Account Aggregator: ಅಕೌಂಟ್ ಅಗ್ರಿಗೇಟರ್ ಅಂದರೇನು? ಆ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು
ಅಕೌಂಟ್ ಅಗ್ರಿಗೇಟರ್ ಬಗ್ಗೆ ತಿಳಿದಿರಬೇಕಾದ ಸಾಮಾನ್ಯ ಸಂಗತಿಗಳು ಇಲ್ಲಿವೆ. ಹಲವು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ದೊರೆಯಲಿದೆ.
ಭಾರತದಲ್ಲಿ ಕಳೆದ ವಾರ ಅಕೌಂಟ್ ಅಗ್ರಿಗೇಟರ್ (ಎಎ) ಜಾಲವನ್ನು ಅನಾವರಣಗೊಳಿಸಲಾಗಿದೆ. ಹೂಡಿಕೆ ಮತ್ತು ಸಾಲ ನೀಡಿಕೆಯಲ್ಲಿ ಕ್ರಾಂತಿಕಾರಕ ಹಣಕಾಸು ಡೇಟಾ ಹಂಚಿಕೆ ವ್ಯವಸ್ಥೆ ಇದಾಗಿದ್ದು, ಲಕ್ಷಾಂತರ ಗ್ರಾಹಕರಿಗೆ ತಮ್ಮ ಹಣಕಾಸಿನ ದಾಖಲೆಗಳ ಮೇಲೆ ಹೆಚ್ಚಿನ ಲಭ್ಯತೆ ಮತ್ತು ನಿಯಂತ್ರಣ ನೀಡುತ್ತದೆ. ಸಾಲದಾತರು ಹಾಗೂ ಫಿನ್ಟೆಕ್ ಕಂಪೆನಿಗಳಿಗೆ ಸಂಭಾವ್ಯ ಗ್ರಾಹಕರ ಸಮೂಹವನ್ನು ವಿಸ್ತರಿಸುತ್ತದೆ. ಅಕೌಂಟ್ ಅಗ್ರಿಗೇಟರ್ ಸಾರ್ವಜನಿಕರಿಗೆ ತಮ್ಮ ವೈಯಕ್ತಿಕ ಹಣಕಾಸು ಡೇಟಾದ ಮೇಲೆ ನಿಯಂತ್ರಣ ಹೊಂದುವ ಅಧಿಕಾರ ನೀಡುತ್ತದೆ, ಇಲ್ಲವಾದರೆ ಅದು ಗುಪ್ತವಾಗಿಯೇ ಉಳಿಯುತ್ತದೆ. ಭಾರತದಲ್ಲಿ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆ ತರುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಲಕ್ಷಾಂತರ ಗ್ರಾಹಕರು ತಮ್ಮ ಹಣಕಾಸು ಡೇಟಾಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಮತ್ತು ಎಲ್ಲ ಸಂಸ್ಥೆಗಳ ಮಧ್ಯೆ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನದ ಮೂಲಕ ಹಂಚಿಕೊಳ್ಳುವ ಅಧಿಕಾರವನ್ನು ನೀಡುತ್ತದೆ. ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆ ಬ್ಯಾಂಕಿಂಗ್ನಲ್ಲಿ ದೇಶದ ಎಂಟು ದೊಡ್ಡ ಬ್ಯಾಂಕ್ಗಳಲ್ಲಿ ಆರಂಭವಾಗಿದೆ. ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆ ಸಾಲ ನೀಡಿಕೆಯನ್ನು ಮತ್ತು ಸಂಪತ್ತು ನಿರ್ವಹಣೆಯನ್ನು ಇನ್ನಷ್ಟು ಶೀಘ್ರ ಮತ್ತು ಅಗ್ಗಗೊಳಿಸಲಿದೆ.
