Viral Video: ದೆಹಲಿ ಮಹಾನಗರದ ಮಧ್ಯದಲ್ಲೇ ಸೃಷ್ಟಿಯಾಯ್ತು ಜಲಪಾತ! ಭಾರೀ ಮಳೆಗೆ ಅಸ್ತವ್ಯಸ್ತವಾಯ್ತು ರಾಷ್ಟ್ರ ರಾಜಧಾನಿ

ಜಲಪಾತಗಳ ನಗರ ದೆಹಲಿಗೆ ಸ್ವಾಗತ ಎಂಬ ತಲೆಬರಹ ನೀಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ನೀರು ರಸ್ತೆಯ ಮೇಲೆ ಧುಮ್ಮಿಕ್ಕುತ್ತಿರುವುದು ಕಾಣಿಸುತ್ತದೆ. ಕೆಲವರು ಅದನ್ನು ದೆಹಲಿಯ ನಯಾಗರ ಜಲಪಾತ ಎಂದೂ ಬಣ್ಣಿಸಿದ್ದಾರೆ. ಅಂದಹಾಗೆ, ಆ ನೀರು ಬೀಳುತ್ತಿರುವುದು ದೆಹಲಿಯ ಫ್ಲೈ ಓವರ್​ ಒಂದರ ಮೇಲಿನಿಂದ.

Viral Video: ದೆಹಲಿ ಮಹಾನಗರದ ಮಧ್ಯದಲ್ಲೇ ಸೃಷ್ಟಿಯಾಯ್ತು ಜಲಪಾತ! ಭಾರೀ ಮಳೆಗೆ ಅಸ್ತವ್ಯಸ್ತವಾಯ್ತು ರಾಷ್ಟ್ರ ರಾಜಧಾನಿ
ವೈರಲ್​ ವಿಡಿಯೋದಲ್ಲಿ ಕಂಡುಬಂದ ದೃಶ್ಯ
Follow us
TV9 Web
| Updated By: Skanda

Updated on: Sep 03, 2021 | 8:11 AM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸೆಪ್ಟೆಂಬರ್​​ ತಿಂಗಳ ದಿನವೊಂದರಲ್ಲಿ ಅತ್ಯಧಿಕ ಪ್ರಮಾಣದ ಮಳೆಗೆ ದೆಹಲಿ ಸಾಕ್ಷಿಯಾಗಿದೆ. ಬುಧವಾರ (ಸೆಪ್ಟೆಂಬರ್​ 1, 2021) ಬೆಳಗ್ಗೆ 8.30ಕ್ಕೆ ಲಭ್ಯವಾದ ಅಂಕಿ ಅಂಶಗಳ ಪ್ರಕಾರ ದೆಹಲಿಯಲ್ಲಿ 24 ಗಂಟೆಯಲ್ಲಿ 112.1 ಮಿಲಿ ಮೀಟರ್​ ಮಳೆ ಸುರಿದಿದ್ದು, ಜನ ಜೀವನ ಕೂಡಾ ಅಸ್ತವ್ಯಸ್ತವಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ನೀಡಿದ ಮಾಹಿತಿ ಅನ್ವಯ ದೆಹಲಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಸರಾಸರಿ 125.1 ಮಿಲಿ ಮೀಟರ್​ ಮಳೆ ಸುರಿಯುವ ವಾಡಿಕೆ ಇದೆ. ಆದರೆ, ಈ ಬಾರಿ ಸೆಪ್ಟೆಂಬರ್​ ತಿಂಗಳ ಮೊದಲ ದಿನವೇ ಈ ವಾಡಿಕೆಯ ಶೇ.90ರಷ್ಟು ಪಾಲು ಮಳೆ ಬಂದಿದ್ದು, ಜನ ಸಾಮಾನ್ಯರು ಕಂಗೆಡುವಂತೆ ಮಾಡಿದೆ. ದೆಹಲಿಯಲ್ಲಾಗುವ ಮಳೆಯ ಪ್ರಮಾಣದ ಬಗ್ಗೆ ನಿಖರ ಮಾಹಿತಿ ನೀಡುವ ಸಂಸ್ಥೆಯೊಂದು ಕೂಡಾ ಬುಧವಾರ ಬೆಳಗ್ಗೆ 8.30ಕ್ಕೆ ಮುಕ್ತಾಯವಾಗುವಂತೆ 24 ಗಂಟೆ ಅವಧಿಯಲ್ಲಿ 112.1 ಮಿಲಿ ಮೀಟರ್​ ಮಳೆ ದಾಖಲಾಗಿದೆ ಎಂದು ತಿಳಿಸಿದೆ.

