Dubai Expo 2020: ವಿಶ್ವದ ಅತಿದೊಡ್ಡ ದುಬೈ ಎಕ್ಸ್ಪೋಗೆ ಕೊರೊನಾ ಲಸಿಕೆ ಬೇಕಿಲ್ಲ, ನೆಗೆಟಿವ್ ರಿಪೋರ್ಟ್ ಕೇಳಲ್ಲ
ವಿಶ್ವದ ಅತಿ ದೊಡ್ಡ ಪ್ರದರ್ಶನವಾದ ದುಬೈ ಎಕ್ಸ್ಪೋ 2020ಕ್ಕೆ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಅಥವಾ ಕೊವಿಡ್ 19 ನೆಗೆಟಿವ್ಗೆ ಸಾಕ್ಷ್ಯ ಅಗತ್ಯ ಇಲ್ಲ ಎಂದು ಹೇಳಲಾಗಿದೆ.
ದುಬೈ ವರ್ಲ್ಡ್ ಎಕ್ಸ್ಪೋಗೆ ಭೇಟಿ ನೀಡುವವರು ಕೊವಿಡ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ಸಲ್ಲಿಸುವುದೋ ಅಥವಾ ಕೊವಿಡ್ ಪರೀಕ್ಷೆ ಮಾಡುವುದೋ ಅಗತ್ಯ ಇಲ್ಲ. ಅಂದಹಾಗೆ ಕೊರೊನಾ ಶುರುವಾದ ಮೇಲೆ ವ್ಯಕ್ತಿಯೊಬ್ಬರು ಸ್ವತಃ ಭೇಟಿ ನೀಡುತ್ತಿರುವ ವಿಶ್ವದ ಅತಿ ದೊಡ್ಡ ಕಾರ್ಯಕ್ರಮ ಇದು. 6 ತಿಂಗಳ ಕಾಲ ನಡೆಯುವ ಈ ಪ್ರದರ್ಶನಕ್ಕೆ 2.5 ಕೋಟಿ ಮಂದಿ ಭೇಟಿ ನೀಡುವ ನಿರೀಜ್ಷೆ ಇದೆ. ಆದರೆ ಜನರು ಮಾಸ್ಕ್ ಹಾಕಿಕೊಳ್ಳಬೇಕಾಗಬಹುದು. ಜತೆಗೆ ಸಾಮಾಜಿಕ ಅಂತರದ ನಿಯಮ ಪಾಲಿಸಬೇಕಾಗಬಹುದು ಎಂದು ಎಕ್ಸ್ಪೋದ ವಕ್ತಾರ ಬ್ಲೂಮ್ಬರ್ಗ್ ನ್ಯೂಸ್ಗೆ ತಿಳಿಸಿದ್ದಾರೆ. “ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುತ್ತೇವೆ, ಸಂದರ್ಶಕರಿಗೆ ಸದ್ಯಕ್ಕೆ ಲಸಿಕೆ ಪಡೆದಿದ್ದಕ್ಕೆ ಅಥವಾ ನೆಗೆಟಿವ್ ಪಿಸಿಆರ್ ಟೆಸ್ಟ್ಗೆ ಸಾಕ್ಷ್ಯ ನೀಡಬೇಕು ಅಂತೇನಿಲ್ಲ,” ಎಂದು ವಕ್ತಾರರು ತಿಳಿಸಿದ್ದಾರೆ. ಆದರೂ ನಾವು ಸನ್ನಿವೇಶ ಬದಲಾದಂತೆ ಅಗತ್ಯ ಕ್ರಮಗಳಗಳನ್ನು ಕೈಗೊಳ್ಳುತ್ತೇವೆ ಮತ್ತು ಮೇಲ್ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ಬಿಜಿನೆಸ್ ಹಬ್ ದುಬೈ. ಕೊರೊನಾ ಕಾಣಿಸಿಕೊಂಡ ನಂತರ ಆರ್ಥಿಕತೆ ಮೇಲೆ ಬಲವಾದ ಹೊಡೆತ ಬಿದ್ದಿದೆ. ಏಕೆಂದರೆ, ಇದನ್ನು ಕಟ್ಟಿರುವುದೇ ಅಂತರರಾಷ್ಟ್ರೀಯ ವಾಣಿಜ್ಯ ಮತ್ತು ಹನಕಾಸು ವ್ಯವಹಾರಗಳ ಮೇಲೆ. ಕೊರೊನೆ ನೆಗೆಟಿವ್ ವರದಿ ಇದ್ದಲ್ಲಿ ಯುಎಇಗೆ ಪ್ರವೇಶ ಇದೆ. ಕೆಲವರಿಗೆ ದುಬೈ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಪರೀಕ್ಷೆ ಫಲಿತಾಂಶ ಬರುವ ತನಕ ಸ್ವಯಂ ಆಗಿ ಪ್ರತ್ಯೇಕವಾಗಿರಬೇಕು. ಎಕ್ಸ್ಪೋ 2020 ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಬಹಳ ವೇಗವಾಗಿ ದುಬೈನಲ್ಲಿ ಲಸಿಕೆ ಹಾಕುವ ಅಭಿಯಾನ ನಡೆಯಿತು.