1) ಅಕೌಂಟ್ ಅಗ್ರಿಗೇಟರ್ ಎಂದರೇನು? ಅಕೌಂಟ್ ಅಗ್ರಿಗೇಟರ್ (ಎಎ) ಎಂಬುದು ಆರ್ಬಿಐ ನಿಯಂತ್ರಿತ ಒಂದು ವರ್ಗದ ಸಂಸ್ಥೆ (ಎನ್ಬಿಎಫ್ಸಿ ಒಳಗೊಂಡ-ಎಎ ಪರವಾನಗಿ)ಯಾಗಿದ್ದು, ಇದರಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ಮತ್ತು ಡಿಜಿಟಲ್ ರೂಪದಲ್ಲಿ ಪಡೆಯಬಹುದು. ಅದನ್ನು ಎಎ ಮೂಲಕ ತಾವು ಖಾತೆ ಹೊಂದಿರುವ ಒಂದು ಹಣಕಾಸು ಸಂಸ್ಥೆಯಿಂದ ಮತ್ತೊಂದು ನಿಯಂತ್ರಿತ ಹಣಕಾಸು ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದು. ಸಾರ್ವಜನಿಕರ ಒಪ್ಪಿಗೆಯಿಲ್ಲದೆ ಡೇಟಾವನ್ನು ಹಂಚಿಕೆ ಮಾಡಲಾಗುವುದಿಲ್ಲ. ಹಲವು ಅಕೌಂಟ್ ಅಗ್ರಿಗೇಟರ್ ಗಳಿರಲಿದ್ದು, ಅವುಗಳ ನಡುವೆ ಸಾರ್ವಜನಿಕರು ಆಯ್ಕೆ ಮಾಡಿಕೊಳ್ಳಬಹುದು. ಅಕೌಂಟ್ ಅಗ್ರಿಗೇಟರ್ ‘ಖಾಲಿ ಚೆಕ್‘ ಸ್ವೀಕೃತಿಯ ದೀರ್ಘಾವಧಿ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುತ್ತದೆ, ನಿಮ್ಮ ಡೇಟಾದ ಪ್ರತಿ ಬಳಕೆಯು ಎಲ್ಲ ಹಂತದಲ್ಲಿ ಅನುಮತಿ ಮತ್ತು ನಿಯಂತ್ರಣ ಹೊಂದಿರುತ್ತದೆ.
2) ಸಾಮಾನ್ಯ ವ್ಯಕ್ತಿಯ ಹಣಕಾಸು ಜೀವನ ಹೊಸ ಅಕೌಂಟ್ ಅಗ್ರಿಗೇಟರ್ ಜಾಲದಿಂದ ಹೇಗೆ ಸುಧಾರಣೆಯಾಗುತ್ತದೆ? ಭಾರತೀಯ ಹಣಕಾಸು ವ್ಯವಸ್ಥೆಯಲ್ಲಿ ಇಂದು ಗ್ರಾಹಕರು ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಭೌತಿಕವಾಗಿ ಸಹಿ ಮಾಡಿದ ಮತ್ತು ಸ್ಕ್ಯಾನ್ ಮಾಡಲಾದ ಬ್ಯಾಂಕ್ ಸ್ಟೇಟ್ಮೆಂಟ್ ಪ್ರತಿಗಳನ್ನು ಹಂಚಿಕೊಳ್ಳುವುದು, ನೋಟರಿ ಮಾಡಿಸುವುದು ಅಥವಾ ಮುದ್ರಾಂಕ ದಾಖಲೆಗಳಿಗಾಗಿ ಅಲೆದಾಡುವುದು ಅಥವಾ ನಿಮ್ಮ ಹಣಕಾಸು ಹಿನ್ನೆಲೆಯನ್ನು ಮೂರನೇ ವ್ಯಕ್ತಿಗೆ ನೀಡಲು ವಯಕ್ತಿಕ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಹಂಚಿಕೊಳ್ಳುವುದು ಮತ್ತಿತರವು ಇದರಲ್ಲಿ ಸೇರಿವೆ. ಅಕೌಂಟ್ ಅಗ್ರಿಗೇಟರ್ ಜಾಲ, ಮೊಬೈಲ್ ಆಧಾರಿತ ಒಂದು ಸರಳ, ಸುಲಭ ಮತ್ತು ಸುರಕ್ಷಿತ ಡಿಜಿಟಲ್ ಡೇಟಾ ಲಭ್ಯತೆ ಮತ್ತು ಹಂಚಿಕೆ ಪ್ರಕ್ರಿಯೆ ಮೂಲಕ ಈ ಎಲ್ಲವನ್ನೂ ಬದಲಾಯಿಸಲಿದೆ. ಇದರಿಂದಾಗಿ ಹೊಸ ಬಗೆಯ ಸೇವೆಗಳಲ್ಲಿ ಅವಕಾಶಗಳು, ಅಂದರೆ ಉದಾಹರಣೆಗೆ ಹೊಸ ವಿಧಾನದ ಸಾಲಗಳು ಸೃಷ್ಟಿಯಾಗಲಿವೆ.