ಸದ್ಯ ದೆಹಲಿಯ ಭಾರೀ ಮಳೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ನಗರ ಪ್ರದೇಶಗಳಲ್ಲಿ ನೀರು ಹರಿಯುತ್ತಿರುವುದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿರುವುದು, ವಾಹನ ಪ್ರಯಾಣಿಕರು ನೀರಿನ ನಡುವೆ ಕಷ್ಟಪಟ್ಟು ಸಾಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆದ ವಿಡಿಯೋ ಎಂದರೆ ದೆಹಲಿಯ ಜಲಪಾತದ್ದು!

ಅರೆ! ದೆಹಲಿ ನಗರದಲ್ಲಿ ಜಲಪಾತ ಎಲ್ಲಿಂದ ಉದ್ಭವವಾಯ್ತು ಎಂದು ಈ ವಿಡಿಯೋ ನೋಡಿ ಹಲವರು ಉದ್ಘರಿಸಿದ್ದಾರೆ. ಜಲಪಾತಗಳ ನಗರ ದೆಹಲಿಗೆ ಸ್ವಾಗತ ಎಂಬ ತಲೆಬರಹ ನೀಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ನೀರು ರಸ್ತೆಯ ಮೇಲೆ ಧುಮ್ಮಿಕ್ಕುತ್ತಿರುವುದು ಕಾಣಿಸುತ್ತದೆ. ಕೆಲವರು ಅದನ್ನು ದೆಹಲಿಯ ನಯಾಗರ ಜಲಪಾತ ಎಂದೂ ಬಣ್ಣಿಸಿದ್ದಾರೆ. ಅಂದಹಾಗೆ, ಆ ನೀರು ಬೀಳುತ್ತಿರುವುದು ದೆಹಲಿಯ ಫ್ಲೈ ಓವರ್​ ಒಂದರ ಮೇಲಿನಿಂದ. ಭಾರೀ ಮಳೆಗೆ ಫ್ಲೈ ಓವರ್​ ಮೇಲೆ ಸಂಗ್ರಹವಾದ ನೀರು ಥೇಟ್​ ಜಲಪಾತಗಳು ಧುಮ್ಮಿಕ್ಕುವಂತೆಯೇ ರಸ್ತೆಗೆ ಬೀಳುತ್ತಿದ್ದು, ಕೆಳಗೆ ಹಾದು ಹೋಗುವ ವಾಹನಗಳಿಗೆಲ್ಲಾ ಮಹಾಮಜ್ಜನ ಆಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಭೋರ್ಗರೆದು ಬೀಳುತ್ತಿರುವ ನೀರಿಗೆ ಕಾರೊಂದನ್ನು ನಿಲ್ಲಿಸಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಇನ್ನೊಂದು ಕಾರಿನಲ್ಲಿ ಕುಳಿತವರು ದೃಶ್ಯವನ್ನು ಸೆರೆಹಿಡಿದಿದ್ದಾರೆ. ದೆಹಲಿಯ ಜಲಪಾತವನ್ನು ಕಂಡು ಕಣ್ತುಂಬಿಕೊಳ್ಳಿ ಎಂದು ಟ್ವಿಟರ್​ನಲ್ಲಿ ಆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಅದು ಸಾವಿರಾರು ವೀಕ್ಷಕರನ್ನು ಗಳಿಸಿದ್ದು, ಕೆಲವರಂತೂ ಹೀಗೆ ಜಲಪಾತದ ಬುಡಕ್ಕೆ ಕಾರನ್ನು ತೆಗೆದುಕೊಂಡು ಹೋಗುವ ಅದೃಷ್ಟ ಯಾವ ಊರಿನವರಿಗೆ ಸಿಗುತ್ತದೆ ಹೇಳಿ, ಈ ವಿಚಾರದಲ್ಲಿ ದೆಹಲಿಯವರೇ ಲಕ್ಕಿ! ಎಂದು ವ್ಯಂಗ್ಯ ಮಾಡಿದ್ದಾರೆ.

(Waterfall in Delhi city due to Heavy Rain watch the viral video)

ಇದನ್ನೂ ಓದಿ: Karnataka Dams Water Level: ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ 

Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