Account Aggregator Framework: ಫೋನ್​ ಬಿಲ್​ನ ಸರಿಯಾದ ಪಾವತಿ ಸಹ ಸಾಲ ಸಿಗಲು ನೆರವಾಗುತ್ತದೆ ಎಂದಿದ್ದೇಕೆ ನಿಲೇಕಣಿ

Account Aggregator Framework: ಫೋನ್​ ಬಿಲ್​ನ ಸರಿಯಾದ ಪಾವತಿ ಸಹ ಸಾಲ ಸಿಗಲು ನೆರವಾಗುತ್ತದೆ ಎಂದಿದ್ದೇಕೆ ನಿಲೇಕಣಿ
ನಂದನ್ ನಿಲೇಕಣಿ (ಸಂಗ್ರಹ ಚಿತ್ರ)

“ಯುನೈಟೆಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) 2016ರಲ್ಲಿ 1 ಲಕ್ಷ ವಹಿವಾಟಿನಿಂದ 2021ರಲ್ಲಿ ತಿಂಗಳಿಗೆ 300 ಕೋಟಿ ವಹಿವಾಟುಗಳಿಗೆ ವೇಗವಾಗಿ ಏರಿಕೆಯಾದಂತೆ, ಅಕೌಂಟ್ ಅಗ್ರಿಗೇಟರ್ (ಎಎ) ಫ್ರೇಮ್​ವರ್ಕ್​ (​ಚೌಕಟ್ಟು) ಸಹ ವಿಸ್ತಾರ ಆಗುವ ಮತ್ತು ಭಾರತದಲ್ಲಿ ಎಲ್ಲರೂ ಸಾಲ ಪಡೆಯುವುದಕ್ಕೆ ಅನುಕೂಲ ಆಗುವಂಥ ಸನ್ನಿವೇಶವನ್ನು ಸೃಷ್ಟಿಸುತ್ತದೆ ಎಂದು ನಂಬುವುದಾಗಿ,” ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರು ಹೇಳಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಎಎ ಫ್ರೇಮ್​ವರ್ಕ್ ಸೆಪ್ಟೆಂಬರ್ 2ರಂದು ಕಾರ್ಯಾರಂಭ ಮಾಡಿತು ಮತ್ತು ಎಂಟು ಬ್ಯಾಂಕ್​ಗಳು ನೆಟ್‌ವರ್ಕ್‌ಗೆ ಸೇರಿಕೊಂಡವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಮತ್ತು ಫೆಡರಲ್ ಬ್ಯಾಂಕ್ ಹಣಕಾಸು ಮಾಹಿತಿ ಪೂರೈಕೆದಾರರು (ಎಫ್‌ಐಪಿ) ಮತ್ತು ಹಣಕಾಸು ಮಾಹಿತಿ ಬಳಕೆದಾರರು (ಎಫ್‌ಐಯು) ಆಗಿ ಸೇರಿಕೊಂಡಿವೆ.

ಇಂದಿನ ಸಮಾರಂಭದಲ್ಲಿ ಮಾತನಾಡಿದ ನಿಲೇಕಣಿ, “ಡಿಜಿಟಲ್ ಹೆಜ್ಜೆಗುರುತುಗಳನ್ನು ಸರಿಯಾಗಿ ಬಳಸಿದಾಗ ಗ್ರಾಹಕರು ತಮ್ಮ ಸ್ವಂತ ಡೇಟಾವನ್ನು ಬಳಸಿಕೊಂಡು ಸಬಲೀಕರಣಗೊಂಡರೆ ಸಣ್ಣ ಉದ್ಯಮಗಳಿಗೆ ದೊಡ್ಡ ಪ್ರಮಾಣದ ಸಾಲವನ್ನು ದೊರೆಯುವಂತೆ ಮಾಡುತ್ತದೆ. ಈ ಮೂಲಕ ಸಾಲವು ಎಲ್ಲರ ಕೈಗೆಟುಕುವುದಕ್ಕೆ ಕಾರಣ ಆಗಬಹುದು. ಎಎ ಎಕೋ ಸಿಸ್ಟಮ್ ಸಂಪೂರ್ಣವಾಗಿ ಕಾರ್ಯಗತಗೊಂಡಾಗ ವ್ಯಕ್ತಿಗಳು ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಮಾಹಿತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ, ಸಾಲಗಳಿಗೆ ಅರ್ಹರಾಗಲು ಸಹಾಯ ಮಾಡುತ್ತದೆ,” ಎಂದು ಅವರು ಹೇಳಿದ್ದಾರೆ.