ಬ್ಯಾಂಕ್ ಖಾತೆ ಹೊಂದಿರುವ ಸಾರ್ವಜನಿಕರು ಅಕೌಂಟ್ ಅಗ್ರಿಗೇಟರ್ ಜಾಲಕ್ಕೆ ಸೇರ್ಪಡೆ ಆಗಬಹುದು. 8 ಬ್ಯಾಂಕ್ಗಳು ಈಗಾಗಲೇ ಇದನ್ನು ಆರಂಭಿಸಿದ್ದು, ನಾಲ್ಕು ಬ್ಯಾಂಕ್ಗಳು ಈಗಾಗಲೇ ಡೇಟಾ ಹಂಚಿಕೆಗೆ ಒಪ್ಪಿಗೆ ಸೂಚಿಸಿವೆ. (ಆಕ್ಸಿಸ್, ಐಸಿಐಸಿಐ, ಎಚ್ಡಿಎಫ್ಸಿ ಮತ್ತು ಇಂಡಸ್ಇಂಡ್) ಮತ್ತು ಸದ್ಯದಲ್ಲೇ ನಾಲ್ಕು ಬ್ಯಾಂಕ್ಗಳು ಹಂಚಿಕೆ ಮಾಡಿಕೊಳ್ಳಲಿವೆ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್).
3) ಆಧಾರ್ ಇಕೆವೈಸಿ ಡೇಟಾ ಹಂಚಿಕೆ, ಕ್ರೆಡಿಟ್ ಬ್ಯೂರೋ ಡೇಟಾ ಹಂಚಿಕೆ ಮತ್ತು ಸಿಕೆವೈಸಿಯಂತಹ ಪ್ಲಾಟ್ಫಾರ್ಮ್ಗಳಿಗಿಂತ ಅಕೌಂಟ್ ಅಗ್ರಿಗೇಟರ್ ಹೇಗೆ ಭಿನ್ನವಾದುದು? ಆಧಾರ್ ಇಕೆವೈಸಿ ಮತ್ತು ಸಿಕೆವೈಸಿ ಕೇವಲ ನಿಮ್ಮ ಗುರುತಿನ ನಾಲ್ಕು ಡೇಟಾ ಕ್ಷೇತ್ರಗಳು ಕೆವೈಸಿ ಉದ್ದೇಶಕ್ಕಾಗಿ ಹಂಚಿಕೆ ಮಾಡಲು (ಉದಾಹರಣೆಗೆ ಹೆಸರು, ವಿಳಾಸ, ಲಿಂಗ ಇತ್ಯಾದಿ) ಅವಕಾಶ ನೀಡುತ್ತದೆ. ಅಂತೆಯೇ ಕ್ರೆಡಿಟ್ ಬ್ಯೂರೋ ಡೇಟಾದಲ್ಲಿ ಕೇವಲ ಸಾಲದ ಹಿನ್ನೆಲೆ ಮತ್ತು ಅಥವಾ ಕ್ರೆಡಿಟ್ ಸ್ಕೋರ್ ಮಾತ್ರ ನೋಡಬಹುದಾಗಿದೆ. ಅಕೌಂಟ್ ಅಗ್ರಿಗೇಟರ್ ಜಾಲದಲ್ಲಿ ಉಳಿತಾಯ/ನಿಶ್ಚಿತ/ಚಾಲ್ತಿ ಖಾತೆಗಳ ಬ್ಯಾಂಕ್ ವಹಿವಾಟು ವಿವರ ಅಥವಾ ವಹಿವಾಟಿನ ಡೇಟಾವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
4) ಯಾವ ಬಗೆಯ ಡೇಟಾವನ್ನು ಹಂಚಿಕೊಳ್ಳಬಹುದು? ಇಂದು ಎಲ್ಲ ಬ್ಯಾಂಕ್ಗಳ ನಡುವೆ ನೇರವಾಗಿ ಜಾಲದ ಮೂಲಕ ಬ್ಯಾಂಕಿಂಗ್ ವಹಿವಾಟು ಡೇಟಾವನ್ನು ಹಂಚಿಕೊಳ್ಳಲು ಲಭ್ಯವಿದೆ (ಉದಾಹರಣೆಗೆ ಚಾಲ್ತಿ ಅಥವಾ ಉಳಿತಾಯ ಖಾತೆ ಬ್ಯಾಂಕ್ ವಿವರಗಳು).
ಕ್ರಮೇಣ ಎಎ ಜಾಲವನ್ನು ಎಲ್ಲ ಹಣಕಾಸು ಡೇಟಾ ಲಭ್ಯತೆಯನ್ನು ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ. ಅವುಗಳೆಂದರೆ ತೆರಿಗೆ ಡೇಟಾ, ಪಿಂಚಣಿ ಡೇಟಾ, ಷೇರುಗಳ ಡೇಟಾ (ಮ್ಯೂಚುವಲ್ ಫಂಡ್ ಮತ್ತು ಬ್ರೋಕರೇಜ್) ಮತ್ತು ವಿಮಾ ಡೇಟಾ ಗ್ರಾಹಕರಿಗೆ ಲಭ್ಯವಿದೆ. ಅಲ್ಲದೆ ಎಎ ಮೂಲಕ ಹಣಕಾಸು ವಲಯ ಹೊರತುಪಡಿಸಿದಂತೆ ಆರೋಗ್ಯ ರಕ್ಷಣೆ ಮತ್ತು ದೂರವಾಣಿ ಡೇಟಾಕ್ಕೂ ವಿಸ್ತರಿಸಲು ಅವಕಾಶ ನೀಡುತ್ತದೆ.
5) ಎಎಗಳ ದೃಷ್ಟಿಕೋನ ಅಥವಾ ಅಗ್ರಿಗೇಟ್ ವೈಯಕ್ತಿಕ ಡೇಟಾವೆ? ಡೇಟಾ ಹಂಚಿಕೆ ಸುರಕ್ಷಿತವೆ? ಅಕೌಂಟ್ ಅಗ್ರಿಗೇಟರ್ಸ್ ಡೇಟಾವನ್ನು ನೋಡಲಾಗದು. ಸಾರ್ವಜನಿಕರ ನಿರ್ದೇಶನ ಮತ್ತು ಒಪ್ಪಿಗೆ ಆಧರಿಸಿ ಒಂದು ಹಣಕಾಸು ಸಂಸ್ಥೆಯಿಂದ ಮತ್ತೊಂದಕ್ಕೆ ವರ್ಗಾಯಿಸಿಕೊಳ್ಳಬಹುದು. ಹೆಸರಿಗೆ ವ್ಯತಿರಿಕ್ತವಾಗಿ ಅವರು ನಿಮ್ಮ ಡೇಟಾವನ್ನು ಅಗ್ರಿಗೇಟ್ ಮಾಡಲಾಗದು. ಎಎಗಳು ತಂತ್ರಜ್ಞಾನ ಕಂಪೆನಿಗಳ ರೀತಿ ಅಲ್ಲ. ಅವುಗಳು ನಿಮ್ಮ ಡೇಟಾವನ್ನು ಅಗ್ರಿಗೇಟ್ ಮಾಡುತ್ತವೆ ಮತ್ತು ನಿಮ್ಮ ವಿಸ್ತೃತ ವಿವರಗಳನ್ನು ಸೃಷ್ಟಿಸುತ್ತವೆ.
