ಕ್ಯಾಬ್ ಆಯ್ತು, ಇವಿ ಸ್ಕೂಟರ್ ಆಯ್ತು; ಓಲಾ ಕಂಪನಿಯ ಗುರಿ ಈಗ ಇಲೆಕ್ಟ್ರಿಕ್ ಕಾರು! 2023 ರಲ್ಲಿ ಬರುತ್ತಂತೆ ಇ-ಕಾರು!

ಕ್ಯಾಬ್ ಆಯ್ತು, ಇವಿ ಸ್ಕೂಟರ್ ಆಯ್ತು; ಓಲಾ ಕಂಪನಿಯ ಗುರಿ ಈಗ ಇಲೆಕ್ಟ್ರಿಕ್ ಕಾರು! 2023 ರಲ್ಲಿ ಬರುತ್ತಂತೆ ಇ-ಕಾರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2021 | 5:35 PM

ಕಾರು ತಯಾರಿಸಲಿರುವ ವಿಷಯವನ್ನು ಭಾವಿಶ್ ಟ್ವಿಟರ್ ಬಳಕೆದಾರರೊಬ್ಬರೊಂದಿಗೆ ನಡೆಸಿರುವ ಮೋಜಿನ ಸಂಭಾಷಣೆಯಲ್ಲಿ ಖಚಿತಪಡಿಸಿದ್ದಾರೆ. ಸದರಿ ಬಳಕೆದಾರ ಭಾವಿಶ್ಗೆ ಡೀಸೆಲ್ ಕಾರು ಬಳಸುತ್ತೀರಾ ಅಥವಾ ಪೆಟ್ರೋಲ್ ಇಲ್ಲವೇ ಇಲೆಕ್ಟಿಕ್ ಕಾರಾ? ಅಂತ ಕೇಳಿದ್ದಾರೆ.

ಆಗಸ್ಟ್ 15 ರಂದು ಇವಿ ಸ್ಕೂಟರ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿರುವ ಬೆಂಗಳೂರಿನ ಓಲಾ ಕಂಪನಿಯು, ಇವಿ ವಾಹನಗಳ ಸೆಗ್ಮಂಟ್ನಲ್ಲಿ ಮತ್ತೊಂದು ಅಡಿ ಮುಂದೆ ಸಾಗುವ ನಿರ್ಧಾರ ಮಾಡಿದೆ. ಹೌದು, ಇವಿ ಸ್ಕೂಟರ್ ಸಕ್ಸಸ್ ಕಂಪನಿಯ ಮಾಲೀಕ ಭಾವಿಶ್ ಅಗರ್ವಾಲ್ ಅವರಿಗೆ ಇಲೆಕ್ಟ್ರಾನಿಕ್ ಕಾರನ್ನು ಸಹ ಉತ್ಪಾದಿಸುವ ಪ್ರೇರಣೆ ನೀಡಿದೆ. ತಮ್ಮ ಟ್ವೀಟ್ನಲ್ಲಿ ಭಾವಿಶ್ ಹೇಳಿಕೊಂಡಿರುವ ಹಾಗೆ ಓಲಾ ಇಲೆಕ್ಟ್ರಾನಿಕ್ ಕಾರ್ 2023ರಲ್ಲಿ ಮಾರುಕಟ್ಟೆಗೆ ಬರಲಿದೆ.

ಕಾರು ತಯಾರಿಸಲಿರುವ ವಿಷಯವನ್ನು ಭಾವಿಶ್ ಟ್ವಿಟರ್ ಬಳಕೆದಾರರೊಬ್ಬರೊಂದಿಗೆ ನಡೆಸಿರುವ ಮೋಜಿನ ಸಂಭಾಷಣೆಯಲ್ಲಿ ಖಚಿತಪಡಿಸಿದ್ದಾರೆ. ಸದರಿ ಬಳಕೆದಾರ ಭಾವಿಶ್ಗೆ ಡೀಸೆಲ್ ಕಾರು ಬಳಸುತ್ತೀರಾ ಅಥವಾ ಪೆಟ್ರೋಲ್ ಇಲ್ಲವೇ ಇಲೆಕ್ಟಿಕ್ ಕಾರಾ? ಅಂತ ಕೇಳಿದ್ದಾರೆ.

ಅದಕ್ಕೆ ಭಾವಿಶ್ ಎರಡು ತಿಂಗಳು ಹಿಂದಿನವರೆಗೆ ತನ್ನಲ್ಲಿ ಯಾವ ಕಾರೂ ಇರಲಿಲ್ಲ, ಈಗ ಒಂದು ಒಂದು ಹೈಬ್ರೀಡ್ ಕಾರೊಂದನ್ನು ಉಪಯೋಗಿಸುತ್ತಿರುವುದಾಗಿ ಹೇಳಿದ್ದಾರೆ.

ಎರಡು ವರ್ಷಗಳ ಬಳಿಕ ಲಾಂಚ್ ಮಾಡಲಿರುವ ಇಲೆಕ್ಟ್ರಿಕ್ ಕಾರಿನ ಬಗ್ಗೆ ಭಾವಿಶ್ ಹೆಚ್ಚಿನ ವಿವರಗಳನ್ನೇನೂ ಹಂಚಿಕೊಂಡಿಲ್ಲ. ಆದರೆ ವಿದೇಶಿ ಕಾರಗಳನ್ನು ಖರೀದಿಸುವ ಇಲ್ಲವೇ ಆಮದು ಮಾಡಿಕೊಳ್ಳುವವರಿಗೆ ಅವರು ಒಂದು ಸಲಹೆ ನೀಡಿದ್ದಾರೆ. ಅಂಥ ವ್ಯಾಮೋಹ ಬಿಟ್ಟು ಹಣವನ್ನು ಸ್ವದೇಶಿ ಉತ್ಪನ್ನಗಳ ಮೇಲೆ ಹಣ ಹೂಡಲು ಅವರು ಪ್ರೋತ್ಸಾಹಿಸಿದ್ದು ಈ ವಲಯದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗುವ ಕ್ರಾಂತಿಯನ್ನು ಸೃಷ್ಟಿಸಲು ನೆರವಾಗುವುದಕ್ಕೆ ಕರೆ ನೀಡಿದ್ದಾರೆ. ಹಾಗೆಯೇ, ತಂತ್ರಜ್ಞಾನವನ್ನು ಬೆಳಸಲು ಮತ್ತು ಮಾಲಿನ್ಯರಹಿತ ಪರಿಸರ ನಿರ್ಮಿಸಲು ಜನ ಮುಂದಾಗಬೇಕು ಅಂತ ಭಾವಿಶ್ ಹೇಳಿದ್ದಾರೆ

ಇದನ್ನೂ ಓದಿ: .Mumbai Indians: ಆಟಗಾರರಿರುವ ಹೋಟೆಲ್​ನ ವಿಡಿಯೋ ಹಂಚಿಕೊಂಡ ಮುಂಬೈ ಇಂಡಿಯನ್ಸ್: ಹೇಗಿದೆ ಗೊತ್ತಾ?