶುಲ್ಕ ಪಾವತಿಸಿ, ಶಾಶ್ವತ ವಾಸ್ತವ್ಯ ಅವಕಾಶ ಪಡೆಯಬಹುದು.

US Green Card: ಗ್ರೀನ್​ ಕಾರ್ಡ್​ಗಾಗಿ ಅಮೆರಿಕದಲ್ಲಿ ಕಾಯುತ್ತಿರುವ ಸಾವಿರಾರು ಭಾರತೀಯರಿಗೆ ಗುಡ್​ ನ್ಯೂಸ್
ಸಾಂದರ್ಭಿಕ ಚಿತ್ರ
Follow us on

ಉದ್ಯೋಗ- ಆಧಾರಿತವಾದ ಗ್ರೀನ್​ ಕಾರ್ಡ್ ಬಾಕಿ ಉಳಿದಿರುವ ಹತ್ತಾರು ಲಕ್ಷ ಮಂದಿ ವರ್ಷಗಳಿಂದ ಅಮೆರಿಕದಲ್ಲಿ ಕಾಯುತ್ತಿದ್ದಾರೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭಾರತೀಯರು ಸಹ ಇದ್ದಾರೆ. ಇದೀಗ ಕಾನೂನುಬದ್ಧವಾಗಿಯೇ ಅಮೆರಿಕದಲ್ಲಿ ಶಾಶ್ವತ ವಾಸ್ತವ್ಯದ ಅವಕಾಶ ಸಿಗುವ ಭರವಸೆ ಮೂಡಿದೆ. ಇದಕ್ಕಾಗಿ ಅಮೆರಿಕ ಸಂಸತ್​ನಲ್ಲಿ ಮಸೂದೆಗೆ ಒಪ್ಪಿಗೆ ಸಿಗಬೇಕು. ಆಗ ಪೂರಕ ಶುಲ್ಕ ಪಾವತಿಸಿ, ಗ್ರೀನ್ ಕಾರ್ಡ್ ಪಡೆಯಬಹುದು. ಒಂದು ವೇಳೆ ಈ ನಡೆಯನ್ನು ರಿಕನ್ಸಲಿಯೇಷನ್ ಪ್ಯಾಕೇಜ್​ನಲ್ಲಿ ಸೇರ್ಪಡೆ ಮಾಡಿ, ಕಾನೂನಾಗಿ ಜಾರಿಗೆ ತಂದಲ್ಲಿ ಇದರಿಂದ ಹತ್ತಾರು ಸಾವಿರ ಮಂದಿ ಭಾರತೀಯ ಐ.ಟಿ. ವೃತ್ತಿಪರರಿಗೆ ನೆರವಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಗ್ರೀನ್​ ಕಾರ್ಡ್​ಗಾಗಿ ಕಾಯುತ್ತಿರುವ ಸಾವಿರಾರು ಮಂದಿ ಇದ್ದಾರೆ.

ಗ್ರೀನ್ ಕಾರ್ಡ್ ಅಂದರೆ, ಅಧಿಕೃತವಾಗಿ ಶಾಶ್ವತ ವಾಸ್ತವ್ಯದ ಕಾರ್ಡ್. ಅಮೆರಿಕದಲ್ಲೇ ಶಾಶ್ವತವಾಗಿ ನೆಲೆಸಬಹುದು ಎಂಬ ಸಮ್ಮತಿಯೊಂದಿಗೆ ವಲಸಿಗರಿಗೆ ಇದನ್ನು ವಿತರಿಸಲಾಗುತ್ತದೆ. ಸಮಿತಿಯೊಂದರ ಪ್ರಕಾರ, 2 ವರ್ಷಕ್ಕೂ ಹಿಂದೆ ಅರ್ಜಿ ಹಾಕಿರುವವರಿಗೆ ಶಾಶ್ವತ ವಾಸ್ತವ್ಯಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ. ಅದಕ್ಕೆ ಯಾವುದೇ ಸಂಖ್ಯೆಯ ಮಿತಿ ಇಲ್ಲ. ಅದಕ್ಕಾಗಿ ಪೂರಕ ಶುಲ್ಕ 5000 ಯುಎಸ್​ಡಿ (3,65,000 ರೂಪಾಯಿ) ಪಾವತಿಸಬೇಕಾಗುತ್ತದೆ. EB- 5 ವಿಭಾಗದವರಿಗೆ (ವಲಸಿಗ ಹೂಡಿಕೆದಾರರು) 50,000 ಯುಎಸ್​ಡಿ ಇದೆ. ಈ ಪ್ರಾವಿಷನ್​ಗಳು 2031ಕ್ಕೆ ಕೊನೆಯಾಗುತ್ತದೆ ಎಂದು ಫೋರ್ಬ್ಸ್​ ನಿಯತಕಾಲಿಕೆ ವರದಿ ಮಾಡಿದೆ.

