AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಅಮೆರಿಕ ಕನೆಕ್ಟ್ ಸೇರಿದಂತೆ ವಿವಿಧ ಎಐ ಯೋಜನೆಗಳನ್ನು ತೆರೆದಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ

Google CEO Sundar Pichai announces India-America Connect initiative: ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತ-ಅಮೆರಿಕ ಕನೆಕ್ಟ್ ಉಪಕ್ರಮವನ್ನು ಘೋಷಿಸಿದ್ಧಾರೆ. ಸಮಿಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದ ಪಿಚೈ, ಭಾರತದ ಎಐ ಹೆಜ್ಜೆಗಳಿಗೆ ತಮ್ಮ ಕಂಪನಿಯ ಬೆಂಬಲ ಇರುವುದನ್ನು ತಿಳಿಸಿದ್ದಾರೆ. ಅಮೆರಿಕದಿಂದ ಭಾರತ ಹಾಗೂ ಇತರ ಪ್ರದೇಶಗಳಿಗೆ ಸಮುದ್ರದೊಳಗೆ ವಿವಿಧ ಕೇಬಲ್ ಮಾರ್ಗಗಳನ್ನು ನಿರ್ಮಿಸುವುದು ಈ ಉಪಕ್ರಮದ ಒಂದು ಭಾಗ.

ಭಾರತ-ಅಮೆರಿಕ ಕನೆಕ್ಟ್ ಸೇರಿದಂತೆ ವಿವಿಧ ಎಐ ಯೋಜನೆಗಳನ್ನು ತೆರೆದಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ
ಸುಂದರ್ ಪಿಚೈ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2026 | 6:04 PM

Share

ನವದೆಹಲಿ, ಫೆಬ್ರುವರಿ 18: ಗೂಗಲ್ ಸಿಇಒ, ಹಾಗೂ ಭಾರತ ಮೂಲದ ಸುಂದರ್ ಪಿಚೈ (Sundar Pichai) ಅವರು ಭಾರತ-ಅಮೆರಿಕ ಕನೆಕ್ಟ್ (India America Connect initiative) ಎನ್ನುವ ಮಹತ್ವದ ಉಪಕ್ರಮ ಘೋಷಿಸಿದ್ದಾರೆ. ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಂದರ್ ಪಿಚೈ, ಭಾರತ ಹಾಗು ಅಮೆರಿಕ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಮುದ್ರದೊಳಗೆ ಕೇಬಲ್ ಮಾರ್ಗಗಳನ್ನು (Subsea cable routes) ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

‘ಭಾರತ-ಅಮೆರಿಕ ಕನೆಕ್ಟ್ ಉಪಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಉಪಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಹಾಗೂ ದಕ್ಷಿಣ ಗೋಳಾರ್ಧದ ವಿವಿಧ ಸ್ಥಳಗಳ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಾಗರದೊಳಗೆ ಹೊಸ ಕೇಬಲ್ ಮಾರ್ಗಗಳನ್ನು ಅಳವಡಿಸಲಾಗುತ್ತದೆ. ಈ ಉಪಕ್ರಮದಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಬೇಕಾದರೆ ಕೌಶಲ್ಯಾಭಿವೃದ್ಧಿಯಲ್ಲೂ ಹೂಡಿಕೆ ಮಾಡುವ ಅಗತ್ಯ ಇದೆ. ಹೀಗಾಗಿ, ಕೌಶಲ್ಯ ಯೋಜನೆಗಳನ್ನೂ ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಹೊಸ ಗೂಗಲ್ ಎಐ ಪ್ರೊಫೆಷನಲ್ ಸರ್ಟಿಫಿಕೇಟ್ ಪ್ರೋಗ್ರಾಮ್ ಕೂಡ ಇದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಎಐ ಅನ್ನು ಸದ್ವಿನಿಯೋಗ ಮಾಡಿಕೊಳ್ಳಲು ಸಹಾಯವಾಗುತ್ತದೆ’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಅಸಾಧಾರಣ ಎಐ ತಿರುವಿನಲ್ಲಿ ಭಾರತ: ಸುಂದರ್ ಪಿಚೈ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಲ್ಲಿ ಅಸಾಧಾರಣ ತಿರುವಿನಲ್ಲಿ (extraordinary trajectory) ಭಾರತ ಸಾಗುತ್ತಿದೆ. ಈ ದೇಶದ ಎಐ ಪರಿವರ್ತನೆಯಲ್ಲಿ ಜೊತೆಯಾಗಲು ಗೂಗಲ್ ಬದ್ಧವಾಗಿದೆ. ಭಾರತದ ವೈವಿಧ್ಯತೆ, ಭಾಷಾ ಪರಿಸರ, ಉತ್ತಮ ಡಿಜಿಟಲ್ ಪಬ್ಲಕ್ ಇನ್​ಫ್ರಾಸ್ಟ್ರಕ್ಚರ್​ಗಳು ನಾವೀನ್ಯತೆಗೆ ಭದ್ರ ಬುನಾದಿ ಹಾಕುತ್ತವೆ ಎಂದು ಗೂಗಲ್ ಸಿಇಒ ಅಭಿಪ್ರಾಯಪಟ್ಟಿದ್ದಾರೆ.

