ನಾಲ್ಕು ತಿಂಗಳ ಬಳಿಕ ಕರ್ನಾಟಕ – ತಮಿಳುನಾಡು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರ; ನಾಳೆಯಿಂದ 250 ಬಸ್ಗಳು ರಸ್ತೆಗೆ
ಮೊದಲ ಹಂತದಲ್ಲಿ ಸಂಚರಿಸಲಿರುವ 250 KSRTC ಬಸ್ಗಳು ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ ತಿರುಕೊಯಿಲೂರು, ಕೊಯಂಬತ್ತೂರು, ತಿರುನಲ್ಲಾರ್, ತಿರುಚಿ, ಮಧುರೈ, ಕುಂಬಕೊಣಂ, ಕಾಂಚಿಪುರಂ, ಚೆನೈ ಹಾಗೂ ಊಟಿಗೆ ಸಂಪರ್ಕ ಕಲ್ಪಿಸಲಿವೆ.
ಕೊರೊನಾ ಕಾರಣದಿಂದ ಕರ್ನಾಟಕ-ತಮಿಳುನಾಡು (Karnataka – Tamil Nadu) ರಾಜ್ಯಗಳ ನಡುವೆ (Inter State) ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿದ್ದ ಕೆಎಸ್ಆರ್ಟಿಸಿ (KSRTC) ನಾಳೆಯಿಂದ ಮತ್ತೆ ಸಂಸ್ಥೆಯ ಬಸ್ಗಳನ್ನು ರಸ್ತೆಗಿಳಿಸಲಿದೆ. ಮೊದಲ ಹಂತದಲ್ಲಿ 250 KSRTC ಬಸ್ಗಳು ಕಾರ್ಯ ನಿರ್ವಹಿಸಲಿದ್ದು, ಸುಮಾರು ನಾಲ್ಕು ತಿಂಗಳ ನಂತರ ತಮಿಳುನಾಡು – ಕರ್ನಾಟಕ ನಡುವೆ ಸಂಚರಿಸಲಿವೆ. ಈ ಬಗ್ಗೆ ಕೆಎಸ್ಆರ್ಟಿಸಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದ್ದು, ನಾಳೆಯಿಂದ ಬಸ್ ಸಂಚಾರ ಆರಂಭವಾಗುತ್ತಿರುವ ಕುರಿತು ಅದರಲ್ಲಿ ಮಾಹಿತಿ ನೀಡಲಾಗಿದೆ.
ಮೊದಲ ಹಂತದಲ್ಲಿ ಸಂಚರಿಸಲಿರುವ 250 KSRTC ಬಸ್ಗಳು ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ ತಿರುಕೊಯಿಲೂರು, ಕೊಯಂಬತ್ತೂರು, ತಿರುನಲ್ಲಾರ್, ತಿರುಚಿ, ಮಧುರೈ, ಕುಂಬಕೊಣಂ, ಕಾಂಚಿಪುರಂ, ಚೆನೈ ಹಾಗೂ ಊಟಿಗೆ ಸಂಪರ್ಕ ಕಲ್ಪಿಸಲಿವೆ. ಆರೋಗ್ಯದ ಹಿತದೃಷ್ಟಿಯಿಂದ ಪ್ರಯಾಣಿಕರು ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಬಸ್ನಲ್ಲಿ ಸಂಚರಿಸಬೇಕಿದೆ.
ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಬೆಂಗಳೂರು: ಆಗಸ್ಟ್ 23, ಸೋಮವಾರದಿಂದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜು ಆರಂಭವಾಗಲಿರುವ (Karnataka School Reopen) ಕಾರಣ ಬಿಎಂಟಿಸಿ ಬಸ್ಗಳಲ್ಲಿ (BMTC Bus) ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಶಾಲಾ- ಕಾಲೇಜಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. 2020-21 ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸ್ ಮತ್ತು ಈ ವರ್ಷದ ಶೈಕ್ಷಣಿಕ ದಾಖಲಾತಿ ಶುಲ್ಕ ಕಟ್ಟಿರುವ ರಶೀದಿ ತೋರಿಸಿ ವಿದ್ಯಾರ್ಥಿಗಳು ಬಿಎಂಟಿಸಿ ವ್ಯಾಪ್ತಿಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಅಥವಾ ಶಾಲಾ ಕಾಲೇಜಿನ ಐಡಿ ಕಾರ್ಡ್ ತೋರಿಸಿಯೂ ಉಚಿತ ಪ್ರಯಾಣ ಸೌಲಭ್ಯ ಪಡೆಯಬಹುದಾಗಿದೆ. ಬಿಎಂಟಿಸಿಯ ಮುಂದಿನ ಆದೇಶದವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಒದಗಿಸಲಾಗಿದೆ.
(KSRTC to resume bus service between Karnataka and Tamil Nadu from 23rd August 2021 with 250 buses)
ಇದನ್ನೂ ಓದಿ: BMTC: ಶಾಲೆ ಆರಂಭವಾಗಲಿರುವ 9-12ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ಕೋಲಾರ: ಒಂದೇ ನೋಂದಣಿ ಸಂಖ್ಯೆಯಲ್ಲಿ 3 ಖಾಸಗಿ ಬಸ್ಗಳು ಸಂಚಾರ; ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ಬಸ್ಗಳು ವಶ