ಎಎಗಳ ಡೇಟಾ ಹಂಚಿಕೆ ಕಳುಹಿಸುವವರು ಮಾತ್ರ ಎನ್ಕ್ರಿಪ್ಟ್ ಮಾಡಬಹುದಾಗಿದೆ ಮತ್ತು ಅದನ್ನು ಸ್ವೀಕರಿಸುವವರು ಮಾತ್ರ ಡಿಕ್ರಿಪ್ಟ್ ಮಾಡಬಹುದು. ಮೊದಲಿನಿಂದ ಕೊನೆಯವರೆಗೆ ಎನ್ಕ್ರಿಪ್ಷನ್ ಮತ್ತು ಡಿಜಿಟಲ್ ಸಹಿಯಂತಹ ತಂತ್ರಜ್ಞಾನ ಬಳಕೆಯು ಕಾಗದದ ದಾಖಲೆಗಳನ್ನು ಹಂಚಿಕೊಳ್ಳುವುದಕ್ಕಿಂತ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ.
6) ಗ್ರಾಹಕರು ತಾವು ಡೇಟಾ ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧರಿಸಬಹುದೇ? ಹೌದು ಖಂಡಿತ. ಎಎಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಗ್ರಾಹಕರಿಗೆ ಸಂಪೂರ್ಣ ಸ್ವಯಂ ಪ್ರೇರಿತವಾದುದು. ಗ್ರಾಹಕರು ಬಳಸುವ ಬ್ಯಾಂಕ್ ಆ ಜಾಲಕ್ಕೆ ಸೇರ್ಪಡೆಯಾಗಿದ್ದರೆ ಆ ವ್ಯಕ್ತಿ ಎಎಗೆ ನೋಂದಣಿ ಮಾಡಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ತಮ್ಮ ಯಾವ ಖಾತೆಯನ್ನು ಜೋಡಣೆ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಒಂದು ಅಕೌಂಟ್ ಅಗ್ರಿಗೇಟರ್ ಮೂಲಕ ಹೊಸ ಸಾಲಗಾರ ಅಥವಾ ಹಣಕಾಸು ಸಂಸ್ಥೆಗೆ ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ತಮ್ಮ ಖಾತೆಗಳ ವಿವರಗಳನ್ನು ಹಂಚಿಕೊಳ್ಳಲು ಒಪ್ಪಿಗೆ ನೀಡಬೇಕು. ಗ್ರಾಹಕರು ಯಾವುದೇ ಸಮಯದಲ್ಲೂ ಮಾಹಿತಿ ಹಂಚಿಕೆಯ ತಮ್ಮ ಒಪ್ಪಿಗೆಯನ್ನು ತಿರಸ್ಕರಿಸಬಹುದು. ಒಂದು ವೇಳೆ ಗ್ರಾಹಕರು ಒಂದು ಅವಧಿಗೆ, ಅಂದರೆ ಸಾಲದ ಅವಧಿ ನಿರ್ದಿಷ್ಟ ವಿಧಾನದಲ್ಲಿ ಡೇಟಾ ಹಂಚಿಕೆಯನ್ನು ಒಪ್ಪಿಕೊಳ್ಳಬಹುದು. ನಂತರ ಗ್ರಾಹಕರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಆ ನಿರ್ಧಾರವನ್ನು ವಾಪಸ್ ಪಡೆಯಬಹುದು.
7) ಗ್ರಾಹಕರು ಒಮ್ಮೆ ಸಂಸ್ಥೆಯೊಂದಿಗೆ ತಮ್ಮ ಡೇಟಾ ಹಂಚಿಕೊಂಡಿದ್ದರೆ ಅದನ್ನು ಎಷ್ಟು ದೀರ್ಘ ಅವಧಿಯವರೆಗೆ ಬಳಕೆ ಮಾಡಿಕೊಳ್ಳಬಹುದು? ಡೇಟಾ ಹಂಚಿಕೆಗಾಗಿ ಒಪ್ಪಿಗೆಯ ಸಮಯದಲ್ಲಿ ಸ್ವೀಕರಿಸುವ ಸಂಸ್ಥೆಯು ನಿಖರವಾದ ಅವಧಿಯನ್ನು ಗ್ರಾಹಕರಿಗೆ ತೋರಿಸುತ್ತದೆ.
