AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ‘ಬಾವಾ’ ಬೇಕು ಎಂದು ಬೇಡಿಕೆಯಿಟ್ಟ ಶ್ರೀಲಂಕಾ

Dasun Shanaka: ಬಾವಾ ಕಳೆದ 3 ವರ್ಷಗಳಿಂದ ಟೀಮ್ ಇಂಡಿಯಾ ಜೊತೆಗಿದ್ದಾರೆ. ವಿರಾಟ್ ಕೊಹ್ಲಿ ಅವರ ಮನವಿ ಮೇರೆಗೆ ನುವಾನ್ ಅವರನ್ನು ಬಿಸಿಸಿಐ ತಂಡಕ್ಕೆ ಕೋಚಿಂಗ್ ಬಳಗಕ್ಕೆ ಸೇರಿಸಿಕೊಂಡಿತು.

ಟೀಮ್ ಇಂಡಿಯಾ 'ಬಾವಾ' ಬೇಕು ಎಂದು ಬೇಡಿಕೆಯಿಟ್ಟ ಶ್ರೀಲಂಕಾ
Nuwan Seneviratne
TV9 Web
| Edited By: |

Updated on: Sep 02, 2021 | 5:16 PM

Share

ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ (Sri Lanka vs South Africa) ನಡುವಿನ ಏಕದಿನ ಸರಣಿಗಳು ಗುರುವಾರದಿಂದ ಆರಂಭವಾಗಿದೆ. ಇದಾದ ಬಳಿಕ ಲಂಕಾ ತಂಡವು ಟಿ20 ವಿಶ್ವಕಪ್ (T20 World Cup) ಅರ್ಹತಾ ಪಂದ್ಯಗಳನ್ನು ಆಡಬೇಕಿದೆ. ಆದರೆ ಅದಕ್ಕೂ ಮುನ್ನ, ತಂಡದ ನಾಯಕ ದಾಸುನ್ ಶನಕ (Dasun Shanaka) ತಮಗೆ ಟೀಮ್ ಇಂಡಿಯಾದ ಥ್ರೋ ಡೌನ್ ಸ್ಪೆಷಲಿಸ್ಟ್​ನಂತಹ ಕೋಚ್ ಬೇಕು ಎಂದು ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ವೇಗದ ಬೌಲರ್‌ಗಳನ್ನು ಎದುರಿಸುವ ಕೌಶಲ್ಯ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದಿದ್ದಾರೆ. ಶನಕ ಅವರ ಈ ಬೇಡಿಕೆಗೆ ಮುಖ್ಯ ಕಾರಣ, ಟೀಮ್ ಇಂಡಿಯಾ ಥ್ರೋ ಡೌನ್ ತರಬೇತುದಾರ ನುವಾನ್ ಸೆನೆವಿರತ್ನ ಅಲಿಯಾಸ್ ಬಾವಾ. ಏಕೆಂದರೆ ಶ್ರೀಲಂಕಾ ಪರ ಕ್ರಿಕೆಟ್ ಆಡಿರುವ ಸುವನ್ ಸೆನೆವಿರತ್ನ ಇದೀಗ ಟೀಮ್ ಇಂಡಿಯಾ ಥ್ರೋ ಸ್ಪೆಷಲಿಸ್ಟ್. ಅವರನ್ನು ಶ್ರೀಲಂಕಾ ತಂಡಕ್ಕೆ ಕರೆತರುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂಬ ಪ್ಲ್ಯಾನ್​ನಲ್ಲಿದ್ದಾರೆ ದಾಸುನ್ ಶನಕ.

2018ರಲ್ಲಿ ಟೀಮ್ ಇಂಡಿಯಾ ಸೇರುವ ಮುನ್ನ ನುವಾನ್ ಶ್ರೀಲಂಕಾದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು. ಅಭ್ಯಾಸದ ವೇಳೆ 175 ಕಿಮೀ / ಗಂ ವೇಗದಲ್ಲಿ ಥ್ರೋ ಎಸೆಯುವ ಮೂಲಕ ಬ್ಯಾಟ್ಸ್​ಮನ್​ಗಳನ್ನು ನುವಾನ್ ಸಜ್ಜುಗೊಳಿಸುತ್ತಾರೆ. ಇದರಿಂದ ಎಷ್ಟೇ ವೇಗದಲ್ಲಿ ಚೆಂಡು ಬಂದರೂ ಸುಲಭವಾಗಿ ಗುರುತಿಸುವಲ್ಲಿ ಬ್ಯಾಟ್ಸ್​ಮನ್​ಗಳಿಗೆ ಸಹಾಯಕವಾಗುತ್ತದೆ.