ಸುಂದರ್ ಪಿಚೈ ಮಾತನಾಡಿರುವ ವಿಡಿಯೋ

ಭಾರತ ಅಮೆರಿಕ ಕನೆಕ್ಟ್ ಉಪಕ್ರಮ ಹೇಗೆ?

ಗೂಗಲ್ ಸಂಸ್ಥೆ ಭಾರತದಲ್ಲಿ ಎಐ ಮೂಲಸೌಕರ್ಯಕ್ಕಾಗಿ ಐದು ವರ್ಷದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆಗೆ ಯೋಜಿಸಿದೆ. ಇದರ ಭಾಗವಾಗಿ ಇಂಡಿಯಾ-ಅಮೆರಿಕ ಕನೆಕ್ಟ್ ಉಪಕ್ರಮ ಆರಂಭಿಸಲಾಗಿದೆ. ಸಮುದ್ರದೊಳಗಿನಿಂದ ಕೇಬಲ್​ಗಳನ್ನು ಅಳವಡಿಸುವುದು, ಫೈಬರ್ ಆಪ್ಟಿಕ್ ಮಾರ್ಗಗಳನ್ನು ನಿರ್ಮಿಸುವುದು, ಮತ್ತು ಇಂಟರ್ನ್ಯಾಷನಲ್ ಲ್ಯಾಂಡಿಂಗ್ ಸ್ಟೇಷನ್​ಗಳನ್ನು ನಿರ್ಮಿಸುವುದು ಗೂಗಲ್​ನ ಯೋಜನೆಗಳಲ್ಲಿ ಸೇರಿವೆ.

ಇದನ್ನೂ ಓದಿ: ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂ

ಅಮೆರಿಕದ ಪಶ್ಚಿಮ ಕರಾವಳಿ ಭಾಗದಿಂದ ಸಮುದ್ರದೊಳಗೆ ಕೇಬಲ್​ಗಳನ್ನು ಭಾರತ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಇತ್ಯಾದಿ ಕಡೆಗೆ ಹಾಯಿಸಲಾಗುತ್ತದೆ. ಭಾರತದಿಂದ ಸಿಂಗಾಪುರ, ಸೌತ್ ಆಫ್ರಿಕಾ ಆಸ್ಟ್ರೇಲಿಯಾಗೆ ಕೆನ್ಕಟ್ ಆಗುವ ವಿವಿಧ ಸಬ್​ಸೀ ಕೇಬಲ್ ಮಾರ್ಗಗಳನ್ನೂ ಮಾಡಲಾಗುತ್ತದೆ. ವಿಶಾಖಪಟ್ಟಣಂನಲ್ಲಿ ಹೊಸ ಇಂಟರ್ನ್ಯಾಷನಲ್ ಸಬ್​ಸೀ ಗೇಟ್​ವೀ ಸ್ಥಾಪಿಸಲಾಗುತ್ತದೆ. ಹಾಗೆಯೇ, ನಾಲ್ಕು ಫೈಬರ್ ಆಪ್ಟಿಕ್ ರೂಟ್​ಗಳನ್ನೂ ನಿರ್ಮಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