ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಬಂದ ಕನ್ನಡಿಗನ ಮನದಾಳದ ಮಾತು
ಕಾಬೂಲ್ನಲ್ಲಿ ಹತ್ತು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಪ್ರಸಾದ್ ಆನಂದ್, ಮಂಗಳೂರು ಹೊರವಲಯದ ಕೊಲ್ಯ ಕನೀರ್ ತೋಟದ ಮನೆಗೆ ಆಗಮಿಸಿದ್ದು ಕುಟುಂಬಸ್ಥರು ಹಾಗೂ ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಅವರನ್ನು ಬರಮಾಡಿಕೊಂಡಿದ್ದಾರೆ.
ಮಂಗಳೂರು: ತಾಲಿಬಾನಿಗಳ ಕೈವಶವಾದ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಕನ್ನಡಿಗರನ್ನು ತವರಿಗೆ ಕರೆತರಲಾಗಿದ್ದು, ಕಾಬೂಲ್ನಿಂದ ದೆಹಲಿಗೆ ನಿನ್ನೆ ಏರ್ ಲಿಫ್ಟ್ ಆಗಿದ್ದ ಮಂಗಳೂರಿನ ಪ್ರಸಾದ್ ಆನಂದ್ ಕೊಲ್ಯದಲ್ಲಿರುವ ಮನೆಗೆ ಬಂದು ತಲುಪಿದ್ದಾರೆ. ಕಾಬೂಲ್ನಲ್ಲಿ ಹತ್ತು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಪ್ರಸಾದ್ ಆನಂದ್, ಮಂಗಳೂರು ಹೊರವಲಯದ ಕೊಲ್ಯ ಕನೀರ್ ತೋಟದ ಮನೆಗೆ ಆಗಮಿಸಿದ್ದು ಕುಟುಂಬಸ್ಥರು ಹಾಗೂ ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಅವರನ್ನು ಬರಮಾಡಿಕೊಂಡಿದ್ದಾರೆ.
ಕಾಬೂಲ್ ಏರ್ಪೋರ್ಟ್ನಲ್ಲಿ ಜನ ಜಾಸ್ತಿ ಇದ್ದರು. ಎಂಬೆಸ್ಸಿಯವರು ಬಂದು ಸಹಾಯ ಮಾಡಿದ್ದರು ಅಂತಾ ಆಫ್ಘಾನ್ನಲ್ಲಿ ಇದ್ದ ಕನ್ನಡಿಗ ಪ್ರಸಾದ್ ಆನಂದ್ ಹೇಳಿದ್ದಾರೆ. ನಿನ್ನೆ ರಾತ್ರಿ ದೆಹಲಿಗೆ ಬಂದೆವು. ಅದಕ್ಕೂ ಮೊದಲು ಕತಾರ್ ಏರ್ಬೇಸ್ನಲ್ಲಿ 3ದಿನ ಇದ್ದೆವು. 2013ರಲ್ಲಿಅಫ್ಘಾನಿಸ್ತಾನಕ್ಕೆ ಹೋಗಿದ್ದೆ ಅಕೌಂಟೆಂಟ್ ಆಗಿ ಕೆಲಸ ಮಾಡ್ತಾ ಇದ್ದೆ ಅಂತಾ ಹೇಳಿದ್ದಾರೆ.
ಆಫ್ಘಾನಿಸ್ತಾನದಿಂದ ವಾಪಸ್ ಆದ ಪ್ರಸಾದ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಟಿವಿ9 ಜತೆ ಪ್ರಸಾದ್ ಕುಟುಂಬ ಸಂತಸ ಹಂಚಿಕೊಂಡಿದೆ. ಆಫ್ಘಾನಿಸ್ತಾನದಲ್ಲಿ ಆದ ಪರಿಸ್ಥಿತಿಯಿಂದ ಭಾರೀ ಆತಂಕಕ್ಕೆ ಒಳಗಾಗಿದ್ದೆವು. ರಾತ್ರಿ ನಿದ್ದೆ ಇರಲಿಲ್ಲ ಊಟ-ತಿಂಡಿ ಕೂಡ ಮಾಡುತ್ತಿರಲಿಲ್ಲ. ನಾವು ನಂಬಿರೋ ದೇವರುಗಳಲ್ಲಿ ಪ್ರತಿನಿತ್ಯ ಬೇಡಿಕೊಳ್ಳುತ್ತಿದ್ದೇವು. ಪ್ರತಿಯೊಂದು ನ್ಯೂಸ್ ಅಪ್ಡೇಟ್ ಪಡೆದುಕೊಳ್ಳುತ್ತಿದ್ದವು. ಈಗ ತುಂಬಾ ಸಂತೋಷವಾಗಿದೆ ಅಂತಾ ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ:
ಅಫ್ಘಾನಿಸ್ತಾನದಲ್ಲಿ ಬಂದೀಖಾನೆಯ ಬಾಗಿಲು ತೆಗೆಯುತ್ತಿರುವ ತಾಲಿಬಾನಿಗಳು; ಮರಣ ದಂಡನೆ ಶಿಕ್ಷೆ ಅನುಭವಿಸುತ್ತಿದ್ದವರೂ ರಿಲೀಸ್