ಗೋಲ್ಡ್​ ಲೇಪನದ ವಡಾಪಾವ್​ಗೆ 2,000ರೂ.; ದುಬೈನಲ್ಲಿ ಫೇಮಸ್​ ಆಯ್ತು ಹೊಸ ರೆಸಿಪಿ

TV9 Digital Desk

| Edited By: shruti hegde

Updated on:Sep 02, 2021 | 11:59 AM

Viral News: ಬೆಲೆ ಕೇಳಿದಾಕ್ಷಣ ಖರೀದಿಸಬೇಕೋ.. ಬೇಡ್ವೋ.. ಎಂಬ ಗೊಂದಲವಾದ್ರೂ ಸಹ ಹೊಸ ವಿಧದ ಖಾದ್ಯದ ಹೆಸರು ಕೇಳಿದಾಕ್ಷಣ ಒಮ್ಮೆಯಾದ್ರೂ ಸವಿಯಲೇಬೇಕು ಅನ್ನಿಸುವುದು ಸಹಜ.

ಗೋಲ್ಡ್​ ಲೇಪನದ ವಡಾಪಾವ್​ಗೆ 2,000ರೂ.; ದುಬೈನಲ್ಲಿ ಫೇಮಸ್​ ಆಯ್ತು ಹೊಸ ರೆಸಿಪಿ
ದುಬೈನಲ್ಲಿ ಫೇಮಸ್​ ಆಯ್ತು ಹೊಸ ರೆಸಿಪಿ
Follow us

ಸಾಮಾನ್ಯವಾಗಿ ಬೀದಿ ಬದಿಗಿನ ತಿಂಡಿಗಳು ಅಂದ್ರೆ ಯುವ ಪೀಳಿಗೆಗೆ ಹೆಚ್ಚು ಇಷ್ಟವಾಗುತ್ತೆ. ದಿನ ಸಾಗುತ್ತಿದ್ದಂತೆಯೇ ಆಹಾರದಲ್ಲಿಯೂ ಸಹ ಹೊಸ ಹೊಸ ವಿಧಗಳು ಬರುತ್ತಲೇ ಇದೆ. ವಿವಿಧ ರುಚಿ, ಹೊಸ ಹೆಸರು ಕೇಳಿದಾಕ್ಷಣವೇ ಒಂದು ಬಾರಿಯಾದ್ರೂ ರುಚಿ ಸವಿಯಲೇಬೇಕು ಅನ್ನಿಸಿ ಬಿಡುತ್ತೆ. ಇತ್ತೀಚೆಗಷ್ಟೇ ಗೋಲ್ಡ್ ಬರ್ಗರ್, ಗೋಲ್ಡ್ ಫ್ರೆಂಚ್ ಫ್ರೈಗಳು ಫೇಮಸ್ ಆಗಿದ್ದವು. ಇದೀಗ ವೈರಲ್ ಅದ ಸುದ್ದಿಯೆಂದರೆ ಮೊದಲ ಬಾರಿಗೆ ಚಿನ್ನದ ಲೇಪನದಿಂದ ತಯಾರಿಸಿದ ವಡಾಪಾವ್ ಸವಿಯಲು ಜನರು ಸಿದ್ಧರಾಗಿದ್ದಾರೆ. ದುಬೈನಲ್ಲಿ ಫೇಮಸ್ ಆಗುತ್ತಿರುವ ಗೋಲ್ಡ್​ ವಡಾಪಾವ್ ಸವಿಯಲು ಜನರು ಮುಗಿಬಿದ್ದಿದ್ದಾರೆ.

