Viral Video: ಅಬ್ಬಾ..ಎಂತಹ ಅದ್ಭುತ ಕ್ಯಾಚ್: ವಿಕಲಚೇತನನ ಡೈವಿಂಗ್​ಗೆ ಸ್ಟಾರ್ ಕ್ರಿಕೆಟಿಗರೇ ಫಿದಾ

ಈ ಪಂದ್ಯ ಯಾವುದು ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇನ್ನು ಈ ಅದ್ಭುತ ವಿಡಿಯೋ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ಈ ಆಟಗಾರನನ್ನು ಜಸ್​ವಂತ್ ಸಿಂಗ್ ರಾಜುಪುರೋಹಿತ್ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

Viral Video: ಅಬ್ಬಾ..ಎಂತಹ ಅದ್ಭುತ ಕ್ಯಾಚ್: ವಿಕಲಚೇತನನ ಡೈವಿಂಗ್​ಗೆ ಸ್ಟಾರ್ ಕ್ರಿಕೆಟಿಗರೇ ಫಿದಾ
ವೈರಲ್ ವಿಡಿಯೋ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 02, 2021 | 6:06 PM

ಕ್ರಿಕೆಟ್​ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತದಲ್ಲಿ ಗಲ್ಲಿ ಗಲ್ಲಿಯಲ್ಲಿ ಒಬ್ಬೊಬ್ಬ ಅತ್ಯುತ್ತಮ ಆಟಗಾರರು ಕಂಡು ಬರುತ್ತಾರೆ. ಅದರಲ್ಲಿ ಕೆಲವರು ರಾಜ್ಯ ಅಥವಾ ರಾಷ್ಟ್ರೀಯ ತಂಡದಲ್ಲಿ ಮಿಂಚಿ ವಿಶ್ವದ ಗಮನ ಸೆಳೆಯುತ್ತಾರೆ. ಆದರೆ ಕೆಲವರ ಆಟಗಳು ಮೈದಾನದಿಂದ ಆಚೆಗೆ ಸುದ್ದಿಯಾಗುವುದೇ ಇಲ್ಲ. ಅಂತಹದೊಂದು ಅದ್ಭುತ ಆಟ ಇದೀಗ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿದೆ. ಹೌದು, ವಿಕಲಚೇತನ ಒಬ್ಬರು ಕ್ರಿಕೆಟ್ ಆಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

ಈ ವಿಡಿಯೋದಲ್ಲಿ ಒಂದು ಕಾಲು ಇರದ ವ್ಯಕ್ತಿಯೊಬ್ಬರು ದೊಣ್ಣೆಯ ಸಹಾಯದಿಂದ ಬೌಲಿಂಗ್ ಮಾಡುತ್ತಿದ್ದಾರೆ. ಇತ್ತ ಕಡೆಯಿಂದ ಬ್ಯಾಟ್ಸ್​ಮನ್ ಅವರು ಎಸೆದ ಚೆಂಡನ್ನು ಅದ್ಭುತವಾಗಿ ಬಾರಿಸಿದ್ದರು. ಆದರೆ ಕ್ಷಣಾರ್ಧದಲ್ಲೇ ಅತ್ಯುತ್ತಮವಾಗಿ ಡೈವ್ ಹೊಡೆದ ವಿಕಲಚೇತನ ಕ್ಯಾಚ್ ಹಿಡಿದರು.

ಈ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭರ್ಜರಿ ಕ್ಯಾಚ್ ನೋಡಿ ದಕ್ಷಿಣ ಆಫ್ರಿಕಾ ಸ್ಪಿನ್ ಬೌಲರ್ ತಬ್ರೇಜ್ ಶಮ್ಸಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಅದ್ಭುತ!!! ಇಷ್ಟು ಮಾತ್ರ ಹೇಳಬಲ್ಲೆ”ಎಂದು ಅವರು ಅಳುವ ಮುಖದ ಎಮೋಜಿಯೊಂದಿಗೆ ಶಮ್ಸಿ ಟ್ವೀಟ್ ಮಾಡಿದ್ದಾರೆ. ಇನ್ನು ನ್ಯೂಜಿಲ್ಯಾಂಡ್ ವೇಗಿ ಮಿಚೆಲ್ ಮೆಕ್ಲೆನಾಘನ್, ಕೂಡ “ನಂಬಲಸಾಧ್ಯ !” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ರೀಟ್ವೀಟ್ ಮಾಡಿದ್ದಾರೆ.

ಇದಾಗ್ಯೂ ಈ ಪಂದ್ಯ ಯಾವುದು ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇನ್ನು ಈ ಅದ್ಭುತ ವಿಡಿಯೋ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ಈ ಆಟಗಾರನನ್ನು ಜಸ್​ವಂತ್ ಸಿಂಗ್ ರಾಜುಪುರೋಹಿತ್ ಎಂದು ಗುರುತಿಸುತ್ತಿದ್ದಾರೆ. ರಾಜಪುರೋಹಿತ್ ಕೂಡ ವಿಕಚೇತನರಾಗಿದ್ದು, ಅವರು ಸಹ ದೊಣ್ಣೆಯ ನೆರವಿನಿಂದ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಈ ಹಿಂದೆ ಟೀಮ್ ಇಂಡಿಯಾ ವಿಕಲಚೇತನರ ತಂಡವನ್ನು ಜಸ್​ವಂತ್ ಸಿಂಗ್ ರಾಜುಪುರೋಹಿತ್ ಪ್ರತಿನಿಧಿಸಿದ್ದರು.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್​ಗೆ ಆಲೌಟ್

ಇದನ್ನೂ ಓದಿ: Shane Warne: ಸಾರ್ವಕಾಲಿಕ ಟಾಪ್ 10 ವೇಗಿಗಳನ್ನು ಹೆಸರಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್​

ಇದನ್ನೂ ಓದಿ: Crime News: ಬಾಲಕನನ್ನು ಮದುವೆಯಾಗಿ ಜೈಲು ಸೇರಿದ ಯುವತಿ

(Specially-abled bowler takes one-handed catch in a viral video)

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು