Kichcha Sudeep: ವೈರಲ್ ಆಯ್ತು ಕಿಚ್ಚ ಸುದೀಪ್ ಹೊಸ ಹೇರ್ಸ್ಟೈಲ್
‘ಕೋಟಿಗೊಬ್ಬ 3’ ಹಾಗೂ ‘ವಿಕ್ರಾಂತ್ ರೋಣ’ ಸಿನಿಮಾ ಕೆಲಸಗಳಲ್ಲಿ ಸುದೀಪ್ ಬ್ಯುಸಿ ಇದ್ದಾರೆ. ಎರಡೂ ಚಿತ್ರಗಳ ಬಹುತೇಕ ಪೂರ್ಣಗೊಂಡಿವೆ. ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.
ಕಿಚ್ಚ ಸುದೀಪ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ಸಿನಿಮೇತರ ವಿಚಾರಕ್ಕೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಸುದೀಪ್ ಅವರು ಹೊಸ ಕೇಶ ವಿನ್ಯಾಸ ಮಾಡಿಸಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
‘ಕೋಟಿಗೊಬ್ಬ 3’ ಹಾಗೂ ‘ವಿಕ್ರಾಂತ್ ರೋಣ’ ಸಿನಿಮಾ ಕೆಲಸಗಳಲ್ಲಿ ಸುದೀಪ್ ಬ್ಯುಸಿ ಇದ್ದಾರೆ. ಎರಡೂ ಚಿತ್ರಗಳ ಬಹುತೇಕ ಪೂರ್ಣಗೊಂಡಿವೆ. ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಎರಡೂ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಅಂದಹಾಗೆ, ಹೊಸ ಹೇರ್ಸ್ಟೈಲ್ ಯಾವ ಚಿತ್ರಕ್ಕಾಗಿ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಕೂಡ ತಮ್ಮ ಹೇರ್ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು.
ಇದನ್ನೂ ಓದಿ: ರಾಜೀವ್ ಹೊಸ ಚಿತ್ರ ‘ಉಸಿರೇ ಉಸಿರೇ’ಗೆ ಕಿಚ್ಚ ಸುದೀಪ್ ಸಿನಿಮಾ ಕನೆಕ್ಷನ್