ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಪ್ರಕಾರ, FY22ರಲ್ಲಿ ಭಾರತದ ಜಿಡಿಪಿ (GDP) ಶೇಕಡಾ 9.2ರಷ್ಟು ಬೆಳವಣಿಗೆ ಆಗಲಿದೆ. ಭಾರತೀಯ ಆರ್ಥಿಕತೆಯ ವಿಸ್ತರಣೆಯು ಜನವರಿ 7ರಂದು ಬಿಡುಗಡೆಯಾದ 2021-22ರ ಅಂಕಿ- ಅಂಶಗಳ ಸಚಿವಾಲಯದ ಜಿಡಿಪಿಯ ಮೊದಲ ಮುಂಗಡ ಅಂದಾಜಿನ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮುನ್ಸೂಚನೆಗಿಂತ ಕಡಿಮೆ ಆಗಿದೆ. ಕೇಂದ್ರೀಯ ಬ್ಯಾಂಕ್ ಕಳೆದ ತಿಂಗಳು FY22ಕ್ಕಾಗಿ ತನ್ನ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 9.5 ಎಂದು ಮತ್ತೊಮ್ಮೆ ಹೇಳಿತು. FY22ಕ್ಕಾಗಿ ಅಂದಾಜು ಶೇ 9.2 ಜಿಡಿಪಿ ಬೆಳವಣಿಗೆ ದರವು ಕನಿಷ್ಠ 17 ವರ್ಷಗಳಲ್ಲಿ ಅತ್ಯಧಿಕವಾಗಿದೆ. ಅತ್ಯಂತ ಅನುಕೂಲಕರವಾದ ಮೂಲ ಪರಿಣಾಮದ ನೆರವಿನಿಂದ ಇದು ಆಗಿದೆ. ಕೊವಿಡ್-19 ಕಾರಣದಿಂದಾಗಿ FY21ರಲ್ಲಿ ಜಿಡಿಪಿ ಶೇ 7.3ರಷ್ಟು ಕುಗ್ಗಿದೆ.
ಮೊದಲ ಮುಂಗಡ ಅಂದಾಜಿನ ಪ್ರಕಾರ, ಹಣಕಾಸು ವರ್ಷದ ಮೊದಲ ಎರಡರಿಂದ ಮೂರು ತ್ರೈಮಾಸಿಕಗಳಿಗೆ ಲಭ್ಯವಿರುವ ಡೇಟಾವನ್ನು ಆಧರಿಸಿ, FY22ಕ್ಕಾಗಿ ಒಟ್ಟು ಮೌಲ್ಯದ ಬೆಳವಣಿಗೆಯನ್ನು ಶೇ 8.6ಕ್ಕೆ ನಿಗದಿಪಡಿಸಲಾಗಿದೆ. ನಾಮಿನಲ್ ಪರಿಭಾಷೆಯಲ್ಲಿ FY22ರಲ್ಲಿ ಜಿಡಿಪಿ ಶೇ 17.6ರ ಬೆಳವಣಿಗೆಯನ್ನು ಕಾಣಬಹುದು. 2021ರ ಏಪ್ರಿಲ್ನಿಂದ ಸೆಪ್ಟೆಂಬರ್‌ನಲ್ಲಿ ಭಾರತದ ಜಿಡಿಪಿ ಶೇ 13.7ರ ಬೆಳವಣಿಗೆಯೊಂದಿಗೆ ಮೊದಲ ಮುಂಗಡ ಅಂದಾಜಿನ ಪ್ರಕಾರ, FY22ರ ದ್ವಿತೀಯಾರ್ಧದಲ್ಲಿ ಜಿಡಿಪಿ ಶೇ 5.6ರಷ್ಟು ಬೆಳೆಯಲಿದೆ. ಕಳೆದ ತಿಂಗಳು ಆರ್ಬಿಐ ಮುನ್ಸೂಚನೆಯು ಭಾರತದ ಜಿಡಿಪಿ 2021ರ ಅಕ್ಟೋಬರ್-ಡಿಸೆಂಬರ್ನಲ್ಲಿ ಶೇ 6.6 ಮತ್ತು 2022 ಜನವರಿ-ಮಾರ್ಚ್ನಲ್ಲಿ ಶೇಕಡಾ 6ರಷ್ಟು ಬೆಳವಣಿಗೆಯನ್ನು ಕಾಣಲಿದೆ ಎಂದು ಹೇಳಿದೆ.
