Tv9 Kannada Digital Exclusive: ತಾಲಿಬಾನಿಗಳು ನಮ್ಮ ಟಿವಿಯನ್ನು ಕಿತ್ತುಕೊಂಡರು: ಅಫ್ಘಾನಿಸ್ತಾನದಲ್ಲಿ ಕನ್ನಡ ನಾಡಿನ ಯೋಧರ ಕಥೆ

ಅಫ್ಘಾನಿಸ್ತಾನದ ಭಾರತೀಯ ರಾಯಭಾರ ಕಚೇರಿಯಲ್ಲೆ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಮೂಲದ ಯೋಧರ ಕಥೆ ಇಲ್ಲಿದೆ.

Tv9 Kannada Digital Exclusive: ತಾಲಿಬಾನಿಗಳು ನಮ್ಮ ಟಿವಿಯನ್ನು ಕಿತ್ತುಕೊಂಡರು: ಅಫ್ಘಾನಿಸ್ತಾನದಲ್ಲಿ ಕನ್ನಡ ನಾಡಿನ ಯೋಧರ ಕಥೆ
ಕಮಾಂಡೊ ಮಂಜುನಾಥ ಮಾಳಿ ಮತ್ತು ಚಿಕ್ಕೋಡಿಯ ಯೋಧ ದಸ್ತಗೀರ್ ಮುಲ್ಲಾ
Follow us
Guruganesh Bhat
| Updated By: guruganesh bhat

Updated on:Aug 21, 2021 | 6:23 PM

ಅಫ್ಘಾನಿಸ್ತಾನದಲ್ಲಿನ ಭಾರತೀಯ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರು ಮರಳಿ ತಾಯ್ನಾಡಿಗೆ ಬಂದಿಳಿಯುತ್ತಿದ್ದಾರೆ. ಕರ್ನಾಟಕದ ಹಲವು ಯೋಧರೂ ಅಫ್ಘಾನಿಸ್ತಾನದಲ್ಲಿ ಸೇವೆಯಲ್ಲಿದ್ದು, ಸದ್ಯ ಕೆಲವರು ದೆಹಲಿಗೆ ಬಂದಿಳಿದ ಕುರಿತು ಯೋಧರ ಕುಟುಂಬ ವರ್ಗ ಮಾಹಿತಿ ನೀಡಿದೆ. ಪ್ರತ್ಯಕ್ಷವಾಗಿ ತಾಲಿಬಾನ್ ಉಗ್ರರನ್ನು ನೋಡಿ, ಹೋರಾಡಿ ಮರಳಿದ ಕರ್ನಾಟಕದ ಮೂವರು ಯೋಧರ ಕುಟುಂಬ ಹೇಳಿಕೊಂಡ ಒಡಲಾಳದ ಕಥೆ ಇಲ್ಲಿದೆ. 

ತಾಲಿಬಾನಿಗಳು ನಮ್ಮ ಟಿವಿಯನ್ನು ಕಿತ್ತುಕೊಂಡರು ಮುದ್ರಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಗದಗ ಜಿಲ್ಲೆಯ ಯೋಧ ಕೂಡ ತಾಯ್ನಾಡಿಗೆ ಮರಳಿದ್ದಾರೆ. ಹೀಗಾಗಿ ಅವರ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಭಾರತದ ರಾಯಭಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ, ಗದಗ ಜಿಲ್ಲೆಯ ಯೋಧ ರವಿ ನೀಲಗಾರ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಸದ್ಯ ಅವರು ದೆಹಲಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ. 12 ವರ್ಷದಿಂದ ಐಟಿಬಿಟಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ಕಳೆದ ಎರಡು ವರ್ಷಗಳಿಂದ ಅಫ್ಘಾನಿಸ್ತಾನದ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 16 ರಂದು ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಅಷ್ಟರಲ್ಲಿ ಅಫ್ಘಾನಿಸ್ತಾನ ದೇಶವನ್ನು ಭಯೋತ್ಪಾದಕರು ವಶ ಪಡೆಸಿಕೊಂಡ ಕಾರಣ ಮರಳಲು ಸಾಧ್ಯವಾಗಿರಲಿಲ್ಲ.