ಡಿಜಿಟಲ್ ಪೇಮೆಂಟ್​ ಸಹಾಯ
“ಮಾಹಿತಿ ಅಸಮಾನತೆಯ ಕಾರಣದಿಂದಾಗಿ ಸಣ್ಣ ಉದ್ಯಮಗಳಿಗೆ ವರ್ಕಿಂಗ್ ಕ್ಯಾಪಿಟಲ್ ಸಾಮಾನ್ಯವಾಗಿ ಲಭ್ಯ ಆಗುವುದಿಲ್ಲ. ಒಂದು ವೇಳೆ ವ್ಯಾಪಾರವು ತನ್ನದೇ ಆದ ಡಿಜಿಟಲ್ ಹೆಜ್ಜೆಗುರುತನ್ನು ಹೊಂದಿದ್ದಲ್ಲಿ, ಅಂದರೆ ಮಾರಾಟಗಾರರಿಗೆ ಮಾಡಿದ ಪಾವತಿಗಳು, ಗ್ರಾಹಕರು ಮಾಡಿದ ಖರೀದಿಗಳು, ಇನ್‌ವಾಯ್ಸ್‌ಗಳು, ತೆರಿಗೆಗಳು ಇತ್ಯಾದಿಗಳನ್ನು ಹೊಂದಿದ್ದರೆ ಆ ಮಾಹಿತಿಯನ್ನು ಸಾಲದಾತನು ಆ ಎಂಎಸ್​ಎಂಇಗೆ ಸಾಲ ನೀಡುವ ನಿರ್ಧಾರ ತೆಗೆದುಕೊಳ್ಳಲು ಬಳಸಬಹುದು,” ಎಂದು ಅವರು ವಿವರಿಸಿದ್ದಾರೆ. ಎಎ ಫ್ರೇಮ್‌ವರ್ಕ್ ವೇಗವನ್ನು ಪಡೆಯುತ್ತದೆ. ಈಗ ಎಕೋ ಸಿಸ್ಟಮ್ ಲೈವ್ ಆಗಿದೆ ಮತ್ತು ಯುಪಿಐ ಸಾಕ್ಷಿಯಾದ ಯಶಸ್ಸಿನಂತೆಯೇ ಹೆಚ್ಚಿನ ಬ್ಯಾಂಕ್​ಗಳು ಎಫ್‌ಐಪಿ ಮತ್ತು ಎಫ್‌ಐಯುಗಳಾಗಿ ಸೇರಿಕೊಂಡಿವೆ.

ನಿಲೇಕಣಿ ಮಾತನಾಡಿ, “ತಂತ್ರಜ್ಞಾನದಲ್ಲಿನ ನಮ್ಮ ಅನುಭವವೆಂದರೆ, ಒಮ್ಮೆ ಎಲ್ಲ ಕಟ್ಟಡದ ವಸ್ತುಗಳು ಸರಿಯಾಗಿದ್ದಲ್ಲಿ ಮತ್ತು ನಾವು ಎಲ್ಲರನ್ನು ಸಂಪರ್ಕಿಸಿದಲ್ಲಿ ಮತ್ತು ಒಂದೇ ವೇದಿಕೆಯಲ್ಲಿ ತಂದಲ್ಲಿ ಇದ್ದಕ್ಕಿದ್ದಂತೆ ಮ್ಯಾಜಿಕ್ ಸಂಭವಿಸುತ್ತದೆ. ವಿಷಯಗಳು ಹೊರಹೊಮ್ಮುತ್ತವೆ. ನಾವು ಅದನ್ನು ಯುಪಿಐ ಮೂಲಕ ನೋಡಿದ್ದೇವೆ. ಇದನ್ನು ಒಂದು ಕಡೆ ತರಲು ಹಲವು ವರ್ಷಗಳನ್ನು ತೆಗೆದುಕೊಂಡಿತು ಮತ್ತು 2016ರ ಮೇ ತಿಂಗಳಲ್ಲಿ ಆರ್‌ಬಿಐ ಆರಂಭಿಸಿತು. 2016ರ ಅಕ್ಟೋಬರ್‌ನಲ್ಲಿ, ಯುಪಿಐ ಕೇವಲ 100,000 ವಹಿವಾಟುಗಳನ್ನು ಮಾಡುತ್ತಿತ್ತು. ಇಂದು ಐದು ವರ್ಷಗಳ ನಂತರ ಇದು ತಿಂಗಳಿಗೆ 3 ಬಿಲಿಯನ್ ವಹಿವಾಟುಗಳನ್ನು ಮಾಡುತ್ತಿದೆ”.