8) ಗ್ರಾಹಕರು ಹೇಗೆ ಎಎ ಅಡಿ ನೋಂದಣಿ ಮಾಡಿಕೊಳ್ಳಬೇಕು? ನೀವು ಆ್ಯಪ್ ಅಥವಾ ವೆಬ್ಸೈಟ್ ಮೂಲಕ ಎಎ ಅಡಿ ನೋಂದಣಿ ಮಾಡಿಕೊಳ್ಳಬೇಕು. ಎಎ ಒಪ್ಪಿಗೆ ಪ್ರಕ್ರಿಯೆ ನೀಡಲು (ಯೂಸರ್ ನೇಮ್) ಮತ್ತಿತರವುಗಳನ್ನು ಬಳಕೆ ಮಾಡಲಾಗುವುದು.
ಇಂದು ಎಎಗಳಿಗೆ ಕಾರ್ಯಾಚರಣೆಯ ಪರವಾನಗಿಯನ್ನು ಪಡೆದುಕೊಂಡಿರುವ ನಾಲ್ಕು ಆ್ಯಪ್ಗಳು ಡೌನ್ ಲೋಡ್ಗೆ ಲಭ್ಯವಿವೆ (ಫಿನ್ ವಿವು ಒನ್ ಮನಿ, ಸಿಎಎಂಎಸ್, ಫಿನ್ ಸರ್ವ್ ಮತ್ತು ಎನ್ಎಡಿಎಲ್). ಇನ್ನೂ ಮೂರು ಸಂಸ್ಥೆಗಳು ಆರ್ ಬಿಐನಿಂದ ತಾತ್ವಿಕ ಅನುಮೋದನೆಯನ್ನು ಸ್ವೀಕರಿಸಿವೆ (ಫೋನ್ ಪೇ, ಯೋಡ್ಲಿ ಮತ್ತು ಪೆರ್ ಫಿಯೋಸ್) ಮತ್ತು ಅವುಗಳು ಸದ್ಯದಲ್ಲೇ ಆ್ಯಪ್ಗಳನ್ನು ಆರಂಭಿಸಬಹುದು.
9) ಪ್ರತಿಯೊಂದು ಎಎಯಲ್ಲೂ ಗ್ರಾಹಕರು ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆಯೇ? ಇಲ್ಲ. ಜಾಲದಲ್ಲಿನ ಯಾವುದೇ ಬ್ಯಾಂಕ್ನ ಯಾವುದೇ ಡೇಟಾವನ್ನು ಪಡೆಯಲು ಗ್ರಾಹಕರು ಎಎನೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.
10) ಈ ಸೌಕರ್ಯ ಬಳಕೆಗಾಗಿ ಗ್ರಾಹಕರು ಎಎಗೆ ಹಣ ಪಾವತಿ ಮಾಡುವ ಅಗತ್ಯವಿದೆಯೇ? ಇದು ಎಎ ಅನ್ನು ಅವಲಂಬಿಸಿದೆ. ಕೆಲವು ಎಎಗಳು ಉಚಿತವಾದವು, ಏಕೆಂದರೆ ಅವುಗಳು ಹಣಕಾಸು ಸಂಸ್ಥೆಗಳಿಗೆ ಸೇವಾ ಶುಲ್ಕವನ್ನು ವಿಧಿಸುತ್ತವೆ. ಕೆಲವು ಸಣ್ಣ ಮಟ್ಟದಲ್ಲಿ ಬಳಕೆದಾರರಿಗೆ ಶುಲ್ಕವನ್ನು ವಿಧಿಸಬಹುದು.
