ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಬಂದ 7 ಕನ್ನಡಿಗರು; ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಇನ್ನಿಬ್ಬರು
ಬೆಂಗಳೂರಿನ ಒಬ್ಬರು, ಮಂಗಳೂರಿನ ಐವರು ಹಾಗೂ ಬಳ್ಳಾರಿಯ ಒಬ್ಬರು ಕಾಬೂಲ್ನಿಂದ ಹೊರಟು ಸುರಕ್ಷಿತವಾಗಿ ಮರಳಿ ಬಂದಿದ್ದು, ಇನ್ನೂ ಮೂವರು ಅಲ್ಲಿಯೇ ಇದ್ದಾರೆ. ಆ ಪೈಕಿ ಇಬ್ಬರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರೆ ಇನ್ನೊಬ್ಬರು ಇಟಲಿಗೆ ಹೋಗುವುದಾಗಿ ಮಾಹಿತಿ ನೀಡಿದ್ದಾರೆ.
ತಾಲಿಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನದಿಂದ 7 ಮಂದಿ ಕನ್ನಡಿಗರು ಸುರಕ್ಷಿತವಾಗಿ ತವರಿಗೆ ಬಂದಿರುವ ಕುರಿತು ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಬೆಂಗಳೂರಿನ ಒಬ್ಬರು, ಮಂಗಳೂರಿನ ಐವರು ಹಾಗೂ ಬಳ್ಳಾರಿಯ ಒಬ್ಬರು ಕಾಬೂಲ್ನಿಂದ ಹೊರಟು ಸುರಕ್ಷಿತವಾಗಿ ಮರಳಿ ಬಂದಿದ್ದು, ಇನ್ನೂ ಮೂವರು ಅಲ್ಲಿಯೇ ಇದ್ದಾರೆ. ಆ ಪೈಕಿ ಇಬ್ಬರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರೆ ಇನ್ನೊಬ್ಬರು ಇಟಲಿಗೆ ಹೋಗುವುದಾಗಿ ಮಾಹಿತಿ ನೀಡಿದ್ದಾರೆ.
ಮರಳಿ ಬಂದ 7 ಜನ ಇವರು: 1. ಹೀರಕ್ ದೇಬನಾಥ್ – ಮಾರತ್ತಳ್ಳಿ, ಬೆಂಗಳೂರು 2. ತನ್ವೀ ಬಳ್ಳಾರಿ ಅಬ್ದುಲ್ – ಸಂಡೂರು, ಬಳ್ಳಾರಿ 3. ದಿನೇಶ್ ರೈ – ಬಜ್ಪೆ, ಮಂಗಳೂರು 4. ಜಗದೀಶ್ ಪೂಜಾರಿ – ಮೂಡಬಿದ್ರೆ, ಮಂಗಳೂರು 5. ಪ್ರಸಾದ್ ಆನಂದ್ – ಉಳ್ಳಾಲ, ಮಂಗಳೂರು 6. ಡೆಸ್ಮಂಡ್ ಡೇವಿಸ್ ಡಿಸೋಜಾ – ಕಿನ್ನಿಗೊಳಿ, ಮಂಗಳೂರು 7. ಶ್ರವಣ್ ಅಂಚನ್ – ಮಂಗಳೂರು
ಕಾಬೂಲ್ನಲ್ಲೇ ಕಾಯುತ್ತಿರುವವರು ಸದ್ಯ ಮರಳಿ ಬಂದಿರುವ ಈ 7 ಕನ್ನಡಿಗರಲ್ಲದೇ ಇನ್ನೂ ಮೂವರು ಕಾಬೂಲ್ ಏರ್ಪೋರ್ಟ್ನಲ್ಲಿಯೇ ಇದ್ದಾರೆ. ಆ ಮೂವರಲ್ಲಿ ಒಬ್ಬರು ಇಟಲಿಗೆ ಹೋಗಲಿದ್ದಾರೆ. ಮಂಗಳೂರಿನ ತೆರೆಸಾ ಕ್ರೋಸ್ತಾ ತಾವು ಅಫ್ಘಾನಿಸ್ತಾನದಿಂದ ನೇರವಾಗಿ ಇಟಲಿಗೆ ಹೋಗಲಿರುವ ಕುರಿತು ಮಾಹಿತಿ ನೀಡಿದ್ದು, ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಗೆ (ಎಂಇಎ) ತಿಳಿಸಿದ್ದಾರೆ. ಅವರನ್ನು ಹೊರತುಪಡಿಸಿ ಇನ್ನಿಬ್ಬರು ಮರಳಿ ಬರಲು ಕಾಯುತ್ತಿದ್ದಾರೆ.