ದುಬೈನಲ್ಲಿ ಈಗಾಗಲೇ ಗೋಲ್ಡ್ ವಡಾಪಾವ್ ಸವಿಯಲು ಸಿಗುತ್ತಿದೆ. ಇದರ ಬೆಲೆ ಕೇಳಿದಾಕ್ಷಣ ಖರೀದಿಸಬೇಕೋ.. ಬೇಡ್ವೋ.. ಎಂಬ ಗೊಂದಲವಾದ್ರೂ ಸಹ ಹೊಸ ವಿಧದ ಖಾದ್ಯದ ಹೆಸರು ಕೇಳಿದಾಕ್ಷಣ ಒಮ್ಮೆಯಾದ್ರೂ ಸವಿಯಲೇಬೇಕು ಅನ್ನಿಸುವುದು ಸಹಜ. ಇದರ ಹಣ ಬರೋಬ್ಬರಿ 2,000 ರೂಪಾಯಿ. ನೀವು ರುಚಿ ಸವಿಯಬೇಕು ಅಂದುಕೊಂಡ್ರೆ ದುಬೈಗೇ ತೆರಳಬೇಕು.

View this post on Instagram

A post shared by O’Pao (@opaodxb)

ಈ ಹೊಸ ರೆಸಿಪಿ ಗೋಲ್ಡ್ ವಡಾಪಾವ್ ಬೆಣ್ಣೆ, ಚೀಸ್​ನೊಂದಿಗೆ ಸಿದ್ಧವಾಗಿದೆ. ಸಿಹಿ ಆಲೂಗಡ್ಡೆ ಬಳಸಿ ತಯಾರಿಸಿದ ಫ್ರೈಸ್ ಮತ್ತು ಪುದೀನ, ನಿಂಬೆ ಪಾನಕದೊಂದಿಗೆ ಬರುತ್ತದೆ. ಇದನ್ನು ಹೇಗೆ ತಯಾರಿಸಲಾಗಿದೆ ಎಂಬ ಕುತೂಹಲವಿದ್ದರೆ ಸುದ್ದಿಯನ್ನು ಪೂರ್ತಿ ಓದಿ.

ಇದನ್ನು ವಿಶೇಷವಾಗಿ ಟ್ರಫಲ್ ಬಟರ್​ನಿಂದ ತಯಾರಿಸಲಾಗುತ್ತದೆ. ಇದು ಫ್ರಾನ್ಸ್​ನಿಂದ ಬಂದಿದ್ದು, ಪಾವ್ಅನ್ನು ಮಿಂಟ್ ಎಲೆಗಳಿಂದ ಸಿದ್ಧಪಡಿಸಲಾಗುತ್ತದೆ. ಫ್ರಾನ್ಸ್​ನಿಂದ ಆಮದು ಮಾಡಿದ ಪ್ರೀಮಿಯಂ ಗುಣಮಟ್ಟದ  22 ಕ್ಯಾರೆಟ್ ಚಿನ್ನದ ಲೇಪನದೊಂದಿಗೆ ಗೋಲ್ಡ್ ವಡಾಪಾವ್ ತಯಾರಿಸಲಾಗುತ್ತದೆ.

ಹೊಸ ರೆಸಿಪಿಯಾದ ಗೋಲ್ಡ್ ವಡಾಪಾವ್ ಇದೀಗ ಭಾರೀ ಸುದ್ದಿಯಲ್ಲಿದೆ. ಟ್ವಿಟರ್​ನಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದ್ದು, 20,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನಾನಾ ಪ್ರತಿಕ್ರಿಯೆಗಳನ್ನು ಇದು ಪಡೆದುಕೊಳ್ಳುತ್ತಿದ್ದು, ಇದೀಗ ಚಿನ್ನದ ಗುಣಮಟ್ಟದ ವಡಾಪಾವ್ಅನ್ನು ಜನರು ಸವಿಯುತ್ತಿದ್ದಾರೆ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Ice Cream: ಜಗತ್ತಿನ ಅತಿ ದುಬಾರಿ ಐಸ್​ ಕ್ರೀಂ ಟೇಸ್ಟ್​ ಮಾಡಬೇಕಾ?; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

Kichcha Sudeep: ವೈರಲ್​ ಆಯ್ತು ಕಿಚ್ಚ ಸುದೀಪ್​ ಹೊಸ ಹೇರ್​ಸ್ಟೈಲ್​

(World first 22k gold plated vadapav launched in dubai rs 2,000)

ತಾಜಾ ಸುದ್ದಿ

Related Stories

Click on your DTH Provider to Add TV9 Kannada