ಸಮುದ್ರದ ನಡುವಲ್ಲಿ ಎದುರಾಯ್ತು ದೈತ್ಯ ಹಾವು; ಬೋಟ್​ನತ್ತ ಹಾವು ನುಗ್ಗಿ ಬಂದ ವಿಡಿಯೋ ವೈರಲ್​

ಹಾವಿನ ಈ ವರ್ತನೆಯನ್ನು ವರ್ಣಿಸಿರುವ ಬ್ರೋಡಿ ಮಾಸ್, ಹಾವಿನ ಈ ವರ್ತನೆ ಅದರ ಸಂತಾನ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಅದು ಕುತೂಹಲದಿಂದ ತನಗೆ ಸಂಗಾತಿ ಸಿಗಬಹುದೆಂದು ಭಾವಿಸಿ ಇತ್ತ ಹರಿದು ಬಂದಿದೆ. ಅದಲ್ಲದೇ ಇದ್ದರೆ ಹಾಗೆ ಮೈಮರೆತು ಮೋಸ ಹೋಗುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸಮುದ್ರದ ನಡುವಲ್ಲಿ ಎದುರಾಯ್ತು ದೈತ್ಯ ಹಾವು; ಬೋಟ್​ನತ್ತ ಹಾವು ನುಗ್ಗಿ ಬಂದ ವಿಡಿಯೋ ವೈರಲ್​
ಬೋಟ್​​ನತ್ತ ನುಗ್ಗಿ ಬಂದ ಹಾವು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲ ವಿಡಿಯೋಗಳು ಅರೆರೆ! ಎನ್ನಿಸುವಂತೆ ಇರುತ್ತವೆ. ಅದರಲ್ಲೂ ಪ್ರಾಣಿ, ಪಕ್ಷಿ, ಪ್ರಕೃತಿಗೆ ಸಂಬಂಧಿಸಿದ ಅಪರೂಪದ ವಿಚಾರಗಳು ಶರವೇಗದಲ್ಲಿ ಎಲ್ಲರ ಮೊಬೈಲ್​ಗೆ ಹೊಕ್ಕು ವೈರಲ್​ ಆಗಿಬಿಡುತ್ತವೆ. ಇತ್ತೀಚೆಗೆ ಆಸ್ಟ್ರೇಲಿಯಾದ ಯೂಟ್ಯೂಬರ್​ ಒಬ್ಬಾತ ಹಂಚಿಕೊಂಡ ವಿಡಿಯೋ ಒಂದು ಈಗ ಎಲ್ಲರ ಗಮನ ಸೆಳೆದು ಹುಬ್ಬೇರುವಂತೆ ಮಾಡುತ್ತಿದೆ. ಆಸಿಸ್​​ನ ಬ್ರೋಡಿ ಮಾಸ್​ ಎಂಬಾತ ಈ ವಿಡಿಯೋ ಮಾಡಿದ್ದು, ಅದನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್​ ಆಗಿ ಸದ್ದು ಮಾಡುತ್ತಿದೆ.

ಆತ ಹಂಚಿಕೊಂಡ ವಿಡಿಯೋ ಅಷ್ಟು ಸಂಚಲನ ಮೂಡಿಸೋಕೆ ಕಾರಣ ಸಮುದ್ರದ ದೈತ್ಯ ಹಾವು. ಸಾಧಾರಣವಾಗಿ ಮನುಷ್ಯರು ಅಥವಾ ಯಾವುದೇ ಅಪರಿಚಿತ ವಸ್ತುವಿನಿಂದ ದೂರ ಸರಿಯುವ ಆ ಜಾತಿಯ ಹಾವು ಇಲ್ಲಿ ಮಾತ್ರ ಇವನತ್ತಲೇ ನುಗ್ಗಿ ಬಂದಿದೆ. ತುಸು ದೂರದಿಂದಲೇ ಹಾವು ಹರಿದು ಬರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಅದರ ಈ ವರ್ತನೆಗೆ ಸ್ವತಃ ಬ್ರೋಡಿ ಮಾಸ್ ಬೆರಗಾಗಿದ್ದಾನೆ.

 

View this post on Instagram

 

A post shared by YBS (@brodiemoss)

ಶುಭ್ರ ಸಾಗರದಲ್ಲಿ ಈತನಿದ್ದ ಬೋಟ್​ನತ್ತಲೇ ಹರಿದು ಬಂದ ಕಂದು ಬಣ್ಣದ ದೈತ್ಯ ಹಾವು ಬರುವ ಶೈಲಿಯನ್ನು ನೋಡಿದರೆ ಎಂಥವರೂ ಭಯ ಬೀಳಬೇಕು. ಅಷ್ಟು ವೇಗವಾಗಿ ಬಂದ ಹಾವು ನೇರ ಈತನ ಸಮೀಪಕ್ಕೇ ಬಂದು ಒಮ್ಮೆ ಬೋಟ್​ನಲ್ಲಿ ಇಣುಕಿ ನೋಡಿ ಮತ್ತೆ ಫಟ್ಟನೆ ವಾಪಾಸ್​ ಹೋಗಿದೆ.

ಆಹಾರವನ್ನು ಅರಸಿ ಬರುವಂತೆ ಬಂದ ಹಾವು, ಬೋಟ್​ ಒಳಗೆ ಒಮ್ಮೆ ಇಣುಕಿ ವಾಪಾಸ್​ ಆಗಿರುವುದು ಅಚ್ಚರಿ ಮೂಡಿಸಿದೆ. ಆದರೆ, ಹಾವಿನ ಈ ವರ್ತನೆಯನ್ನು ವರ್ಣಿಸಿರುವ ಬ್ರೋಡಿ ಮಾಸ್, ಹಾವಿನ ಈ ವರ್ತನೆ ಅದರ ಸಂತಾನ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಅದು ಕುತೂಹಲದಿಂದ ತನಗೆ ಸಂಗಾತಿ ಸಿಗಬಹುದೆಂದು ಭಾವಿಸಿ ಇತ್ತ ಹರಿದು ಬಂದಿದೆ. ಅದಲ್ಲದೇ ಇದ್ದರೆ ಹಾಗೆ ಮೈಮರೆತು ಮೋಸ ಹೋಗುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:
Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

ವಿಷಪೂರಿತ ಹಾವನ್ನು ಹಿಡಿದು ಕಚ್ಚಿ ಸಾಯಿಸಿದ ವ್ಯಕ್ತಿ; ನೋವು ತಾಳಲಾರದೇ ಸತ್ತ ಹಾವು

Read Full Article

Click on your DTH Provider to Add TV9 Kannada