ಅಫ್ಘಾನಿಸ್ತಾನದಲ್ಲಿ ಬಂದೀಖಾನೆಯ ಬಾಗಿಲು ತೆಗೆಯುತ್ತಿರುವ ತಾಲಿಬಾನಿಗಳು; ಮರಣ ದಂಡನೆ ಶಿಕ್ಷೆ ಅನುಭವಿಸುತ್ತಿದ್ದವರೂ ರಿಲೀಸ್
ಇಂದು ಜೈಲಿನಿಂದ ಆಚೆ ಬಂದಿರುವ ಉಗ್ರರು ಅತ್ಯಂತ ಅಪಾಯಕಾರಿಗಳೆಂದು ಗುರುತಿಸಿಕೊಂಡವರಾಗಿದ್ದು ಅವರ ಅಟ್ಟಹಾಸ ಮತ್ತಷ್ಟು ಹೆಚ್ಚಳವಾಗುವ ಅಪಾಯ ಇದೆ. ಅಪರಾಧಿಗಳು, ಸಮಾಜ ಘಾತುಕರ ಪಾಲಿಗೆ ದೇವರಂತಾಗಿರುವ ತಾಲಿಬಾನಿಗಳು ಇತ್ತೀಚೆಗಷ್ಟೇ ಡ್ರಗ್ ಜಾಲದಲ್ಲಿ ಸಿಲುಕಿ ಬಂಧಿತರಾದವರನ್ನೂ ಜೈಲಿನಿಂದ ಹೊರಬಿಟ್ಟಿದ್ದರು.
ಅಫ್ಘಾನಿಸ್ತಾನವನ್ನು ಆವರಿಸಿಕೊಂಡು ಆಡಳಿತ ಯಂತ್ರವನ್ನು ನಿಯಂತ್ರಣಕ್ಕೆ ಪಡೆದಿರುವ ತಾಲಿಬಾನಿ ಉಗ್ರರ ಉಪಟಳ ಮಿತಿಮೀರಿದೆ. ಈ ಉಗ್ರವಾದಿಗಳ ಕೈಗೆ ದೇಶ ಸಿಲುಕಿರುವುದರಿಂದ ಅಲ್ಲೀಗ ದೇಶದೊಳಗಿರುವ ಉಗ್ರರಿಗೆ, ಕಳ್ಳರಿಗೆ, ದರೋಡೆಕೋರರಿಗೆ ಸ್ವತಂತ್ರ ಸಿಕ್ಕಂತಾಗಿದೆ. ಇಂದು ತಾಲಿಬಾನಿಗಳು ಅಫ್ಘಾನಿಸ್ತಾನದ ಫರ್ಯಾಬ್ ಪ್ರಾಂತ್ಯದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಡಜನ್ಗಟ್ಟಲೇ ಉಗ್ರರನ್ನು ಮುಕ್ತಗೊಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಾವಿರಾರು ಅಪರಾಧಿಗಳನ್ನು ಜೈಲಿನಿಂದ ಹೊರಗೆ ಬಿಟ್ಟಿದ್ದ ಉಗ್ರರು ಈಗ ಅತೀ ಕ್ರೂರಿಗಳೆನಿಸಿಕೊಂಡವರಿಗೂ ಬಂಧನದಿಂದ ಮುಕ್ತಿ ನೀಡುತ್ತಿದ್ದಾರೆ.
ಇಂದು ಜೈಲಿನಿಂದ ಆಚೆ ಬಂದಿರುವ ಉಗ್ರರು ಅತ್ಯಂತ ಅಪಾಯಕಾರಿಗಳೆಂದು ಗುರುತಿಸಿಕೊಂಡವರಾಗಿದ್ದು ಅವರ ಅಟ್ಟಹಾಸ ಮತ್ತಷ್ಟು ಹೆಚ್ಚಳವಾಗುವ ಅಪಾಯ ಇದೆ. ಅಪರಾಧಿಗಳು, ಸಮಾಜ ಘಾತುಕರ ಪಾಲಿಗೆ ದೇವರಂತಾಗಿರುವ ತಾಲಿಬಾನಿಗಳು ಇತ್ತೀಚೆಗಷ್ಟೇ ಡ್ರಗ್ ಜಾಲದಲ್ಲಿ ಸಿಲುಕಿ ಬಂಧಿತರಾದವರನ್ನೂ ಜೈಲಿನಿಂದ ಹೊರಬಿಟ್ಟಿದ್ದರು.