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಹಿರಂಗಪಡಿಸಿದ ಜಿಡಿಪಿ ಮುಂಗಡ ಅಂದಾಜಿನ ಕುರಿತು ಪ್ರತಿಕ್ರಿಯಿಸಿದ ICRA ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಮಾತನಾಡಿ, “ನೈಜ ಜಿಡಿಪಿ ಮತ್ತು ಜಿವಿಎ ಬೆಳವಣಿಗೆಯ ಮುಂಗಡ ಅಂದಾಜುಗಳು (ಕ್ರಮವಾಗಿ 9.0 ಶೇಕಡಾ, 8.8 ಶೇಕಡಾ ಮತ್ತು 17.5 ಶೇಕಡಾ) ಮತ್ತು ನಾಮಿನಲ್ ಜಿಡಿಪಿ ವಿಸ್ತರಣೆಯು ವಿಶಾಲವಾಗಿ ನಮ್ಮ ಸ್ವಂತ ನಿರೀಕ್ಷೆಗಳಿಗೆ ಅನುಗುಣವಾಗಿದೆ.” “NSO ನಿರ್ಮಿಸಿದ H2 FY2022ಗಾಗಿ ಶೇ 5.6ರ ಸೂಚ್ಯ ಜಿಡಿಪಿ ಬೆಳವಣಿಗೆಯು ಒಮಿಕ್ರಾನ್ನ ಒಪ್ಪಿಕೊಳ್ಳಬಹುದಾದ ಬದಲಾವಣೆ ಪ್ರಭಾವಕ್ಕೆ ಸಂಪೂರ್ಣವಾಗಿ ಕಾರಣ ಆಗುವುದಿಲ್ಲ. FY2022 Q3ರಲ್ಲಿ ಶೇ 6.0ರಿಂದ ಶೇ 6.5ರಷ್ಟು ಏರಿಕೆಯಾದ ನಂತರ ಜಿಡಿಪಿ ವಿಸ್ತರಣೆಯು ನಡೆಯುತ್ತಿರುವ ತ್ರೈಮಾಸಿಕದಲ್ಲಿ ಶೇ ಐದಕ್ಕಿಂತ ಕೆಳಗೆ ಇಳಿಯುತ್ತದೆ ಎಂಬುದು ನಮ್ಮ ಅರ್ಥವಾಗಿದೆ,” ಎಂದಿದ್ದಾರೆ.
ಮೂರನೇ ಅಲೆಯಲ್ಲಿ ಸಾಂಕ್ರಾಮಿಕದ ಕಾರಣಕ್ಕೆ ಪೂರೈಕೆ ಅಡಚಣೆಗಳು, ಕಲ್ಲಿದ್ದಲು, ವಿದ್ಯುತ್ ಮತ್ತು ಸೆಮಿಕಂಡಕ್ಟರ್ ಕೊರತೆಗಳನ್ನು ಪರಿಗಣಿಸಿ ಬ್ರಿಕ್‌ವರ್ಕ್ ರೇಟಿಂಗ್‌ಗಳು ಸಹ ಹೇಳಿರುವಂತೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ಬಿಡುಗಡೆ ಮಾಡಿದ FY22ಗಾಗಿ ಜಿಡಿಪಿಯ ಮುಂಗಡ ಅಂದಾಜು ಶೇ 9.2ರಷ್ಟು ಹೆಚ್ಚು ಆಶಾದಾಯಕವಾಗಿದೆ.
“ಅಂದಾಜುಗಳಂತೆ ಮುಂದಿನ ಹಣಕಾಸು ವರ್ಷದಲ್ಲಿ ಮುಂಬರುವ ಬಜೆಟ್ಗೆ ಅತ್ಯಗತ್ಯವಾದ ಇನ್ಪುಟ್ ಆಗಿ ಕಾರ್ಯನಿರ್ವಹಿಸುತ್ತವೆ. ಶೇ 17.6ರಷ್ಟು ನಾಮಿನಲ್ ಜಿಡಿಪಿ ಹೆಚ್ಚಳವು ಸರ್ಕಾರಕ್ಕೆ ಹೆಚ್ಚುವರಿ ವೆಚ್ಚದ ಜಾಗವನ್ನು ಒದಗಿಸುತ್ತದೆ. ನಾಮಿನಲ್ ಜಿಡಿಪಿ ಅಂದಾಜಿನ ಪ್ರಕಾರ, FY22ಗಾಗಿ ಬಜೆಟ್ ವಿತ್ತೀಯ ಕೊರತೆಯು ಜಿಡಿಪಿಯ ಶೇ 6.5ರಷ್ಟು ಆಗುತ್ತದೆ. ಬಂಡವಾಳ ಹಿಂತೆಗೆದುಕೊಳ್ಳುವಿಕೆಯಲ್ಲಿನ ಕೊರತೆ ಮತ್ತು ಪೂರಕ ಅನುದಾನಗಳಿಗೆ ಹೆಚ್ಚುವರಿ ಬೇಡಿಕೆಯ ಹೊರತಾಗಿಯೂ FY22ರಲ್ಲಿ ಜಿಡಿಪಿ ಯ ಶೇ 6.8 ವಿತ್ತೀಯ ಕೊರತೆ ಗುರಿಯನ್ನು ಸಾಧಿಸುವ ಸಾಧ್ಯತೆಯಿದೆ. ನಾಮಿನಲ್ ಜಿಡಿಪಿಯಲ್ಲಿನ ಶೇ 17.6 ಹೆಚ್ಚಳವು ಜಿಡಿಪಿ ಅನುಪಾತಕ್ಕೆ ಸಾಲದಲ್ಲಿ ಗಣನೀಯ ಇಳಿಕೆಗೆ ಕಾರಣವಾಗುತ್ತದೆ, ಇದು FRBMನ ಕೇಂದ್ರಬಿಂದುವಾಗಿದೆ.”
ಇದನ್ನೂ ಓದಿ: GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