AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಹಣಕಾಸು ವರ್ಷ 2021-22ರಲ್ಲಿ ರಿಯಲ್ ಜಿಡಿಪಿ ಶೇ 9.5 ಅಂದಾಜು ಮಾಡಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಶಕ್ತಿಕಾಂತ ದಾಸ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Sep 10, 2021 | 5:51 PM

Share

ಹಣಕಾಸು ವರ್ಷ 2022ರಲ್ಲಿ ಭಾರತದ ಬೆಳವಣಿಗೆ ದರ ಶೇ 9.5 ಇರಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. “ಈ ಹಂತದಲ್ಲಿ ನಾವು ಶೇ 9.5ರಷ್ಟು ಬೆಳವಣಿಗೆಯನ್ನು ಅಂದಾಜಿಸಿದ್ದೇವೆ. ಆದರೆ ಮೂರನೇ ಅಲೆಯ ಅನಿಶ್ಚಿತತೆ ಇದ್ದೇ ಇದೆ,” ಎಂದು ಮಾಧ್ಯಮದ ವೆಬ್​ಕಾಸ್ಟ್​ನಲ್ಲಿ ಹೇಳಿದ್ದಾರೆ. “ಆದರೆ ನನಗನಿಸುವಂತೆ ಜನರು ಮತ್ತು ಉದ್ಯಮ ಚಟುವಟಿಕೆಗಳು ಹೆಚ್ಚೆಚ್ಚು ಕೊವಿಡ್ ಪ್ರೊಟೋಕಾಲ್​ಗೆ ಹೊಂದಾಣಿಕೆ ಆಗುತ್ತಿರುವುದು ಕಂಡುಬರುತ್ತಿದೆ ಮತ್ತು ತಮ್ಮ ಉದ್ಯಮವನ್ನು ಮುಂದುವರಿಸಿದ್ದಾರೆ. ಕೊವಿಡ್ ಮೂರನೇ ಅಲೆಯು ಗಂಭೀರ ಪರಿಣಾಮ ಬೀರಲಿಲ್ಲ ಅಂತಾದರೆ ಶೇ 9.5ರಷ್ಟು ಬೆಳವಣಿಗೆ ನಿರೀಕ್ಷೆ ಮಾಡಬಹುದು,” ಎಂದು ಅವರು ಹೇಳಿದ್ದಾರೆ. ಆರ್ಥಿಕ ಬೆಳವಣಿಗೆಯು ಎರಡನೇ ತ್ರೈಮಾಸಿಕದಿಂದ ಉತ್ತಮವಾಗುತ್ತಾ ಹೋಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊವಿಡ್​ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲು ನಿರ್ಧಾರ ಮಾಡಿದೆ. ಸರ್ಕಾರ ನಿಗದಿ ಮಾಡಿರುವಂತೆ ಹಣದುಬ್ಬರ ದರ ಶೇ 2ರಿಂದ 6ರ ಮಧ್ಯೆ ಇರುವಂತೆ ನೋಡಿಕೊಳ್ಳಲು ಕಾರ್ಯ ನಿರ್ವಹಿಸಲಿದೆ. ನಿಧಾನವಾಗಿ ಆರ್​ಬಿಐನಿಂದ ಶೇ 4ರ ದರವನ್ನು ಸಾಧಿಸಲು ಸಾಗಲಾಗುವುದು. ಸುಸ್ಥಿರವಾದ ಹಣದುಬ್ಬರ ಏರಿಕೆ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಪ್ರಮುಖಾಂಶಗಳು – ಆರ್​ಬಿಐ ಗವರ್ನರ್ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲೇ ಲಿಕ್ವಿಡಿಟಿ ಸನ್ನಿವೇಶ ಸುಲಭವಾಗಿದೆ ಮತ್ತು ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಏರಿಕೆ ಆಗಿದೆ. ಹೆಚ್ಚಿನ ಆಸ್ತಿ ದರವು ಹಣದುಬ್ಬರ ಸನ್ನಿವೇಶದ ಮಲೆ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ.

– ಅಕಾಮಡೇಟಿವ್ ನಿಲವಿನ ಬಗ್ಗೆ ಉತ್ತರಿಸಿದ ದಾಸ್, ಆರ್​ಬಿಐನ ದರ ನಿಗದಿ ಸಮಿತಿಯು ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೋ ಅದರ ಮೇಲೆ ತೀರ್ಮಾನ ಆಗುತ್ತದೆ ಎಂದಿದ್ದಾರೆ.

– ಎಲ್ಲಕ್ಕೂ ಹಣದುಬ್ಬರ ಆಗುತ್ತಿದೆ ಎಂಬುದು ರಿಸರ್ವ್ ಬ್ಯಾಂಕ್​ಗೆ ಕಂಡುಬಂದಿಲ್ಲ.

– ಬ್ಯಾಂಕಿಂಗ್​ ವಲಯಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಜೂನ್​ ತ್ರೈಮಾಸಿಕದ ಕೊನೆ ಹೊತ್ತಿಗೆ ಶೇ 7.5ರಷ್ಟಿತ್ತು ಮತ್ತು ಅದನ್ನೇ ಇಲ್ಲಿಯ ತನಕ ನಿರ್ವಹಿಸಲಾಗಿದೆ.

ಹಿನ್ನೆಲೆ ಈ ಹಿಂದೆ, ಆಗಸ್ಟ್​ ತಿಂಗಳಲ್ಲಿ ಆರ್​ಬಿಐ ತಿಳಿಸಿರುವಂತೆ, ರಿಯಲ್​ ಜಿಡಿಪಿ ಬೆಳವಣಿಗೆ ಪ್ರಸಕ್ತ ಹಣಕಾಸು 2021-22ರಲ್ಲಿ ಶೇ 9.5ರಷ್ಟು ಇರಲಿದೆ. ಬ್ಯಾಂಕ್​ನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ವೇಳೆ ಇದನ್ನು ತಿಳಿಸಿತ್ತು.

ಅಕಾಮಡೆಟಿವ್ ನಿಲವು ಮುಂದುವರಿಸಲು ತೀರ್ಮಾನಿಸಿತ್ತು. ರೆಪೋ ದರ ಶೇ 4ರಲ್ಲಿ ಮತ್ತು ರಿವರ್ಸ್ ರೆಪೋ ದರ ಶೇ 3.35ರಲ್ಲೇ ಮುಂದುವರಿಸಲು ನಿರ್ಧರಿಸಿತ್ತು. ಶಕ್ತಿಕಾಂತ್ ದಾಸ್ ಹೇಳಿರುವಂತೆ, ಕೊವಿಡ್- 19 ಎರಡನೇ ಅಲೆ ನಿರ್ಬಂಧ ಸಡಿಲಗೊಳಿಸುತ್ತಿದ್ದಂತೆ ದೇಶೀಯ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಬಂದಿದೆ ಮತ್ತು ಹಂತಹಂತವಾಗಿ ಆರ್ಥಿಕತೆ ಪುನರಾರಂಭ ಆಗುತ್ತಿದೆ.

ಇದನ್ನೂ ಓದಿ: GDP: ಭಾರತದ ಮೊದಲನೇ ತ್ರೈಮಾಸಿಕ ಜಿಡಿಪಿ ಶೇ 20ರಷ್ಟು ಬೆಳವಣಿಗೆ

ಜಿಡಿಪಿ ಏರಿಕೆ ಎಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ  ರಾಹುಲ್ ಗಾಂಧಿ ವಾಗ್ದಾಳಿ

(Real GDP Growth For FY22 Estimated To Be 9.5 Percent Said By RBI Governor Shaktikanta Das )

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