ಸುಮಾರು ಹತ್ತು ದಿನಗಳ ಹಿಂದೆಯೇ ಅಲ್ಲಿನ ಸ್ಥಳೀಯ ಮಾಧ್ಯಮವಾದ ಟೋಲೋ ನ್ಯೂಸ್ ನೀಡಿದ್ದ ವರದಿಯ ಪ್ರಕಾರ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸುತ್ತಿದ್ದವರಿಗೆಲ್ಲಾ ತಾಲಿಬಾನ್ ಉದಾರತೆ ತೋರಿ ಜೈಲಿನಿಂದ ಆಚೆ ಬಿಡುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಆ ಪ್ರಮಾಣ ಇನ್ನಷ್ಟು ಹೆಚ್ಚಾಗಿದ್ದು, ತಾಲಿಬಾನಿಗಳು ದೇಶದ ಬಹುತೇಕ ಭಾಗಗಳನ್ನು ತೆಕ್ಕೆಗೆ ತೆಗೆದುಕೊಂಡ ಪರಿಣಾಮ ಅವರು ಆಡಿದ್ದೇ ಆಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ಮಾಧ್ಯಮಗಳ ವರದಿಗಳು ತಿಳಿಸಿರುವ ಪ್ರಕಾರ 13 ಮಹಿಳೆಯರು ಹಾಗೂ 3 ವಿದೇಶಿಗರು ಸೇರಿದಂತೆ ಕನಿಷ್ಠ 630 ಕೈದಿಗಳನ್ನು ತಾಲಿಬಾನ್ ಕುಂದುಸ್ ಪ್ರಾಮತ್ಯದಲ್ಲೇ ಬಿಡುಗಡೆ ಮಾಡಿದೆ. ಆ ಪೈಕಿ 180 ಮಂದಿ ಉಗ್ರರೂ ಇದ್ದು, ಅದರಲ್ಲಿ 15 ಮಂದಿ ಉಗ್ರರನ್ನು ಅಫ್ಘಾನಿಸ್ತಾನ ಅತ್ಯಂತ ಅಪಾಯಕಾರಿ ಎಂದು ಗುರುತಿಸಲ್ಪಟ್ಟಿತ್ತು. ಜತೆಗೆ, ಅಫ್ಘಾನಿಸ್ತಾನ ಸರ್ಕಾರ ಈ ಹಿಂದೆ ಮರಣದಂಡನೆ ವಿಧಿಸಿದ್ದವರನ್ನೂ ತಾಲಿಬಾನ್ ಉಗ್ರರು ಮುಕ್ತಗೊಳಿಸುತ್ತಿದ್ದಾರೆ.
ಇತ್ತ ನಿಮ್ರಾಜ್ ಪ್ರಾಂತ್ಯದ ಜರಂಜ್ ನಗರದಲ್ಲೂ ಏನಿಲ್ಲವೆಂದರೂ 350 ಕೈದಿಗಳನ್ನು ಹೊರಬಿಡಲಾಗಿದ್ದು, ಅವರೆಲ್ಲರೂ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಗೆ ಮತ್ತಷ್ಟು ಬಲ ನೀಡುವ ಸಂಭವ ಅಧಿಕವಾಗಿದೆ. ಆದರೆ, ಈ ಬಗ್ಗೆ ಅಫ್ಘಾನಿಸ್ತಾನ ಸರ್ಕಾರದ ಭಾಗವಾಗಿದ್ದ ಅಧಿಕಾರಿಗಳು ಮಾತ್ರ ಒಮ್ಮೆ ತಾಲಿಬಾನಿಗಳನ್ನು ಹತೋಟಿಗೆ ತಂದ ನಂತರ ಜೈಲಿನಿಂದ ಆಚೆ ಬಂದಿರುವ ಪುಡಾರಿಗಳನ್ನೆಲ್ಲಾ ಪುನಃ ಕಂಬಿ ಹಿಂದೆ ಅಟ್ಟಲಾಗುವುದು ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಹೊಸ ಸರ್ಕಾರ ರಚಿಸಲು ಸಿದ್ಧವಾದ ತಾಲಿಬಾನ್
Taliban to soon announce formation of new government in Afghanistan
Read @ANI Story | https://t.co/sQuTikj1Mv#Taliban #Afghanistan #AfghanistanCrisis pic.twitter.com/l4tjC51uUp
— ANI Digital (@ani_digital) August 22, 2021
ಅಫ್ಘಾನಿಸ್ತಾನವೀಗ ತಾಲಿಬಾನಿಯರ ವಶದಲ್ಲಿರುವುದರಿಂದ ಅನೇಕ ದೇಶಗಳು ಸುರಕ್ಷತೆಯ ದೃಷ್ಟಿಯಿಂದ ತಮ್ಮ ಪ್ರಜೆಗಳನ್ನು ಮರಳಿ ಕರೆದೊಯ್ಯುತ್ತಿವೆ. ಮೇಲಾಗಿ, ಅಲ್ಲಿನ ನಾಗರೀಕರು ಕೂಡಾ ತಾಲಿಬಾನಿಗಳಿಂದ ಪಾರಾದರೆ ಸಾಕು ಎಂದು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಾಲಿಬಾನಿಗಳು ಸರ್ಕಾರ ರಚನೆಯನ್ನು ತ್ವರಿತವಾಗಿ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲೇ ಸರ್ಕಾರ ಸ್ಥಾಪಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ತಿರುಗಿಬಿದ್ದ ಸ್ಥಳೀಯರು, ಅಫ್ಘಾನಿಸ್ತಾನದ 3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ; ಅಚ್ಚರಿಯ ಬೆಳವಣಿಗೆ
ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಬಂದ 7 ಕನ್ನಡಿಗರು; ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಇನ್ನಿಬ್ಬರು