ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ

Navarasa Trailer: ನೆಟ್​ಫ್ಲಿಕ್ಸ್​ ಮೂಲಕ ಆಗಸ್ಟ್​ 6ರಂದು ‘ನವರಸ’ ಬಿಡುಗಡೆ ಆಗಲಿದೆ. ತಮಿಳು ಮಾತ್ರವಲ್ಲದೆ, ತೆಲುಗು, ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ
ನವರಸ ಚಿತ್ರದ ಪೋಸ್ಟರ್(ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಮದನ್​ ಕುಮಾರ್​

Updated on: Jul 27, 2021 | 1:06 PM

ಸಿನಿಮಾಗಳಿಗಿಂತಲೂ ಹೆಚ್ಚಾಗಿ ಈಗ ವೆಬ್​ ಸಿರೀಸ್​ಗಳು ಧೂಳೆಬ್ಬಿಸುತ್ತಿವೆ. ಲಾಕ್​ಡೌನ್​ ಬಳಿಕ ಬದಲಾದ ಕಾಲಘಟ್ಟದಲ್ಲಿ ಓಟಿಟಿ ಮೂಲಕ ಮನರಂಜನೆ ಪಡೆಯುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆಯೇ ದೊಡ್ಡ ದೊಡ್ಡ ಸ್ಟಾರ್​ ಕಲಾವಿದರು ವೆಬ್​ ಸಿರೀಸ್​ಗಳ (Web Series) ಕಡೆಗೆ ಮುಖ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಇದೇ ಮೊದಲ ಬಾರಿಗೆ ವೆಬ್​ ಸಿರೀಸ್​ ನಿರ್ಮಾಣ ಮಾಡಿದ್ದಾರೆ. ‘ನವರಸ’  (Navarasa) ಶೀರ್ಷಿಕೆಯ ಈ ವೆಬ್​ ಸರಣಿಯಲ್ಲಿ ತಮಿಳು ಚಿತ್ರರಂಗದ ಅನೇಕ ಸ್ಟಾರ್​ ನಟರು ಅಭಿನಯಿಸಿದ್ದಾರೆ. ಈಗ ಟ್ರೇಲರ್​ ಮೂಲಕ ಈ ವೆಬ್​ ಸಿರೀಸ್​ ಕೌತುಕ ಮೂಡಿಸಿದೆ.

‘ನವರಸ’ ವೆಬ್​ ಸಿರೀಸ್​ನಲ್ಲಿ ಹೆಸರೇ ಸೂಚಿಸುವಂತೆ 9 ಕಥೆಗಳ ಸಂಗಮ ಆಗಿದೆ. 9 ಪ್ರತ್ಯೇಕ ಕಥೆಗಳ ಮೂಲಕ ನವರಸಗಳನ್ನು ವಿವರಿಸಲಾಗಿದೆ. ಪ್ರತಿ ಕಥೆಗೂ ಬೇರೆ ಬೇರೆ ನಿರ್ದೇಶಕರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಕಾಲಿವುಡ್​ನ ಖ್ಯಾತ ನಿರ್ದೇಶಕರಾದ ಪ್ರಿಯದರ್ಶನ್​, ವಸಂತ್​ ಎಸ್​. ಸಾಯಿ, ಗೌತಮ್​ ವಾಸುದೇವ್​ ಮೆನನ್​, ಅರವಿಂದ್ ಸ್ವಾಮಿ, ಬಿಜೋಯ್​ ನಂಬಿಯಾರ್​, ಕಾರ್ತಿಕ್​ ಸುಬ್ಬರಾಜು, ಕಾರ್ತಿಕ್​ ನರೇನ್​, ಸರ್ಜುನ್​ ಕೆ.ಎಮ್​, ರತೀಂದ್ರನ್​ ಆರ್​. ಪ್ರಸಾದ್​ ನಿರ್ದೇಶನ ಮಾಡಿದ್ದಾರೆ.

ವಿಜಯ್ ಸೇತುಪತಿ, ಸೂರ್ಯ, ಪ್ರಕಾಶ್​ ರೈ, ಸಿದ್ಧಾರ್ಥ್​, ಅಶೋಕ್​ ಸೆಲ್ವನ್​, ನಾಗ ಶೌರ್ಯ, ಪಾರ್ವತಿ ತಿರುವತ್ತು, ರೇವತಿ, ಯೋಗಿ ಬಾಬು, ಅಂಜಲಿ, ಅರವಿಂದ್​ ಸ್ವಾಮಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಜು.27ರಂದು ಬಿಡುಗಡೆ ಆಗಿರುವ ಟ್ರೇಲರ್​ಗೆ ಮೆಚ್ಚುಗೆ ಸಿಕ್ಕಿದೆ. ನೆಟ್​ಫ್ಲಿಕ್ಸ್​ ಮೂಲಕ ಆಗಸ್ಟ್​ 6ರಂದು ‘ನವರಸ’ ಬಿಡುಗಡೆ ಆಗಲಿದೆ. ತಮಿಳು ಮಾತ್ರವಲ್ಲದೆ, ತೆಲುಗು, ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

(ನವರಸ ವೆಬ್​ ಸಿರೀಸ್​ ಟ್ರೇಲರ್​)

ಕನ್ನಡದಲ್ಲೂ ಸಹ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ಹಲವು ನಿರ್ದೇಶಕರು ಸೇರಿಕೊಂಡು, ಹಲವು ಕಥೆಗಳನ್ನು ಇಟ್ಟುಕೊಂಡು ಒಂದೇ ಸಿನಿಮಾ ಮಾಡುವ ಕೆಲಸ ಜಾರಿಯಲ್ಲಿದೆ. ‘ಆದ್ದರಿಂದ’ ಮತ್ತು ‘ಪೆಂಟಗಾನ್​’ ಚಿತ್ರಗಳಿಗೆ ಹಲವು ನಿರ್ದೇಶಕರು ಕೈ ಜೋಡಿಸಿದ್ದಾರೆ.

ಇದನ್ನೂ ಓದಿ:

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

ನೆಟ್​ಫ್ಲಿಕ್ಸ್​ನಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ ವಿಡಿಯೊ ಗೇಮ್ಸ್​: ಮಕ್ಕಳಿಗಾಗಿ ಎರಡು ಹೊಸ ಕೊಡುಗೆ ಘೋಷಣೆ

ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು