AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಒಂದೇ ನೋಂದಣಿ ಸಂಖ್ಯೆಯಲ್ಲಿ 3 ಖಾಸಗಿ ಬಸ್​ಗಳು ಸಂಚಾರ; ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ಬಸ್​ಗಳು ವಶ

ಒಂದೇ ನಂಬರ್ ಪ್ಲೇಟ್ ಇರುವ ಕರ್ನಾಟಕ ರಿಜಿಸ್ಟ್ರೇಷನ್ ಹೊಂದಿರುವ ಎರಡು ಬಸ್​ಗಳನ್ನ ವಶಕ್ಕೆ ಪಡೆಯಲಾಗಿದೆ. ಹಾಗೂ ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಎರಡು ಬಸ್​ಗಳಲ್ಲಿ ಒಂದು ಬಸ್​ನ ವಶಕ್ಕೆ ಪಡೆಯಲಾಗಿದ್ದು, ಇನ್ನೊಂದು ಬಸ್ ತಪ್ಪಿಸಿಕೊಂಡು ಹೋಗಿದೆ.

ಕೋಲಾರ: ಒಂದೇ ನೋಂದಣಿ ಸಂಖ್ಯೆಯಲ್ಲಿ 3 ಖಾಸಗಿ ಬಸ್​ಗಳು ಸಂಚಾರ; ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ಬಸ್​ಗಳು ವಶ
ಒಂದೇ ನಂಬರ್ ಪ್ಲೇಟ್ ಇರುವ ಬಸ್​ಗಳನ್ನ ವಶಕ್ಕೆ ಪಡೆಯಲಾಗಿದೆ
TV9 Web
| Updated By: sandhya thejappa|

Updated on: Aug 17, 2021 | 12:09 PM

Share

ಕೋಲಾರ: ಒಂದೇ ನಂಬರ್ ಪ್ಲೇಟ್ ಬಳಸಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸಿ ಓಡಾಡುತ್ತಿದ್ದ ಮೂರು ಖಾಸಗಿ ಬಸ್​ಗಳನ್ನ ಆರ್​ಟಿಓ (RTO) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಂಧ್ರ ಹಾಗೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದಲ್ಲಿ ಒಂದೇ ನಂಬರ್ ಪ್ಲೇಟ್ ಹಾಕಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದ ಬಸ್​ಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಕಳೆದ ರಾತ್ರಿ ಮೂರು ಬಸ್ಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಬಸ್ ಪರಾರಿಯಾಗಿದೆ.

ಒಂದೇ ನಂಬರ್ ಪ್ಲೇಟ್ ಇರುವ ಕರ್ನಾಟಕ ರಿಜಿಸ್ಟ್ರೇಷನ್ ಹೊಂದಿರುವ ಎರಡು ಬಸ್​ಗಳನ್ನ ವಶಕ್ಕೆ ಪಡೆಯಲಾಗಿದೆ. ಹಾಗೂ ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಎರಡು ಬಸ್​ಗಳಲ್ಲಿ ಒಂದು ಬಸ್​ನ ವಶಕ್ಕೆ ಪಡೆಯಲಾಗಿದ್ದು, ಇನ್ನೊಂದು ಬಸ್ ತಪ್ಪಿಸಿಕೊಂಡು ಹೋಗಿದೆ. ಆಘಾತಕಾರಿ ವಿಚಾರ ಎಂದರೆ ಇಲ್ಲಿ ಕೇವಲ ತೆರಿಗೆ ವಂಚನೆಯಷ್ಟೇ ಅಲ್ಲ. ರಸ್ತೆಯ ಮೇಲೆ ಓಡಾಡುವ ಜನರ ಜೀವದ ಜೊತೆಗೂ ಈ ಖಾಸಗಿ ಬಸ್ಗಳು ಚೆಲ್ಲಾಟವಾಡುತ್ತಿವೆ. ಬಸ್​ನ ಚಾರ್ಸಿ ನಂಬರ್ ಬೇರೆ ಇರುತ್ತದೆ. ನಂಬರ್ ಪ್ಲೇಟ್ ಬೇರೆ ಇರುತ್ತದೆ. ಇನ್ಸೂರೆನ್ಸ್ ಕೂಡಾ ಇರೋದಿಲ್ಲ. ಎಲ್ಲವೂ ನಕಲಿ ದಾಖಲೆ ಇಟ್ಟುಕೊಂಡು ಓಡಾಡುತ್ತಿರುತ್ತವೆ. ಹೀಗಿರುವಾಗ ಏನಾದರೂ ರಸ್ತೆ ಮೇಲೆ ಅಪಘಾತವಾದರೆ ಜನರ ಜೀವದ ಪಾಡೇನು ಅನ್ನೋ ಪ್ರಶ್ನೆ ಮೂಡುತ್ತದೆ. ಈ ಕಾರಣ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ.

ವಶಕ್ಕೆ ಪಡೆಯಲಾಗಿರುವ ಬಸ್​ಗಳು ಆಂಧ್ರದ ಗಡಿ ಭಾಗದ ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಯಾವುದೇ ಪರ್ಮಿಟ್ ಇಲ್ಲದೆ ಓಡಾಡುತ್ತಿದ್ದವು ಎಂಬ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮುಳಬಾಗಲು, ಬೇತಮಂಗಲ ಮತ್ತಿತರ ಕಡೆ ಈ ಬಸ್ಗಳು ಓಡಾಡುತ್ತಿದ್ದವು ಎನ್ನಲಾಗಿದೆ.

ಒಂದೇ ನಂಬರ್ ಪ್ಲೇಟ್ ಇರುವ ಬಸ್​ಗಳು

ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ ಅಪರ ಸಾರಿಗೆ ಆಯುಕ್ತ ನರೇಂದ್ರ ಓಲೇಕಾರ್, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಮೋಟಾರು ವಾಹನ ನಿರೀಕ್ಷಕರುಗಳಾದ ಸುರೇಶ್, ತಿಪ್ಪೇಸ್ವಾಮಿ, ಸುಧೀರ್ ಬಾಬು ಹಾಗೂ ಸಿಬ್ಬಂದಿ ಮೂರು ಬಸ್ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮೂರು ಬಸ್​ಗಳನ್ನು ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರ ವಶಕ್ಕೆ ನೀಡಿದ್ದು, ಬಸ್​ಗಳ ನಿಜವಾದ ಮಾಲೀಕರು ಹಾಗೂ ಬಸ್​ಗಳ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ

640 ಮಂದಿಯನ್ನು ಒಂದೇ ಬಾರಿಗೆ ಅಫ್ಘಾನ್​​ನಿಂದ ಕತಾರ್​ಗೆ ಸಾಗಿಸಿದ ಯುಎಸ್​ ಮಿಲಿಟರಿ ವಿಮಾನ; ಮನಕಲಕುವ ದೃಶ್ಯ

‘ವಿಶ್ವವೇ ವಿಫಲವಾಗಿದೆ’ ಕಣ್ಣೀರಿನಲ್ಲಿರುವ ಅಫ್ಘಾನಿ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ ವೈರಲ್

(RTO officials have seized 3 private buses traveling on same registration number in kolar)