ದಾಸುನ್ ಹೇಳುವಂತೆ ಶ್ರೀಲಂಕಾ ತಂಡದಲ್ಲಿ ಕೇವಲ ಮೂವರು ವೇಗದ ಬೌಲರ್‌ಗಳು ಮಾತ್ರ ಇದ್ದಾರೆ. ಅವರು ನಿರಂತರವಾಗಿ 140 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯಬಲ್ಲರು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ಹೆಚ್ಚಿನ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಬೌಲರ್‌ಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಶ್ರೀಲಂಕಾದ ಯುವ ಬ್ಯಾಟ್ಸ್‌ಮನ್‌ಗಳನ್ನು ಉತ್ತಮವಾಗಿ ಸಜ್ಜುಗೊಳಿಸಲು ‘ಬಾವಾ’ ನಂತಹ ತಜ್ಞ ಥ್ರೋ-ಡೌನ್ ಕೋಚ್​ನ ಅಗತ್ಯವಿದೆ. ಹೀಗಾಗಿ ಈ ಬೇಡಿಕೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಆಟಗಾರರಿಂದ ಪ್ರೀತಿಯಿಂದ ಬಾವಾ ಎಂದು ಕರೆಸಿಕೊಳ್ಳುವ ನುವಾನ್, ಹೆಚ್ಚುವರಿ ವೇಗ ಮತ್ತು ಬೌನ್ಸ್ ಎಸೆತಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾ ಅವರನ್ನು ನೇಮಿಸಿಕೊಂಡಿದೆ. ವಿಶೇಷವಾಗಿ ತಂಡವು ವಿದೇಶದಲ್ಲಿ ಆಡಲು ಹೋದಾಗ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ‘ಬಾವಾ’ ಅನುಭವ ತಂಡಕ್ಕೆ ಹೆಚ್ಚಿನ ಸಹಾಯಕವಾಗುತ್ತದೆ. ಅಭ್ಯಾಸದ ಅವಧಿಯಲ್ಲಿ ನಿರಂತರವಾಗಿ ಬ್ಯಾಟ್ಸ್‌ಮನ್‌ಗಳಿಗೆ ವೇಗದ ಚೆಂಡುಗಳನ್ನು ಎಸೆದು ಅಭ್ಯಾಸ ನಡೆಸುವ ಮೂಲಕ ವೇಗದ ಬೌಲರ್‌ಗಳ ಎದುರು ಆಡುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ಬಾವಾ ಕಳೆದ 3 ವರ್ಷಗಳಿಂದ ಟೀಮ್ ಇಂಡಿಯಾ ಜೊತೆಗಿದ್ದಾರೆ. ವಿರಾಟ್ ಕೊಹ್ಲಿ ಅವರ ಮನವಿ ಮೇರೆಗೆ ನುವಾನ್ ಅವರನ್ನು ಬಿಸಿಸಿಐ ತಂಡಕ್ಕೆ ಕೋಚಿಂಗ್ ಬಳಗಕ್ಕೆ ಸೇರಿಸಿಕೊಂಡಿತು. ನೆಟ್ ನಲ್ಲಿ ಗಂಟೆಗೆ 175 ಕಿಮೀ ವೇಗದಲ್ಲಿ ಚೆಂಡೆಸೆಯುವ ಬಾವಾ ಅವರು ಈ ಹಿಂದೆ ಶ್ರೀಲಂಕಾ ಕೋಚಿಂಗ್ ತಂಡದಲ್ಲಿದ್ದರು. ಆದರೆ ಲಂಕಾದ ಕೆಲ ಬ್ಯಾಟ್ಸ್‌ಮನ್‌ಗಳು ಅವರ ವೇಗದ ಬಗ್ಗೆ ದೂರು ನೀಡಿದರು. ಇದಾದ ಬಳಿಕ ಅವರ ಸಾಮರ್ಥ್ಯವನ್ನು ಬಳಸಿಕೊಂಡು ಟೀಮ್ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ರೂಪಿಸಿಕೊಂಡಿದೆ.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್​ಗೆ ಆಲೌಟ್

ಇದನ್ನೂ ಓದಿ: Shane Warne: ಸಾರ್ವಕಾಲಿಕ ಟಾಪ್ 10 ವೇಗಿಗಳನ್ನು ಹೆಸರಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್​

ಇದನ್ನೂ ಓದಿ: Crime News: ಬಾಲಕನನ್ನು ಮದುವೆಯಾಗಿ ಜೈಲು ಸೇರಿದ ಯುವತಿ

(Dasun Shanaka requests throw-down coach for Sri Lanka like India’s Nuwan Seneviratne)

Follow Us
TV9 Web
TV9 Web

TV9 Kannada

Read More
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್