11) ಗ್ರಾಹಕರ ಬ್ಯಾಂಕ್ ಎಎ ಜಾಲದ ಮೂಲಕ ಡೇಟಾ ಹಂಚಿಕೆಗೆ ಸೇರ್ಪಡೆಯಾಗಿದ್ದರೆ ಯಾವ ಬಗೆಯ ಹೊಸ ಸೇವೆಗಳು ಲಭ್ಯವಾಗುತ್ತವೆ? ಸಾಲಗಳ ಲಭ್ಯತೆ ಮತ್ತು ಹಣಕಾಸು ನಿರ್ವಹಣೆ ಈ ಎರಡು ಪ್ರಮುಖ ಸೇವೆಗಳಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಸುಧಾರಣೆಗಳಾಗಲಿವೆ. ಗ್ರಾಹಕರು ಸಣ್ಣ ವ್ಯಾಪಾರ ಅಥವಾ ವಯಕ್ತಿಕ ಸಾಲವನ್ನು ಬಯಸಿದರೆ ಸಾಲ ನೀಡುವ ಸಂಸ್ಥೆಯ ಜತೆ ಹಲವು ದಾಖಲೆಗಳನ್ನು ಹಂಚಿಕೆ ಮಾಡಿಕೊಳ್ಳುವ ಅಗತ್ಯವಿದೆ. ಇದು ಅತ್ಯಂತ ಕ್ಲಿಷ್ಟಕರ ಮತ್ತು ಇಂದಿನ ಭೌತಿಕ ಪ್ರಕ್ರಿಯೆ ಮೂಲಕ ಸಾಲ ಪಡೆದಿರುವುದು, ಸಾಲದ ಲಭ್ಯತೆಯ ಮೇಲೂ ಪರಿಣಾಮಗಳಾಗಬಹುದು. ಅಂತೆಯೇ ಇಂದು ಹಣಕಾಸು ನಿರ್ವಹಣೆ ಅತ್ಯಂತ ಕಷ್ಟಕರ. ಏಕೆಂದರೆ ಡೇಟಾ ಹಲವು ಭಿನ್ನ ಸ್ಥಳಗಳಲ್ಲಿ ಸಂಗ್ರಹವಾಗಿರುತ್ತದೆ.
ಅಕೌಂಟ್ ಅಗ್ರಿಗೇಟರ್ ಮೂಲಕ ಕಂಪೆನಿಯು ಶೀಘ್ರವಾಗಿ ಮತ್ತು ಅಗ್ಗವಾಗಿ ನಕಲು ಮಾಡಲಾಗದಂತಹ ಡೇಟಾ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ. ಸಾಲ ಮೌಲ್ಯಮಾಪನ ಪ್ರಕ್ರಿಯೆಯನ್ನು ಶೀಘ್ರಗೊಳಿಸಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ಸಾಲ ದೊರಕಲಿದೆ. ಭೌತಿಕ ಖಾತ್ರಿ ಇಲ್ಲದೆ ಗ್ರಾಹಕರು ಸಾಲವನ್ನು ಪಡೆಯಬಹುದಾಗಿದೆ. ಭವಿಷ್ಯದ ಇನ್ವಾಯ್ಸ್ ಮಾಹಿತಿ ಹಂಚಿಕೆ ಅಥವಾ ಜಿಎಸ್ಟಿ ಅಥವಾ ಜಿಎಂ ಮೂಲಕ ಸರ್ಕಾರದ ವ್ಯವಸ್ಥೆಗೆ ನೇರವಾಗಿ ಸ್ವೀಕೃತಿ ಅಥವಾ ನಗದು ಹರಿವಾಗಲಿದೆ.
ಇದನ್ನೂ ಓದಿ: Account Aggregator Framework: ಫೋನ್ ಬಿಲ್ನ ಸರಿಯಾದ ಪಾವತಿ ಸಹ ಸಾಲ ಸಿಗಲು ನೆರವಾಗುತ್ತದೆ ಎಂದಿದ್ದೇಕೆ ನಿಲೇಕಣಿ