ನಿತ್ಯ 1000ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕೊರೊನಾ ಪ್ರಕರಣ ಬ್ಲೂಮ್ಬರ್ಗ್ ಲಸಿಕೆ ಟ್ರ್ಯಾಕರ್ ಪ್ರಕಾರ, ವಿಶ್ವದಲ್ಲೇ ಅತ್ಯಂತ ವೇಗವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಿದ್ದರಲ್ಲಿ ದುಬೈ ಕೂಡ ಒಂದು. ಆಗಸ್ಟ್ನಿಂದ ಈಚೆಗೆ ಇಲ್ಲಿ ನಿತ್ಯವೂ 1000ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ವರದಿ ಆಗುತ್ತಿವೆ. ದುಬೈ ಎಕ್ಸ್ಪೋದ ಈಗಿನ ನಿಯಮ ಉಳಿದ ದೇಶಗಳಿಗೆ ಹೋಲಿಸಿದರೆ ವಿರುದ್ಧವಾಗಿದೆ. ಉದಾಹರಣೆಗೆ ಯುನೈಟೆಡ್ ಕಿಂಗ್ಡಮ್ನಲ್ಲಿ ಲಸಿಕೆ ಪಾಸ್ಪೋರ್ಟ್ ಇದ್ದಲ್ಲಿ ಮಾತ್ರ ದೊಡ್ಡ ಸ್ಥಳಗಳಿಗೆ ತೆರಳಲು ಸಾಧ್ಯ. ಇನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ನಿಯಮ ಮಾಡಿದ್ದು, ಹೊರಗೆ ಊಟಕ್ಕೆ ಹೋಗಲು ಅಥವಾ ಪ್ರಯಾಣಕ್ಕೆ ಲಸಿಕೆಗೆ ಸಾಕ್ಷ್ಯ ಅಥವಾ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದಾರೆ. ಇದಕ್ಕೆ ಸಾಂವಿಧಾನಿಕ ಕೋರ್ಟ್ ಕೂಡ ಬೆಂಬಲಿಸಿದೆ.
ಎಕ್ಸ್ಪೋ ನಡೆಸುವ ಜಾಗದಲ್ಲಿ ಹತ್ತಾರು ಚೆಕ್ಪೋಸ್ಟ್ಗಳು ಇರುತ್ತವೆ. ಸಂದರ್ಶಕರ ಪ್ರವೇಶಕ್ಕೆ ಪಾಸ್ ನೀಡಲಾಗುತ್ತದೆ, ಜತೆಗೆ ಬರುವವರು ಮಾಸ್ಕ್ ಧರಿಸಬೇಕು. ಕಠಿಣವಾದ ಸಾಮಾಜಿಕ ಅಂತರದ ನಿಯಮವನ್ನು ಅನುಸರಿಸಬೇಕು. ಪ್ರತಿ ಮೂಲೆಯಲ್ಲೂ ಸ್ಯಾನಿಟೈಸ್ ಸ್ಟೇಷನ್ಗಳು ಇರುತ್ತವೆ. ಅಷ್ಟೇ ಅಲ್ಲ, ಪ್ರದರ್ಶನದಲ್ಲಿ ರೋಬೋಟ್ ಮತ್ತು ವೇರಬಲ್ ತಂತ್ರಜ್ಞಾನ ಬಳಸಲಾಗುತ್ತದೆ. ಆ ಮೂಲಕವೇ ಸಂದರ್ಶಕರ ಜತೆಗೆ ಮಾತುಕತೆ, ಟಿಕೆಟ್ ನೀಡುವುದು, ಸರತಿ ಸಂಭಾಳಿಸುವುದು ಆಗುತ್ತದೆ. ಇನ್ನು ಈ ಎಕ್ಸ್ಪೋದಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿ ಎರಡು ಡೋಸ್ ಲಸಿಕೆ ಪಡೆದಿರುತ್ತಾರೆ. 2013ರಲ್ಲಿ ಬ್ರೆಜಿಲ್ ಮತ್ತು ಟರ್ಕಿ ಸೇರಿದಂತೆ ಇತರ ದೇಶಗಳನ್ನೂ ಮಣಿಸಿ, ಎಕ್ಸ್ಪೋ 2020 ಆತಿಥ್ಯ ವಹಿಸುವುದಕ್ಕೆ ದುಬೈ ಅವಕಾಶ ಪಡೆದಿತ್ತು.
2020ರ ಅಕ್ಟೋಬರ್ಗೆ ನಿಗದಿ ಮಾಡಲಾಗಿತ್ತು ಎಮಿರೇಟ್ಸ್ನಿಂದ ಬಿಲಿಯನ್ಗಟ್ಟಲೆ ಡಾಲರ್ಗಳನ್ನು ಖರ್ಚು ಮಾಡಿ, ಮೂಲಸೌಕರ್ಯದ ಸಿದ್ಧತೆ ಮಾಡಲಾಗಿದೆ. ಅದೀಗ ಸಣ್ಣ ಪಟ್ಟಣದಂತಾಗಿದೆ. ನೂರಾರು ಫುಟ್ಬಾಲ್ ಮೈದಾನದಷ್ಟು ವಿಶಾಲವಾಗಿದೆ. ಆರಂಭದಲ್ಲಿ ಈ ಪ್ರದರ್ಶನವನ್ನು 2020ರ ಅಕ್ಟೋಬರ್ಗೆ ನಿಗದಿ ಮಾಡಲಾಗಿತ್ತು. ಹತ್ತಾರು ಲಕ್ಷ ಸಂದರ್ಶಕರು ಭೇಟಿ ನೀಡಿ, ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಕಾರಣದಿಂದಾಗಿ ಜಾಗತಿಕ ಆರ್ಥಿಕತೆಗೆ ಪೆಟ್ಟು ಬಿತ್ತು. ಸರ್ಕಾರವು ಈ ಕಾರ್ಯಕ್ರಮವನ್ನು ಮುಂದೂಡಿತು ಹಾಗೂ ತನ್ನ ಗುರಿಯನ್ನು ಮತ್ತೊಮ್ಮೆ ಚಿಂತಿಸಲು ನಿರ್ಧರಿಸಿತು.
ಈ ಎಕ್ಸ್ಪೋಗಾಗಿ 680 ಕೋಟಿ ಅಮೆರಿಕನ್ ಡಾಲರ್ (2500 ಕೋಟಿ ದಿರ್ಹಾಮ್ಸ್) ಬಂಡವಾಳ ವೆಚ್ಚವನ್ನು ಮಾಡಲಾಗಿದೆ ಮತ್ತು ಅದಿನ್ನೂ ಮುಂದುವರಿದಿದೆ. ಅದರಿಂದ ಸಾಕಷ್ಟು ಆರ್ಥಿಕ ಪರಿಣಾಮ ಆಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ. ಆದರೆ ಎಕ್ಸ್ಪೋ 2020 ಎಂಬುದು ಹಾಗತಿಕ ಹೂಡಿಕೆ ಸಮಾವೇಶಕ್ಕಿಂತ ದೊಡ್ಡದು. ಭವಿಷ್ಯದ ನಗರವನ್ನು ನಿರ್ಮಿಸಬೇಕು ಎಂಬುದು ಯಾವಾಗಲೂ ನಮ್ಮ ಉದ್ದೇಶ ಎಂದು ಆತ ಸೇರಿಸಿದ್ದಾರೆ.
ಇದನ್ನೂ ಓದಿ: ಗೋಲ್ಡ್ ಲೇಪನದ ವಡಾಪಾವ್ಗೆ 2,000ರೂ.; ದುಬೈನಲ್ಲಿ ಫೇಮಸ್ ಆಯ್ತು ಹೊಸ ರೆಸಿಪಿ
(Worlds Biggest Event Dubai Expo 2020 Not Required Proof Of Vaccination Or Negative Report Of Covid19)
Published On - 11:21 pm, Fri, 10 September 21