ಯಾದಗಿರಿ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್​ಟೇಬಲ್​ಗೆ ಥಳಿತ

ಯಾದಗಿರಿ ಜಿಲ್ಲಾ ಡಿಆರ್ ಪೊಲೀಸ್ ಕಾನ್ಸ್​ಟೇಬಲ್ ಗುರಪ್ಪ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಎರಡು ಕೈ, ಕಾಲುಗಳನ್ನ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಯಾದಗಿರಿ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್​ಟೇಬಲ್​ಗೆ ಥಳಿತ
ಪೊಲೀಸ್ ಕಾನ್ಸ್​​ಟೇಬಲ್​ ಕೈ, ಕಾಲುಗಳನ್ನು ಕಟ್ಟಿ ಹೊಡೆದಿದ್ದಾರೆ

ಯಾದಗಿರಿ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್​ಟೇಬಲ್ (Police Constable) ಆಕೆಯ ಪತಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಓರ್ವ ಮಹಿಳೆ ಜೊತೆ ಪೊಲೀಸ್ ಕಾನ್ಸ್​ಟೇಬಲ್ ಅನೈತಿಕ ಸಂಬಂಧ ಹೊಂದಿದ್ದು, ಆಕೆಯ ಪತಿಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ. ಹೀಗಾಗಿ ಮಹಿಳೆಯ ಪತಿ ಕಾನ್ಸ್​ಟೇಬಲ್ ಗುರಪ್ಪಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಯಾದಗಿರಿ ಜಿಲ್ಲಾ ಡಿಆರ್ ಪೊಲೀಸ್ ಕಾನ್ಸ್​ಟೇಬಲ್ ಗುರಪ್ಪ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಎರಡು ಕೈ, ಕಾಲುಗಳನ್ನ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಕಾನ್ಸ್​ಟೇಬಲ್ ಗುರಪ್ಪ ಕಳೆದ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದನಂತೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ಮಹಿಳೆ ದೂರು ದಾಖಲಿಸಲು ಯತ್ನಿಸಿದ್ದು, ಈ ಘಟನೆ ಯಾದಗಿರಿ ಎಸ್​ಪಿ ಕಚೇರಿಯ ಸ್ವಲ್ಪ ದೂರದಲ್ಲೇ ನಡೆದಿದೆ.

ಕಳವು ಮಾಡಿದ್ದ ಆರೋಪಿಗಳ ಸೆರೆ
ಪರಿಚಯಸ್ಥರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಲ್ಲಾಸ್(29), ರುದ್ರೇಶ್(36) ಬಂಧಿತ ಆರೋಪಿಗಳು. ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ ₹25 ಲಕ್ಷ, ₹4 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ತಿಂಗಳು 17ಕ್ಕೆ ಕಳ್ಳತನ ಕೃತ್ಯ ನಡೆದಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆ ಆರೋಪಿಗಳು ಈ ಕೃತ್ಯ ಎಸಗಿದ್ದರು. ಬಳಿಕ ಹೊರ ರಾಜ್ಯಕ್ಕೆ ಪರಾರಿಯಾಗಿದ್ದರು. ಖಚಿತ ಮಾಹಿತಿ ಆಧರಿಸಿ ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ

ಮಳೆ ಇಲ್ಲದಿದ್ದರೂ ಮೆಕ್ಕೆಜೋಳ, ಸೂರ್ಯಕಾಂತಿ ಬಂಪರ್ ಫಸಲು; ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರೈತ

ವಿದೇಶಿ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ, ನೆಗೆಟಿವ್ ವರದಿ ಬಂದರೆ ಮಾತ್ರ ಮನೆಗೆ; ರಾಜ್ಯ ಸರ್ಕಾರ ಆದೇಶ

(A man is has been beaten to police constable for Illicit relationship in Yadgir)

Click on your DTH Provider to Add TV9 Kannada