‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ

ಸಹದೇವ್​ ‘ಬಚ್ಪನ್​ ಕಾ ಪ್ಯಾರ್..’​ ಹಾಡನ್ನು ಹಾಡಿದ್ದ. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್​ ಸೃಷ್ಟಿಮಾಡಿತ್ತು.

‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ
‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 12, 2021 | 5:11 PM

 ಸೋಶಿಯಲ್​ ಮೀಡಿಯಾ ಇಂದು ಪವರ್​ಫುಲ್​ ಮಾಧ್ಯಮವಾಗಿ ಮಾರ್ಪಟ್ಟಿದೆ. ಯಾವುದೇ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಖ್ಯಾತಿ ಪಡೆದುಕೊಳ್ಳಬಹುದು. ಅದೇ ರೀತಿ, ಹಲವು ವರ್ಷಗಳಿಂದ ಗಳಿಸಿದ ಖ್ಯಾತಿ ರಾತ್ರಿ ಕಳೆಯುವರೊಳಗೆ  ಮಣ್ಣು ಪಾಲಾಗಬಹುದು. ಅಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಬೆಳೆದುಕೊಂಡಿದೆ. ಇದಕ್ಕೆ ತಾಜಾ ಉದಾಹರಣೆ ಚತ್ತೀಸ್​ಗಢದ ಹುಡುಗ ಸುಹ್​ದೇವ್​ ಡಿರ್ಡೋ. ಈತ ‘ಬಚ್ಪನ್​ ಕಾ ಪ್ಯಾರ್..’ ಹಾಡಿನ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಶನ್​ ಸೃಷ್ಟಿ ಮಾಡಿದ್ದ. ಸಹದೇವ್​ಗೆ ಎಂಜಿ ಹೆಕ್ಟರ್​ ಕಂಪನಿಯವರು ಕಾರು ನೀಡಿದ್ದಾರೆ ಎನ್ನಲಾದ ಫೋಟೋ ಒಂದು ಇತ್ತೀಚೆಗೆ ವೈರಲ್​ ಆಗಿತ್ತು. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.

ಸಹದೇವ್​ ‘ಬಚ್ಪನ್​ ಕಾ ಪ್ಯಾರ್..’​ ಹಾಡನ್ನು ಹಾಡಿದ್ದ. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್​ ಸೃಷ್ಟಿಮಾಡಿತ್ತು. ಅನೇಕರು ಬಾಲಕನ ಕಂಠವನ್ನು ಮೆಚ್ಚಿಕೊಂಡಿದ್ದರು. ರ್ಯಾಪರ್​ ಬಾದ್​ಶಾ ಕೂಡ ಸಹದೇವ್​ ಹಾಡಿಗೆ ತಲೆದೂಗಿದ್ದರು. ಸಹದೇವ್​​ನನ್ನು​ ಒಳಗೊಂಡ ‘ಬಚ್ಪನ್​ ಕ ಪ್ಯಾರ್​’ ಹೊಸ ಹಾಡನ್ನು ಕೂಡ ರಿಲೀಸ್​ ಮಾಡಿದ್ದರು ಬಾದ್​ಶಾ.

ಇದಾದ ಬೆನ್ನಲ್ಲೇ ಸಹದೇವ್​ ಎಂಜಿ ಹೆಕ್ಟರ್​ ಕಾರಿನ ಎದುರು ನಿಂತಿರುವ ಫೋಟೋ ವೈರಲ್​ ಆಗಿತ್ತು. ಅನೇಕರು ಸಹದೇವ್​ಗೆ 23 ಲಕ್ಷದ ಕಾರ್ ಗಿಫ್ಟ್​ ಆಗಿ ಸಿಕ್ಕಿದೆ ಎಂದು ಭಾವಿಸಿದ್ದರು. ಆದರೆ, ಅಸಲಿಯತ್ತು ಬೇರೆಯೇ ಇದೆ. ಸಹದೇವ್​ ಎಂಜಿ ಹೆಕ್ಟರ್​ ಶೋರೂಮ್​ಗೆ ಬಂದಿದ್ದು ನಿಜ. ಆದರೆ, ಆತನಿಗೆ ಕಾರು ಗಿಫ್ಟ್​ ಆಗಿ ಸಿಕ್ಕಿಲ್ಲ. ಬದಲಿಗೆ ಆತನಿಗೆ ಶೋರೂಮ್​ನಲ್ಲಿ 21 ಸಾವಿರ ರೂಪಾಯಿಯ ಚೆಕ್​ ವಿತರಣೆ ಮಾಡಲಾಗಿದೆ. ಈ ವಿಚಾರವನ್ನು ಎಂಜಿ ಹೆಕ್ಟರ್​ ಬ್ರ್ಯಾಂಚ್​ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ಸಹದೇವ್​ ಚತ್ತೀಸ್​ಗಢದ ಸುಕ್ಮಾ ಜಿಲ್ಲೆಯವನು. ರಾತ್ರಿ ಬೆಳಗಾಗುವುದರೊಳಗೆ ಈತ ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿದ್ದ. ರಾನು ಮಂಡಲ್​ ಕೂಡ ಇದೇ ರೀತಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