AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷಪೂರಿತ ಹಾವನ್ನು ಹಿಡಿದು ಕಚ್ಚಿ ಸಾಯಿಸಿದ ವ್ಯಕ್ತಿ; ನೋವು ತಾಳಲಾರದೇ ಸತ್ತ ಹಾವು

ಕೆಲವೇ ಹೊತ್ತಿನಲ್ಲಿ ಆತನ ಈ ಸಾಹಸಗಾಥೆ ಇಡೀ ಊರಿಗೆ ಪಸರಿಸಿದ್ದು, ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ, ಕಿಶೋರ್​ ಬಾದ್ರಾ ಮಾತ್ರ ಅವರ ಮಾತಿಗೆ ಕಿವಿಗಡದೇ ನಾಟಿ ಔಷಧಿ ನೀಡುವವರ ಬಳಿ ಹೋಗಿದ್ದಾನೆ.

ವಿಷಪೂರಿತ ಹಾವನ್ನು ಹಿಡಿದು ಕಚ್ಚಿ ಸಾಯಿಸಿದ ವ್ಯಕ್ತಿ; ನೋವು ತಾಳಲಾರದೇ ಸತ್ತ ಹಾವು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 13, 2021 | 2:26 PM

Share

ಒಡಿಶಾ: ಒಡಿಶಾ ರಾಜ್ಯದ ಜೈಪುರ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನಗೆ ಕಡಿದ ಹಾವನ್ನು ಕಚ್ಚಿ ಕೊಂದಿದ್ದಾನೆ. 45 ವರ್ಷ ವಯಸ್ಸಿನ ಆದಿವಾಸಿ ವ್ಯಕ್ತಿ ಕಿಶೋರ್​ ಬಾದ್ರಾ ವಿಷಕಾರಿ ಹಾವನ್ನು ಬಾಯಿಯಿಂದಲೇ ಕಚ್ಚಿ ಸಾಯಿಸಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾನೆ. ಗಂಭರೀಪಟಿಯಾ ಹಳ್ಳಿಯ ಸಲಿಜಂಗಾ ಪಂಚಾಯತಿ ವ್ಯಾಪ್ತಿಯ ದಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಹೊಲದ ಕೆಲಸ ಮಾಡಿ ಬರುತ್ತಿದ್ದಾಗ ಹಾವು ಕಡಿಯಿತೆಂದು ಈ ವ್ಯಕ್ತಿ ಅದನ್ನು ಹಿಡಿದು ಸೇಡು ತೀರಿಸಿಕೊಂಡಿದ್ದಾನೆ. ಕಡಿದ ಹಾವು ಅತ್ಯಂತ ವಿಷಕಾರಿಯಾಗಿದ್ದು, ಈತ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ಬಳಿಕ ಸುತ್ತಮುತ್ತಲ ಊರುಗಳಲ್ಲೆಲ್ಲಾ ಆತನ ಸಾಹಸದ ಬಗ್ಗೆ ಮಾತುಗಳು ಶುರುವಾಗಿದ್ದು, ಹಾವನ್ನು ಕೊಂದಿದ್ದು ಹೇಗೆ ಎನ್ನುವ ಬಗ್ಗೆ ಸ್ವತಃ ಕಿಶೋರ್​ ಬಾದ್ರಾ ವಿವರಣೆ ನೀಡಿದ್ದಾನೆ. ನಾನು ಹೊಲದಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾಲಿನ ಮೇಲೆ ಏನೋ ಹರಿದಾಡಿ ಕಡಿದ ಅನುಭವ ಆಯಿತು. ಆಗ ಕತ್ತಲಾಗಿತ್ತಾದ್ದರಿಂದ ಸೂಕ್ಷ್ಮವಾಗಿ ಗಮನಿಸಿದೆ. ತಕ್ಷಣ ಮೊಬೈಲ್​ ಬೆಳಕಿನ ಸಹಾಯದಲ್ಲಿ ನೋಡಿದಾಗ ಅದೊಂದು ವಿಷಪೂರಿತ ಹಾವು ಎನ್ನುವುದು ಗಮನಕ್ಕೆ ಬಂತು ಎಂದಿದ್ದಾನೆ.

ವಿಷಕಾರಿ ಹಾವು ಎಂದು ಗೊತ್ತಾದ ತಕ್ಷಣವೇ ಅದನ್ನು ಕೈಯಲ್ಲಿ ಹಿಡಿದುಕೊಂಡು ಮನಸೋ ಇಚ್ಛೆ ಕಡಿಯಲಾರಂಭಿಸಿದೆ. ಅದರ ಮೇಲೆ ಸೇಡು ತೀರಿಸಿಕೊಳ್ಳಲೆಂದು ಹಾಗೆ ಮಾಡಿದೆ. ಕೊನೆಗೆ ಅದು ಸತ್ತು ಹೋಯಿತು. ಬಳಿಕ ಸತ್ತ ಹಾವನ್ನು ಕೈಯಲ್ಲಿ ಹಿಡಿದುಕೊಂಡೇ ಮನೆಗೆ ಬಂದು ಹೆಂಡತಿಗೆ ನಡೆದಿರುವ ಘಟನೆಯನ್ನು ಹೇಳಿದೆ ಎಂದು ವಿವರಿಸಿದ್ದಾನೆ.

ಕೆಲವೇ ಹೊತ್ತಿನಲ್ಲಿ ಆತನ ಈ ಸಾಹಸಗಾಥೆ ಇಡೀ ಊರಿಗೆ ಪಸರಿಸಿದ್ದು, ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ, ಕಿಶೋರ್​ ಬಾದ್ರಾ ಮಾತ್ರ ಅವರ ಮಾತಿಗೆ ಕಿವಿಗಡದೇ ನಾಟಿ ಔಷಧಿ ನೀಡುವವರ ಬಳಿ ಹೋಗಿದ್ದಾನೆ. ಅದೃಷ್ಟವಶಾತ್ ಹಾವು ಕಡಿದಾಗಲೂ, ಹಾವಿಗೆ ಈತ ತಿರುಗಿ ಕಡಿದಾಗಲೂ ವಿಷದ ಪ್ರಮಾಣ ದೇಹಕ್ಕೆ ಸೇರಿಲ್ಲವಾದ್ದರಿಂದ ಸಾವಿನ ದವಡೆಯಿಂದ ಆತ ಪಾರಾಗಿದ್ದಾನೆ.

(Man bites back and kill the poisonous snake bizarre incident goes Viral)

ಇದನ್ನೂ ಓದಿ: Viral Video: ಬರಿಗೈಯಲ್ಲೇ ಹಾವು ಹಿಡಿದ ಯುವತಿ! ನೋಡಿ ಭಯಗೊಳ್ಳಬೇಡಿ, ನೀವೂ ಹೀಗೆಲ್ಲಾ ಮಾಡಬೇಡಿ 

Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!