ತಾಲಿಬಾನಿಗಳ ಹಾವಳಿಯನ್ನು ಟಿವಿಯಲ್ಲಿ ಕಂಡು ಪತ್ನಿ ಯಲ್ಲವ್ವ ಯೋಧ ರವಿ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆಗ ಯೋಧ ರವಿ ಪತ್ನಿ ಹಾಗೂ ತಾಯಿಗೆ ಧೈರ್ಯ ಹೇಳಿದ್ದಾರೆ. ನಾವು ಇರುವ ಜಾಗದಲ್ಲಿ ಯಾವುದೇ ಗಲಾಟೆ, ಯುದ್ಧ ಇಲ್ಲ, ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ. ಆಗಸ್ಟ್ 16ರಂದು ಗುಜರಾತಿಗೆ ಬಂದಿಳಿದು ತಕ್ಷಣ ಪತ್ನಿ, ತಾಯಿ ಜೊತೆ ಮಾತನಾಡಿದ್ದಾರೆ. ಆಗ ಇಡೀ ಕುಟುಂಬ ನೆಮ್ಮದಿ ನಿಟ್ಟುಸಿರು ಬಿಟ್ಟಿದೆ. ತಾಲಿಬಾನಿಗಳ ದುಷ್ಕೃತ್ಯವನ್ನು ಯೋಧ ರವಿ ಅವರು ಹಂಚಿಕೊಂಡಂತೆ, ‘ಸುಮಾರು 50ಕ್ಕೂ ಹೆಚ್ಚು ಯೋಧರು ಅಫ್ಘಾನಿಸ್ತಾನದಿಂದ ಟಿವಿ ಖರೀದಿ ಮಾಡಿಕೊಂಡು ಬರುತ್ತಿದ್ದರಂತೆ. ಆದರೆ, ತಾಲಿಬಾನ್ ಭಯೋತ್ಪಾದಕರು ಯೋಧರ ಟಿವಿಗಳು ಕಸಿದುಕೊಂಡು ಕಳಿಸಿದ್ದಾರಂತೆ. ಹೀಗಾಗ ಹಲವು ಸಂಗತಿಗಳು ಯೋಧ ರವಿ ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. ‘ಯೋಧ ರವಿ ಪ್ರೀತಿಯ ಪುತ್ರನಿಗಾಗಿ ಅಫ್ಘಾನಿಸ್ತಾನದಿಂದ ಚಾಕಲೇಟ್, ಡ್ರೈ ಫ್ರುಟ್ಸ್ ತೆಗೆದುಕೊಂಡು ಬಂದಿದ್ದೇನೆ. ಕ್ವಾರಂಟೈನ್ ಮುಗಿದ ತಕ್ಷಣ ಊರಿಗೆ ಬರ್ತೀನಿ’ ಅಂತ ಪುತ್ರನಿಗೆ ಸಮಾಧಾನ ಹೇಳಿದ್ದಾರೆ.

Soldier Ravi Gadag

ಯೋಧ ರವಿ ನೀಲಗಾರ

ಬಳಗಾನೂರ ಗ್ರಾಮದ ನಿಲ್ಲವ್ವ ನೀಲಗಾರ ಕುಟುಂಬದ ಐದು ಜನರ ಪೈಕಿ ಮೂರು ಜನರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಪೈಕಿ ರವಿ ನೀಲಗಾರ ಕೂಡಾ ಒಬ್ಬರು. ಯೋಧ ರವಿ ನೀಲಗಾರ ಅವರಿಗೆ ಮದುವೆಯಾಗಿ 10 ವರ್ಷವಾಗಿದ್ದು, ಏಳು ವರ್ಷದ ಸಂತೋಷ ಎನ್ನುವ ಮಗನಿದ್ದಾನೆ. ಹುಚಷಾರಾಗಿ ಮನೆಗೆ ಮರಳಲಿರುವ ಅಪ್ಪನ ಮಡಿಲಲ್ಲಿ ಆಡುವ ಹುಮ್ಮಸ್ಸು ಮಗು ಸಂತೋಷ್​ದು.