ಎಷ್ಟು ಪೂರಕ ಶುಲ್ಕ ಪಾವತಿಸಬೇಕು?
ಕುಟುಂಬ ಆಧಾರಿತವಾದ ವಲಸಿಗರಾಗಿ, ಅಮೆರಿಕ ನಾಗರಿಕರು ಪ್ರಾಯೋಜಕರಾಗಿದ್ದು, 2 ವರ್ಷಕ್ಕೂ ಹೆಚ್ಚು ಹಿಂದೆ ಗ್ರೀನ್​ ಕಾರ್ಡ್​ಗೆ ಅರ್ಜಿ ಹಾಕಿಕೊಂಡಿದ್ದಲ್ಲಿ 2500 ಯುಎಸ್​ಡಿ ಪಾವತಿಸಬೇಕು. ಎರಡು ವರ್ಷದೊಳಗೆ ಇಲ್ಲದಿದ್ದಲ್ಲಿ ಅಂಥ ಅರ್ಜಿದಾರರು 1500 ಯುಎಸ್​ಡಿ ಪೂರಕ ಶುಲ್ಕ ಪಾವತಿಸಬೇಕು, ಆದರೆ ಅವರು ಅದೇ ದೇಶದಲ್ಲಿ ಇರಬೇಕು ಎಂದು ಮುದ್ರಿತ ಮಾಹಿತಿಯಲ್ಲಿ ಇದೆ. ಅರ್ಜಿದಾರರು ಪಾವತಿಸುವ ಇತರ ಆಡಳಿತಾತ್ಮಕ ಪ್ರೊಸೆಸಿಂಗ್ ಶುಲ್ಕದ ಮೇಲೆ ಹೆಚ್ಚುವರಿಯಾಗಿ ಈ ಪೂರಕ ಶುಲ್ಕವನ್ನು ಭರಿಸಬೇಕಾಗುತ್ತದೆ. ಆದರೆ ಕಾನೂನಾತ್ಮಕ ವಲಸೆ ವ್ಯವಸ್ಥೆಯ ರಚನೆಯಲ್ಲಿ ಯಾವುದೇ ಶಾಶ್ವತವಾದ ಬದಲಾವಣೆ ಆಗಲ್ಲ. ಅದರಲ್ಲಿ ಗ್ರೀನ್​ ಕಾರ್ಡ್​ಗಳ ಮಿತಿ ಅಥವಾ H-1B ವೀಸಾದ ವಾರ್ಷಿಕ ಕೋಟಾದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ.

ಇದು ಕಾನೂನು ಆಗುವ ಮುನ್ನ, ನ್ಯಾಯಾಂಗ ಸಮಿತಿಯಲ್ಲಿ, ಜನಪ್ರತಿನಿಧಿಗಳ ಸಭೆ ಹಾಗೂ ಸೆನೆಟ್​ನಲ್ಲಿ ಪ್ರಾವಿಷನ್ ಅನುಮೋದನೆ ಪಡೆದು, ಅಮೆರಿಕ ಅಧ್ಯಕ್ಷರಿಂದ ಸಹಿ ಆಗಬೇಕು, ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಿಬಿಎಸ್​ನ್ಯೂಸ್​ ವರದಿ ಪ್ರಕಾರ, ಯಶಸ್ಸು, ಕಾನೂನುಬದ್ಧ ಯೋಜನೆಯು ದಾಖಲೆಗಳು ಇಲ್ಲದ ವಲಸಿಗರು ಅಮೆರಿಕಕ್ಕೆ ಮಕ್ಕಳಾಗಿ, ಟೆಂಪೊರರಿ ಪ್ರೊಟೆಕ್ಟೆಡ್ ಸ್ಟೇಟಸ್ (ಟಿಪಿಎಸ್) ಫಲಾನುಭವಿಗಳು, ಕೃಷಿ ಕಾರ್ಮಿಕರು ಮತ್ತು ಕೊರೊನಾ ಕಾಲದಲ್ಲಿ ಬಂದಿರುವ ಇತರ ಅಗತ್ಯ ಸೇವೆ ಕಾರ್ಮಿಕರು ಅಮೆರಿಕದ ವಾಸ್ತವ್ಯ ಅಥವಾ ಗ್ರೀನ್ ಕಾರ್ಡ್​ಗಳಿಗೆ ಅರ್ಜಿ ಹಾಕಬಹುದು.

