AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾಬೂಲ್​​ ಮನರಂಜನಾ ಪಾರ್ಕ್​​ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್​ಮೆಂಟ್​; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ

ತಾಲಿಬಾನ್​ ಉಗ್ರರು ಕೈಯಲ್ಲಿ ಬಂದೂಕು ಹಿಡಿದು, ಕಾಬೂಲ್​ನ ಮನರಂಜನಾ ಪಾರ್ಕ್​ವೊಂದರಲ್ಲಿ ಎಲೆಕ್ಟ್ರಿಕ್​ ಬಂಪರ್​ ಕಾರ್​ ಆಟ ಆಡುತ್ತಿರುವುದನ್ನು ಒಂದು ವಿಡಿಯೋದಲ್ಲಿ ನೋಡಬಹುದು.

Video: ಕಾಬೂಲ್​​ ಮನರಂಜನಾ ಪಾರ್ಕ್​​ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್​ಮೆಂಟ್​; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ
ಅಮ್ಯೂಸ್​ಮೆಂಟ್​ ಪಾರ್ಕ್​​ನಲ್ಲಿ ತಾಲಿಬಾನ್​ ಉಗ್ರರ ಆಟ
TV9 Web
| Edited By: |

Updated on:Aug 17, 2021 | 2:37 PM

Share

ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದುಕೊಂಡಿರುವ ತಾಲಿಬಾನ್​ ಉಗ್ರರು ಇದೀಗ ಸಿಕ್ಕಾಪಟೆ ಎಂಜಾಯ್​ ಮಾಡುತ್ತಿದ್ದಾರೆ. ಆದರೆ ಎಲ್ಲೇ ಹೋಗಲಿ, ಏನೇ ಮಾಡಲಿ ಶಸ್ತ್ರಾಸ್ತ್ರಗಳನ್ನು ಮಾತ್ರ ಕೈ ಬಿಡುತ್ತಿಲ್ಲ. ಉಗ್ರರು ನಿನ್ನೆ ಅಫ್ಘಾನಿಸ್ತಾನದ ಸಂಸತ್ತನ್ನು ಪ್ರವೇಶಿಸಿ ಎಲ್ಲೆಂದರೆಲ್ಲ ಕುಳಿತು, ಮೊಬೈಲ್​ ನೋಡುತ್ತಿದ್ದ ಫೋಟೋ-ವಿಡಿಯೋಗಳು ವೈರಲ್​ ಆಗಿದ್ದವು. ಇದೀಗ ಅವರು ಫನ್ನಿಯಾಗಿ ಸಮಯ ಕಳೆಯುತ್ತಿರುವ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಉಗ್ರರ ಕ್ರೌರ್ಯಕ್ಕೆ ಅದೆಷ್ಟೋ ಜನರು ನಿರಾಶ್ರಿತರಾಗಿ ಒದ್ದಾಡುತ್ತಿದ್ದರೆ, ಇತ್ತ ಇವರು ಅಮ್ಯೂಸ್​ಮೆಂಟ್​ ಪಾರ್ಕ್​ಗಳಲ್ಲಿ ಮಕ್ಕಳಾಟ ಆಡುತ್ತ, ನಗುತ್ತ, ಕೇಕೆ ಹಾಕುತ್ತಿದ್ದಾರೆ.

ತಾಲಿಬಾನ್​ ಉಗ್ರರು ಕೈಯಲ್ಲಿ ಬಂದೂಕು ಹಿಡಿದು, ಕಾಬೂಲ್​ನ ಮನರಂಜನಾ ಪಾರ್ಕ್​ವೊಂದರಲ್ಲಿ ಎಲೆಕ್ಟ್ರಿಕ್​ ಬಂಪರ್​ ಕಾರ್​ ಆಟ ಆಡುತ್ತಿರುವುದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ, ಇನ್ನೊಂದು ಪ್ರತ್ಯೇಕ ವಿಡಿಯೋದಲ್ಲಿ ಆಟದ ಕುದುರೆಗಳನ್ನೇರಿ ಎಂಜಾಯ್​ ಮಾಡುತ್ತಿದ್ದಾರೆ. ಮತ್ತೊಂದಷ್ಟು ಉಗ್ರರು ಸುತ್ತಲೂ ನಿಂತು ನೋಡುತ್ತಿದ್ದಾರೆ. ಉಗ್ರರ ಕೈವಶವಾದ ತಾಲಿಬಾನ್​​ನಿಂದ ಪರಾರಿಯಾಗಿಲು ಸಾವಿರಾರು ಜನರು ಯುಎಸ್​ ಮಿಲಿಟರಿ ವಿಮಾನವನ್ನು ಬೇಕಾಬಿಟ್ಟಿ ಹತ್ತಿ, ನೂಕುನುಗ್ಗಲು ಉಂಟಾದ ವಿಡಿಯೋಗಳು ನಿನ್ನೆ ವೈರಲ್​ ಆಗಿದ್ದವು. ವಿಮಾನದ ರೆಕ್ಕೆಗಳ ಮೇಲೆ, ಎಂಜಿನ್​ ಎಲ್ಲೆಂದರೆಲ್ಲ ಹತ್ತುವುದನ್ನು ವಿಡಿಯೋದಲ್ಲಿ ನೋಡಬಹುದಿತ್ತು. ಒಂದೆಡೆ ದುಃಖ..ನೋವಿನ ವಿಡಿಯೋಗಳಾದರೆ, ಇನ್ನೊಂದೆಡೆ ಉಗ್ರರ ಖುಷಿ, ಅಬ್ಬರದ ನಗುವಿನ ವಿಡಿಯೋಗಳು. ಹೀಗೆ ಒಂದಕ್ಕೊಂದು ವ್ಯತಿರಿಕ್ತ ವಿಡಿಯೋಗಳನ್ನು ನೋಡಿದರೆ ಅಲ್ಲಿನ ಪರಿಸ್ಥಿಯ ಬಗ್ಗೆ ಸ್ಪಷ್ಟವಾದೊಂದು ಚಿತ್ರಣ ಸಿಗುತ್ತದೆ.

ಇದನ್ನೂ ಓದಿ: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​

Late Night Eating: ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಎಚ್ಚರ ಇರಲಿ

Published On - 9:50 am, Tue, 17 August 21

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?