ಆಸ್ಪತ್ರೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ ಆರೋಗ್ಯ ಕಾರ್ಯಕರ್ತ; ವಿಡಿಯೋ ವೈರಲ್

TV9 Digital Desk

| Edited By: shruti hegde

Updated on: Sep 03, 2021 | 11:55 AM

Viral Video: ಆರೋಗ್ಯ ಕಾರ್ಯಕರ್ತನ ನೃತ್ಯ ಪ್ರದರ್ಶನ ಎಲ್ಲರೂ ಮೆಚ್ಚುವಂತಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಈತನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಆಸ್ಪತ್ರೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ ಆರೋಗ್ಯ ಕಾರ್ಯಕರ್ತ; ವಿಡಿಯೋ ವೈರಲ್
ಆಸ್ಪತ್ರೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ ಆರೋಗ್ಯ ಕಾರ್ಯಕರ್ತ

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವೊಂದಿಷ್ಟು ವಿಡಿಯೋಗಳು ಮಾತ್ರ ಮನಸ್ಸು ಗೆಲ್ಲುತ್ತವೆ. ಮನಸ್ಸು ಗೆಲ್ಲುವ ವಿಡಿಯೋಗಳನ್ನು ಪುನಃ ಮತ್ತೆ ಮತ್ತೆ ನೋಡಬೇಕು ಅಂದೆನಿಸುತ್ತದೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಗ್ಯ ಕಾರ್ಯಕರ್ತನ ನೃತ್ಯ ಪ್ರದರ್ಶನ ಎಲ್ಲರೂ ಮೆಚ್ಚುವಂತಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಈತನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ತೇವಾ ಮಾರ್ಟಿನ್ಸನ್ ಎಂಬ ಆರೋಗ್ಯ ಕಾರ್ಯಕರ್ತ ಆಸ್ಪತ್ರೆಯ ಲಾಬಿಯಲ್ಲಿ ಅಚ್ಚರಿಯ ಬ್ಯಾಲೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಓರ್ವ ಪಿಯಾನೋ ನುಡಿಸುತ್ತಿದ್ದಂತೆಯೇ ಈತ ಹೆಜ್ಜೆ ಹಾಕಿದ್ದಾನೆ. ಈತನ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 96,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ತುಂಬಾ ಸಂತೋಷವಾಗುತ್ತದೆ ಎಂದು ಓರ್ವರು ಅಭಿಪ್ರಾಯ ತಿಳಿಸಿದ್ದಾರೆ.

ತೇವಾ ಅವರು ತಾವು ಧರಿಸಿರುವ ನೀಲಿ ಬಣ್ಣದ ಆಸ್ಪತ್ರೆಯ ಯೂನಿಫಾರಂನಲ್ಲಿ ನೃತ್ಯ ಮಾಡಿದ್ದಾರೆ. ಮುಖಗವಸನ್ನು ಧರಿಸಿರುವುದು ವಿಡಿಯೋದಲ್ಲಿ ನೋಡಬಹುದು. ಕೊವಿಡ್ ಸಾಂಕ್ರಾಮಿಕ ಹರಡುವಿಕೆಯಲ್ಲಿ ಆಸ್ಪತ್ರೆಯಲ್ಲಿನ ಒತ್ತಡದ ಕೆಲಸದ ಜತೆಗೆ ದಯೆಯಿಂದ ಅತ್ಯಂತ ಸರಾಗವಾಗಿ ನೃತ್ಯ ಮಾಡಿದ ಆರೋಗ್ಯ ಕಾರ್ಯಕರ್ತನಿಗೆ ಪ್ರಶಂಸೆ ವ್ಯಕ್ತವಾಗಿದೆ. ಉತಾಹ್ ಆಸ್ಪತ್ರೆಯ ಟ್ವಿಟರ್​ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಸಂತೋಷದ ಕ್ಷಣ ಎಂಬ ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹರಿ ಬಿಡಲಾಗಿದೆ.

ಇದನ್ನೂ ಓದಿ:

Viral Video: ಅಬ್ಬಾ..ಎಂತಹ ಅದ್ಭುತ ಕ್ಯಾಚ್: ವಿಕಲಚೇತನನ ಡೈವಿಂಗ್​ಗೆ ಸ್ಟಾರ್ ಕ್ರಿಕೆಟಿಗರೇ ಫಿದಾ

Viral Video: ವೇಗವಾಗಿ ಧಾವಿಸುತ್ತಿದ್ದ ರೈಲಿಗೆ 18 ಚಕ್ರದ ಟ್ರಕ್ ಅಡ್ಡ ಸಿಲುಕಿತು ನೋಡಿ

(Health Worker dance in hospital in us video goes viral )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada