640 ಮಂದಿಯನ್ನು ಒಂದೇ ಬಾರಿಗೆ ಅಫ್ಘಾನ್​​ನಿಂದ ಕತಾರ್​ಗೆ ಸಾಗಿಸಿದ ಯುಎಸ್​ ಮಿಲಿಟರಿ ವಿಮಾನ; ಮನಕಲಕುವ ದೃಶ್ಯ

ಅಫ್ಘಾನಿಸ್ತಾನದ ನಿವಾಸಿಗಳು ಸಿಕ್ಕಸಿಕ್ಕ ವಿಮಾಗಳಿಗೆ ಜೋತು ಬಿದ್ದಾದರೂ ಪರವೂರಿಗೆ ಹೋಗಲು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ತಾಲಿಬಾನ್​​ ಉಗ್ರರು ಸಿಕ್ಕಾಪಟೆ ಎಂಜಾಯ್​ ಮಾಡುತ್ತಿದ್ದಾರೆ.

640 ಮಂದಿಯನ್ನು ಒಂದೇ ಬಾರಿಗೆ ಅಫ್ಘಾನ್​​ನಿಂದ ಕತಾರ್​ಗೆ ಸಾಗಿಸಿದ ಯುಎಸ್​ ಮಿಲಿಟರಿ ವಿಮಾನ; ಮನಕಲಕುವ ದೃಶ್ಯ
ವಿಮಾನದಲ್ಲಿ ಹತ್ತಿ ಕುಳಿತ ಜನರು
Follow us
TV9 Web
| Updated By: Lakshmi Hegde

Updated on:Aug 17, 2021 | 12:34 PM

ತಾಲಿಬಾನ್​ ಉಗ್ರರ ಹಿಡಿತದಲ್ಲಿರುವ ಅಪ್ಘಾನಿಸ್ತಾನ (Afghanistan)ದಿಂದ ಅನೇಕಾನೇಕ ಜನರು ಪಾರಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹಾಗೇ, ಇದೀಗ ಕಾಬೂಲ್​​ (Kabul)ನಿಂದ ಹೇಗಾದರೂ ಬೇರೆಡೆಗೆ ಹೋಗಬೇಕು ಎಂಬ ಕಾರಣಕ್ಕೆ ಯುಎಸ್​​ನ ಮಿಲಿಟರಿ ಸರಕು ವಿಮಾನವೊಂದರಲ್ಲಿ ಬರೋಬ್ಬರಿ 640 ಅಫ್ಘಾನಿಗಳು ತುಂಬಿರುವ ಫೋಟೋ ವೈರಲ್​ ಆಗಿದೆ. ಯುಎಸ್​​ನ ರಕ್ಷಣಾ ಮತ್ತು ಭದ್ರತಾ ಸುದ್ದಿ ತಾಣವಾಗಿರುವ ಡಿಫೆನ್ಸ್​ ಒನ್​​ನಿಂದ ಫೋಟೋ ಪ್ರಕಟಿಸಿದೆ. ಅಮೆರಿಕದ C-17 Globemaster III ಸರಕು ವಿಮಾನ ಇದಾಗಿದೆ. ಈ ವಿಮಾನದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ದಿದ್ದು ಇದೇ ಮೊದಲು ಎಂದು ಯುಎಸ್​ ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ. ಹಾಗೇ, ವಿಮಾನದಲ್ಲಿದ್ದ ಮಹಿಳೆಯರು, ಮಕ್ಕಳು ಸೇರಿ ಎಲ್ಲರನ್ನೂ ಕತಾರ್​ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದೂ ತಿಳಿಸಿದ್ದಾರೆ.