1. ರಾಬರ್ಟ್ ಕ್ಲೀವ್ – ಎನ್.ಆರ್.ಪುರ, ಚಿಕ್ಕಮಗಳೂರು 2. ಜೆರೋನಾ ಸೆಕ್ವೆರಾ – ಮಂಗಳೂರು
ಇನ್ನೊಂದೆಡೆ ಅಫ್ಘನ್ ವಿದ್ಯಾರ್ಥಿಗಳು ಕರ್ನಾಟಕ ಹೆಲ್ಪ್ ಡೆಸ್ಕ್‌ಗೆ ಮೇಲಿಂದ ಮೇಲೆ ಮನವಿ ಮಾಡಿಕೊಂಡು ತಮ್ಮ ಪೋಷಕರನ್ನು ಭಾರತಕ್ಕೆ ಕರೆ ತರುವಂತೆ ಕೇಳಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಭಾರತಕ್ಕೆ ಬರಲು ಇಚ್ಛಿಸುವ ಆಫ್ಘನ್ ಪ್ರಜೆಗಳಿಗೆ ತಾತ್ಕಾಲಿಕ ವೀಸಾ ನೀಡಲಾಗುವುದು. ತಾತ್ಕಾಲಿಕ ವೀಸಾ ಪಡೆಯಲು, ವೆಬ್ ಸೈಟ್ ಮೂಲಕ ಅಪ್ಲೈ ಮಾಡಿ ಎಂದು ನೋಡೆಲ್ ಅಧಿಕಾರಿ ADGP ಉಮೇಶ್ ಕುಮಾರ್ ಸಲಹೆ ನೀಡಿದ್ದಾರೆ.
ಈಗಾಗಲೇ ತುರ್ತು ವೀಸಾಗೆ 14 ಅಫ್ಘಾನಿಸ್ತಾನ್ ವಿದ್ಯಾರ್ಥಿಗಳು ಮನವಿ ಮಾಡಿದ್ದು, ವಿದೇಶಾಂಗ ಇಲಾಖೆಯ ಆಫ್ಘನ್ ಹೆಲ್ಪ್ ಡೆಸ್ಕ್‌ಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದ ವಿವಿಧ ವಿವಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ನಮಗೆ ಹಾಗೂ ನಮ್ಮ ಪೋಷಕರಿಗೆ ತುರ್ತು ವೀಸಾ ಕೊಡಿ ಎಂದು ಕೋರಿಕೆ ಸಲ್ಲಿಸಿರುವ ಬಗ್ಗೆ ನೋಡೆಲ್ ಅಧಿಕಾರಿ ADGP ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
(List of Kannadigas who safely returned from Afghanistan)
ಅಫ್ಘಾನಿಸ್ತಾನದ ಮಹಿಳೆಗೆ ಅಮೆರಿಕಾ ಮಿಲಿಟರಿ ವಿಮಾನದಲ್ಲಿ ಹೆರಿಗೆ; ತಾಯಿ, ಮಗು ಇಬ್ಬರೂ ಕ್ಷೇಮ
Published On - 7:16 pm, Sun, 22 August 21