ಒಂದು ದೇಶದಲ್ಲಿ ಶೇ 7ಕ್ಕಿಂತ ಹೆಚ್ಚು ಅವಕಾಶ ಇಲ್ಲ
ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಮಂಜೂರಿಗೆ ಬಾಕಿ ಉಳಿದುಕೊಂಡಿರುವ ಹಲವು ಕಾರ್ಮಿಕರು ಈಗಾಗಲೇ ಅಮೆರಿಕದಲ್ಲಿ ತಾತ್ಕಾಲಿಕ ವಲಸೆಯೇತರ ವೀಸಾದಲ್ಲಿ ಇದ್ದಾರೆ. H-1B ವೀಸಾದ ಅಡಿಯಲ್ಲಿ ಇರುವವರಿಗೆ ನವೀಕರಣ ಮಾಡಬಹುದು. ಆದರೆ ಪೂರ್ಣ ಸಾಮರ್ಥ್ಯವನ್ನು ತಲುಪುವುದಕ್ಕೆ ಫಲಾನುಭವಿಗಳಿಗೆ ನಿರ್ಬಂಧವಾಗುತ್ತದೆ. ಸದ್ಯಕ್ಕೆ ಇರುವ ನಿಯಮದ ಪ್ರಕಾರ, ಒಂದು ದೇಶದಿಂದ ಈಗ ಶೇ 7ಕ್ಕಿಂತ ಹೆಚ್ಚಿನ ಪ್ರಮಾಣದ ಉದ್ಯೋಗ ಆಧಾರಿತ ಗ್ರೀನ್​ ಕಾರ್ಡ್​ಗಳು ದೊರೆಯುವುದಿಲ್ಲ. ಇದರಿಂದ ಭಾರತ ಮತ್ತು ಚೀನಾದಿಂದ ವಲಸಿಗರ ಬಾಕಿಯನ್ನು ದಶಕಗಳಿಂದ ಸೃಷ್ಟಿ ಮಾಡಿದೆ.

ಭಾರತೀಯ ನಾಗರಿಕರಿಂದ ನಿರ್ದಿಷ್ಟವಾಗಿ 80 ವರ್ಷಗಳಿಂದ ಬಾಕಿ ಉಳಿದಿದೆ. 2 ಲಕ್ಷ ಮಂದಿ ಶಾಶ್ವತ ವಾಸ್ತವ್ಯ ಪಡೆಯುವ ಮುಂಚೆಯೇ ಸಾವನ್ನಪ್ಪುತ್ತಾರೆ ಎನ್ನುತ್ತಾರೆ ಜನಪ್ರತಿನಿಧಿಗಳು. H-1B ವೀಸಾ ಇರುವಂಥವರು ತಮ್ಮ ಉದ್ಯೋಗ ಬದಲಾವಣೆ ಮಾಡಲು ಸಾಧ್ಯವಿಲ್ಲ ಅಥವಾ ಹೊಸದಾಗಿ ಸ್ವಂತ ವ್ಯವಹಾರ ಮಾಡುವುದಕ್ಕೆ ಅವಕಾಶ ಇಲ್ಲ. ಅವರಿಂದ ಒಟ್ಟಾರೆ ಉತ್ಪಾದಕತೆ ಹೆಚ್ಚಾದರೂ, ಹೊಸ ಪೇಟೆಂಟ್​ಗಳನ್ನು, ವೇತನವನ್ನು ತೋರಿದರೂ ಸಹಾಯ ಆಗಲ್ಲ. H-1B ವೀಸಾ ತಾತ್ಕಾಲಿಕವಾದದ್ದು. ಅನಿಶ್ಚತತೆ ಇದ್ದೇ ಇರುತ್ತದೆ. ಏಕೆಂದರೆ ಅವರು ಉದ್ಯಮಿಗಳಾಗಲು ಸಾಧ್ಯವಿಲ್ಲ, ಮನೆ ಖರೀದಿಸಲು ಆಗಲ್ಲ.

ಇದನ್ನೂ ಓದಿ: ಗ್ರೀನ್​ ಕಾರ್ಡ್ ಆಕಾಂಕ್ಷಿಗಳಿಗೆ ಟ್ರಂಪ್ ವಿಧಿಸಿದ್ದ ನಿಷೇಧ ತೆರವುಗೊಳಿಸಿದ ಬೈಡನ್

(Good News For Indian IT Professionals Who Are Waiting For Green Card In US Pay And Avail Green Card Know How)