C-17 ಸರಕು ವಿಮಾನದಲ್ಲಿ ಇಷ್ಟೆಲ್ಲ ಜನರನ್ನು ಸಾಗಿಸುವ ಯೋಜನೆ ಇರಲಿಲ್ಲ. ಆದರೆ ಅಫ್ಘಾನಿಸ್ತಾನದ ಜನರು ತುಂಬ ಗಾಬರಿಯಾಗಿದ್ದಾರೆ. ವಿಮಾನ ಕಾಣುತ್ತಿದ್ದಂತೆ ನೂಕು-ನುಗ್ಗಲಿನಿಂದ ಹತ್ತಿಕುಳಿತಿದ್ದಾರೆ ಎಂದು ಯುಎಸ್​ ಡಿಫೆನ್ಸ್​ ಒನ್​ ಸುದ್ದಿ ತಾಣ ವರದಿ ಮಾಡಿದೆ. ಹೀಗೆ ಸೀಟುಗಳಿಲ್ಲದ ಕಾರ್ಗೋ ವಿಮಾನದಲ್ಲಿ ಅಫ್ಘಾನರು ಬೆಚ್ಚಗೆ ಕುಳಿತ ಫೋಟೋ ನೋಡಿದರೆ ಎಂಥ ಕಲ್ಲುಮನಸಾದರೂ ಕರಗದೆ ಇರದು.

ಹೀಗೆ ಅಫ್ಘಾನಿಸ್ತಾನದ ನಿವಾಸಿಗಳು ಸಿಕ್ಕಸಿಕ್ಕ ವಿಮಾಗಳಿಗೆ ಜೋತು ಬಿದ್ದಾದರೂ ಪರವೂರಿಗೆ ಹೋಗಲು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ತಾಲಿಬಾನ್​​ ಉಗ್ರರು ಸಿಕ್ಕಾಪಟೆ ಎಂಜಾಯ್​ ಮಾಡುತ್ತಿದ್ದಾರೆ. ಸಂಸತ್ತಿಗೆ ಹೋಗಿ ಕುಳಿತಿದ್ದಾರೆ. ಮನರಂಜನಾ ಪಾರ್ಕ್​​ನಲ್ಲಿ ಮಸ್ತಿಯಲ್ಲಿ ತೊಡಗಿದ್ದಾರೆ. ಮನುಕುಲದ ವ್ಯತಿರಿಕ್ತ ತೋರಿಸುವ ಸನ್ನಿವೇಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಅಫ್ಘಾನಿಸ್ತಾನವನ್ನು ತಾಲಿಬಾನ್​ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ಮೇಲೆ ಅಲ್ಲಿಂದ ಬೇರೆ ದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣಕ್ಕೆ ಕಾಬೂಲ್​​ನ ಏರ್​ಪೋರ್ಟ್​​ನಲ್ಲಿ ಸಿಕ್ಕಾಪಟೆ ಅವ್ಯವಸ್ಥೆ ಉಂಟಾಗಿದೆ. ಮೊನ್ನೆ ಕಾಬೂಲ್​​ನ ವಿಮಾನ ನಿಲ್ದಾಣದಲ್ಲಿ ತಾಲಿಬಾನಿಗಳು ಉಗ್ರರ ದಾಳಿ ನಡೆಸಿದ್ದರು. ಅದಾದ ಮೇಲೆ ಇಬ್ಬರು ಅಫ್ಘಾನಿಗಳು ವಿಮಾನದ ಚಕ್ರದ ಮೇಲೆ ಕುಳಿತು, ಅದು ಮೇಲೆ ಹಾರುತ್ತಿದ್ದಂತೆ ಕೆಳಗೆ ಬಿದ್ದು ಮೃತಪಟ್ಟಿದ್ದರು.  ಆ ಭಯನಾಕ ದೃಶ್ಯ ಕೂಡ ವೈರಲ್​ ಆಗಿತ್ತು.

ಇದನ್ನೂ ಓದಿ: ನೆಲಮಂಗಲಕ್ಕೆ ಆಗಮಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ; ಕೊವಿಡ್ ನಿಯಮ ಉಲ್ಲಂಘಿಸಿ ಸಚಿವರಿಗೆ ಸ್ವಾಗತ 

‘ವಿಶ್ವವೇ ವಿಫಲವಾಗಿದೆ’ ಕಣ್ಣೀರಿನಲ್ಲಿರುವ ಅಫ್ಘಾನಿ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ ವೈರಲ್

(640 Afghans packed in one US military plane to escape from Afghanistan)

Published On - 11:46 am, Tue, 17 August 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್