- Kannada News Photo gallery Azadi Ka Amrut Mahotsav Bengaluru Central Jail arranges Competition for prisoners here is the photos GGD
Photo Gallery: 75ನೇ ಸ್ವಾತಂತ್ರ್ಯೋತ್ಸವ: ಪರಪ್ಪನ ಅಗ್ರಹಾರದ ಜೈಲುಹಕ್ಕಿಗಳಿಗೆ ವಿವಿಧ ಸ್ಪರ್ಧೆ, ಅಂಬೇಡ್ಕರ್ ಚಿತ್ರ ಬಿಡಿಸಿದ ಕೈದಿ ವಿಜೇತೆ: ಚಿತ್ರಗಳನ್ನು ನೋಡಿ
ಭಾರತ ಮಾತೆ, ಡಾ.ಬಿ ಆರ್ ಅಂಬೇಡ್ಕರ್, ಪರಿಸರ, ಗಾಂಧೀಜಿ, ಬುದ್ದ, ವಿಷ್ಣು, ಕೃಷ್ಣ ,ಬಾಲಕೃಷ್ಣ, ಹಳ್ಳಿ ಪರಿಸರ ಸೇರಿದಂತೆ ಅನೇಕ ಚಿತ್ರಗಳ ಕೈದಿಗಳು ಚಿತ್ರಿಸಿದ್ದರು. (ಸಚಿತ್ರ ವರದಿ: ಶಿವಪ್ರಸಾದ್, ಕ್ರೈ ಬ್ಯೂರೋ, ಟಿವಿ9)
Updated on:Aug 22, 2021 | 9:27 PM

Azadi Ka Amrut Mahotsav Bengaluru Central Jail arranges Competition for prisoners

Azadi Ka Amrut Mahotsav Bengaluru Central Jail arranges Competition for prisoners

ಜೈಲುಹಕ್ಕಿಗಳು ಉತ್ಸಾಹದಿಂದ ಚಿತ್ರ ಬರೆದರು. ಹಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಜತೆಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ಘೋಷಿಸಲಾಯಿತು.

ಚಿತ್ರಕಲಾ ಸ್ಪರ್ಧೆಗಳಲ್ಲಿ ಒಟ್ಟು 42 ಕೈದಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕೈದಿಗಳು ಬಿಡಿಸಿದ ವಿಭಿನ್ನ ಚಿತ್ರಗಳು ಜೈಲಿನ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿತು.

ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ನೈಜೇರಿಯಾ ದೇಶದ ಪ್ರಜೆಗಳೂ ಕೂಡ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಇತರ ಸಜಾಬಂಧಿ ಕೈದಿಗಳ ಜತೆ ಜೈಲುವಾಸ ಅನುಭವಿಸುತ್ತಿರುವ ನೈಜೀರಿಯನ್ ಪ್ರಜೆಗಳೂ ಕೂಡ ಸಹಜವಾಗಿಯೇ ಭಾಗಿಯಾಗಿದ್ದರು.

Azadi Ka Amrut Mahotsav Bengaluru Central Jail arranges Competition for prisoners

ಭಾರತ ಮಾತೆ, ಡಾ.ಬಿ ಆರ್ ಅಂಬೇಡ್ಕರ್, ಪರಿಸರ, ಗಾಂಧೀಜಿ, ಬುದ್ದ, ವಿಷ್ಣು, ಕೃಷ್ಣ ,ಬಾಲಕೃಷ್ಣ, ಹಳ್ಳಿ ಪರಿಸರ ಸೇರಿದಂತೆ ಅನೇಕ ಸುಂದರ ಚಿತ್ರಗಳನ್ನು ಕೈದಿಗಳು ಚಿತ್ರಿಸಿದ್ದರು.
Published On - 9:03 pm, Sun, 22 August 21




