Viral Video: ಮಾಸ್ಕ್ ಧರಿಸದಿದ್ದಕ್ಕಾಗಿ ಸೈನಿಕನನ್ನು ಥಳಿಸಿದ ಪೊಲೀಸರು; ಮೂವರು ಅಮಾನತು

ಸೈನಿಕ ತನ್ನ ಬೈಕಿನಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಪೊಲೀಸರು ಆತನನ್ನು ತಡೆದಿದ್ದಾರೆ. ಓರ್ವ ಪೊಲೀಸ್ ಬೈಕಿನ ಕೀಲಿಯನ್ನು ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಸೈನಿಕ ಯಾದವ್ ಅವರು ಸರಿಯಾಗಿ ವರ್ತಿಸುವಂತೆ ಪೊಲೀಸರಿಗೆ ಎಚ್ಚರಿಸಿದ್ದಾರೆ.

Viral Video: ಮಾಸ್ಕ್ ಧರಿಸದಿದ್ದಕ್ಕಾಗಿ ಸೈನಿಕನನ್ನು ಥಳಿಸಿದ ಪೊಲೀಸರು; ಮೂವರು ಅಮಾನತು
ಮಾಸ್ಕ್ ಧರಿಸದಿದ್ದಕ್ಕಾಗಿ ಸೈನಿಕನನ್ನು ಥಳಿಸಿದ ಪೊಲೀಸರು
Follow us
TV9 Web
| Updated By: shruti hegde

Updated on:Sep 03, 2021 | 10:16 AM

ಮಾಸ್ಕ್​ ಧರಿಸದ ಕಾರಣಕ್ಕಾಗಿ ಪೊಲೀಸರ ಗುಂಪು, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಘಟನೆ ಜಾರ್ಖಂಡ್​ನ ಚತ್ರ ಎಂಬ ಜಿಲ್ಲೆಯಲ್ಲಿ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಸೈನಿಕ ಪವನ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಚತ್ರಾದ ಮಾರುಕಟ್ಟೆಯಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದರು. ಆಸಮಯದಲ್ಲಿ ಮಾಸ್ಕ ಧರಿಸದ ಯಾದವ್​ ಅವರನ್ನು ನೋಡಿದ್ದಾರೆ. ಆತನ ಮೇಲೆ ಕ್ರಮ ಕೈಗೊಂಡು ಥಳಿಸಿದ್ದಾರೆ. ಅದೊಂದೇ ಅಲ್ಲದೇ ಲಾಠಿ ಪ್ರಹಾರ ಮಾಡಿ ಕಾಲಿನಿಂದ ಒದ್ದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಆ ಸಂದರ್ಭದಲ್ಲಿ ಪೊಲೀಸರು ಸಹ ಮಾಸ್ಕ್ ಧರಿಸಿರಲಿಲ್ಲ ಎಂಬುದು ವಿಡಿಯೋದಲ್ಲಿ ಕಂಡು ಬಂದಿದೆ.

ಸೈನಿಕ ತನ್ನ ಬೈಕಿನಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಪೊಲೀಸರು ಆತನನ್ನು ತಡೆದಿದ್ದಾರೆ. ಓರ್ವ ಪೊಲೀಸ್ ಬೈಕಿನ ಕೀಲಿಯನ್ನು ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಸೈನಿಕ ಯಾದವ್ ಅವರು, ಸರಿಯಾಗಿ ವರ್ತಿಸುವಂತೆ ಪೊಲೀಸರಿಗೆ ಎಚ್ಚರಿಸಿದ್ದಾರೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಪೊಲೀಸರು ಸೈನಿಕನನ್ನು ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಸ್ಥಳೀಯ ಪೊಲೀಸ್ ಕ್ರಮದ ವಿರುದ್ಧ ಪ್ರತಿಭಟನೆ ಆರಂಭಗೊಂಡಿದೆ. ಘಟನೆ ಮಯೂರ್​ಹಂಡ್​ ಪೊಲೀಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ.

ನಾನು ಓರ್ವ ಹವಾಲ್ದಾರ ಮತ್ತು ಇಬ್ಬರು ಕಾನ್​ಸ್ಟೇಬಲ್​ರನ್ನು ಅಮಾನತುಗೊಳಿಸಿದ್ದೇನೆ. ಸೈನಿಕ ತನ್ನ ಬೈಕನಲ್ಲಿ ಮೂವರನ್ನು ಕುಳಿಸಿಕೊಂಡು ಸವಾರಿ ಮಾಡುತ್ತಿದ್ದನು. ಜತೆಗೆ ಆತ ಮಾಸ್ಕ್ ಕೂಡಾ ಧರಿಸಿರಲಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಪೊಲೀಸರು ಆತನನ್ನು ತಡೆದಾಗ ಅಸಭ್ಯವಾಗಿ ವರ್ತಿಸಿದ್ದಾರೆ ಹಾಗಾಗಿ ಪೊಲೀಸರು ಅವರ ಮೇಲೆ ಕೈ ಎತ್ತಿದ್ದಾರೆ ಎಂದು ಚತ್ರಾ ಎಸ್​ಪಿ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಇದನ್ನೂ ಓದಿ:

ಯಾದಗಿರಿ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್​ಟೇಬಲ್​ಗೆ ಥಳಿತ

ಮಾಟ-ಮಂತ್ರ ಎಂದು ಜನರಿಗೆ ಮೋಸ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ

(Viral Video jawan brutally thrashed by police for not wearing mask in jharkhand chatra)

Published On - 10:16 am, Fri, 3 September 21