ಚಿಕ್ಕೋಡಿಯ ಯೋಧ ದಸ್ತಗೀರ್ ಮುಲ್ಲಾ ಇದೇ ರೀತಿ ಅಫ್ಘಾನಿಸ್ತಾನದಿಂದ ಚಿಕ್ಕೋಡಿಯ ಯೋಧರೋರ್ವರು ಸಹ ದೆಹಲಿಗೆ ಬಂದಿಳಿದಿದ್ದಾರೆ. ಭಾರತೀಯ ರಾಯಭಾರ ಕಚೇರಿಯಲ್ಲಿ ITBP ಕಮಾಂಡೋ ಆಗಿದ್ದ ದಸ್ತಗಿರ್ ಮುಲ್ಲಾ 2 ವರ್ಷದಿಂದ ಅಫ್ಘಾನಿಸ್ತಾನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭದ್ರತೆ ಒದಗಿಸುತ್ತಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದವರಾದ ಅವರು ತಾಲಿಬಾನಿಗಳು ರಾಯಭಾರ ಕಚೇರಿಗೆ ದಾಳಿಯಿಟ್ಟಾಗ ನಿರಂತರವಾಗಿ ಪ್ರತಿರೋಧಿಸಿ ದಾಳಿಯನ್ನು ತಡೆಗಟ್ಟಿದ್ದರು. ಆದರೆ ಕಾಬೂಲ್​ನಲ್ಲಿ ನಡೆಯುತ್ತಿದ್ದ ದಾಳಿ ಕುರಿತು ಮನೆಯಲ್ಲಿ ಯಾವುದೇ ವಿಷಯವನ್ನೂ ಹಂಚಿಕೊಂಡಿರಲಿಲ್ಲ. ಆದರೆ ಅವರೀಗ ದೆಹಲಿಗೆ ಬಂದಿಳಿದ ಸುದ್ದಿ ಕುಟುಂಬದವರನ್ನು ತಲುಪಿದ್ದು ಎಂದು ಮನೆಗೆ ಮರಳುವರೋ ಎಂದ ಕಾತುರತೆಯಲ್ಲಿ ಕುಟುಂಬಸ್ಥರಿದ್ದಾರೆ.

ಕರೆ ಸ್ವೀಕರಿಸದಿದ್ದಾಗ ಆತಂಕ ಶುರು ಕಾಬೂಲ್​ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಮಾಂಡೊ ಮಂಜುನಾಥ ಮಾಳಿ ಮೂಲತಃ ಮುಧೋಳ ತಾಲ್ಲೂಕಿನ ಕಸಬಾಜಂಬಿ ಗ್ರಾಮದವರು. ಅವರು ಈಮುನ್ನ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯಲ್ಲಿ ಸೇವೆ ಸಲ್ಲಿಸಿ ನಂತರ ಕಮಾಂಡೊ ಟ್ರೇನಿಂಗ್ ಪಡೆದು ರಾಯಭಾರ ಕಚೇರಿಗೆ ಭದ್ರತಾ ಸಿಬ್ಬಂದಿಯಾಗಿದ್ದರು. ಅವರು ಅಫ್ಘಾನಿಸ್ತಾನದಿಂದ ಮರಳಿ ಸದ್ಯ ದೆಹಲಿಗೆ ವಾಪಸ್ ಬಂದಿದ್ದಾರೆ. ಆದರೆ ಕಾಬುಲ್​ನಲ್ಲಿದ್ದಾಗ ಉಗ್ರರ ಸುದ್ದಿ ಕೇಳಿ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಅಳಲನ್ನು ತೋಡಿಕೊಂಡರು ಮಂಜುನಾಥ ಅವರ ಪತ್ನಿ ಅಶ್ವಿನಿ ಮಾಳಿ. ಆಗ ಮನೆಯವರೆಲ್ಲರೂ ಬಹಳ ಹೆದರಿದ್ದೆವು. ನಂತರ ದೆಹಲಿಗೆ ಬಂದು ಪೋನ್ ಮಾಡಿ ಭಯಪಡಬೇಡಿ. ನಮಗೇನೂ ಆಗಿಲ್ಲ, ಹದಿನೈದು ದಿನ‌ ಬಿಟ್ಟು ಬರುತ್ತೇನೆ ಅಂದಿದ್ದಾರೆ. ಆಗಲೇ ಧೈರ್ಯ ಬಂತು ಎಂದು ಅವರು ಆತಂಕದ ಕ್ಷಣಗಳನ್ನು ತೋಡಿಕೊಂಡರು.

ಇದನ್ನೂ ಓದಿ: 

Afghanistan Crisis: ತಾಲಿಬಾನ್ ಗ್ಯಾಂಗ್​ ಜೊತೆ ಕಾಣಿಸಿಕೊಂಡ ಅಫ್ಘಾನಿಸ್ತಾನ್ ಕ್ರಿಕೆಟಿಗ

Afghanistan Economy: ಲಾರಿ ಹತ್ತಿದ ಹಪ್ಪಳದಂತಾದ ಅಫ್ಘಾನಿಸ್ತಾನದ ಆರ್ಥಿಕತೆ; ತಾಲಿಬಾನ್​ ತಾಳಿ ಉಳಿಯೋದು ಕಷ್ಡ

(Afghanistan Crisis Indian Karnataka Soldiers story who served in Indian embassy office)

Published On - 6:15 pm, Sat, 21 August 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