ದಾಖಲೆಗಳ ಸತ್ಯಾಸತ್ಯತೆ ಖಾತ್ರಿ ಪಡಿಸುತ್ತದೆ
ಎಲ್ಲ ಮಾಹಿತಿ ವಿನಿಮಯಕ್ಕೆ ಒಂದೇ ವೇದಿಕೆಯನ್ನು ಒದಗಿಸುವ ಮೂಲಕ ಡೇಟಾ ಹಂಚಿಕೆಯನ್ನು ಸುಲಭಗೊಳಿಸುವ ಗುರಿಯನ್ನು ಎಎ ಫ್ರೇಮ್​ವರ್ಕ್ ಹೊಂದಿದೆ. 2016ರಲ್ಲಿ ಆರ್‌ಬಿಐ ಅನುಮೋದಿಸಿದ ಹೊಸ ವರ್ಗದ ಪರವಾನಗಿ ಪಡೆದ ಎನ್‌ಬಿಎಫ್‌ಸಿಗಳು ಎಎ ಮುಖ್ಯವಾಗಿ ತಂತ್ರಜ್ಞಾನ ಸೇವಾ ಪೂರೈಕೆದಾರರಾಗಿದ್ದು ಅದು ಗ್ರಾಹಕರ ಮಾಹಿತಿಯನ್ನು ಎಫ್‌ಐಪಿ ಮತ್ತು ಎಫ್‌ಐಯುಗಳ ನಡುವೆ ಹಂಚಿಕೊಳ್ಳುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಪರವಾಗಿ ಮತ್ತು ನಿಮ್ಮ ಒಪ್ಪಿಗೆಯೊಂದಿಗೆ ಡೇಟಾವನ್ನು ಆಯಾ ಘಟಕಗಳ ನಡುವೆ ಹಂಚಿಕೊಳ್ಳುವ ಕೆಲಸವನ್ನು ಇದು ಮಾಡುತ್ತದೆ. ಇದನ್ನು ಡಿಜಿಟಲ್ ಆಗಿ ಮಾಡಲಾಗುತ್ತದೆ ಹಾಗೂ ಹಣಕಾಸಿನ ಸಂಸ್ಥೆಗಳಿಂದ ನೇರವಾಗಿ ಸಂಗ್ರಹಿಸಿದ ದಾಖಲೆಗಳ ಸತ್ಯಾಸತ್ಯತೆ ಖಾತ್ರಿಪಡಿಸುತ್ತದೆ.

ಭವಿಷ್ಯದಲ್ಲಿ ವಿಮಾ ಮತ್ತು ಪಿಂಚಣಿ ನಿಧಿಯಂತಹ ಹಣಕಾಸು ಸೇವೆಗಳಿಂದ ಆರಂಭಿಸಿ ಇತರ ಬಳಕೆಯ ಪ್ರಕರಣಗಳಿಗೆ ಈ ಚೌಕಟ್ಟನ್ನು ವಿಸ್ತರಿಸಬಹುದು ಮತ್ತು ಅಂತಿಮವಾಗಿ ಆರೋಗ್ಯ ರಕ್ಷಣೆಯ ಕ್ಷೇತ್ರವನ್ನು ಸುಧಾರಿಸಲು ಬಳಸಬಹುದು ಎಂದು ನಿಲೇಕಣಿ ಹೇಳಿದ್ದಾರೆ. “ಈ ನೆಟ್‌ವರ್ಕ್‌ನಲ್ಲಿ ಟೆಲಿಕಾಂ ಡೇಟಾವನ್ನು ಪಡೆಯಲು ಮಾತುಕತೆ ನಡೆಯುತ್ತಿದೆ. ಅದರರ್ಥ ಏನೆಂದರೆ, ಯಾರೇ ಆಗಲಿ ಸಮಯಕ್ಕೆ ಸರಿಯಾಗಿ ತಮ್ಮ ಪ್ರೀಪೇಯ್ಡ್​ ಫೋನ್​ ಬಿಲ್ ಪಾವತಿಸುತ್ತಿದ್ದರೆ ಅಂಥವರಿಗೂ ಆ ಡೇಟಾದ ಮೂಲಕವೇ ಸಾಲ ದೊರೆಯುವ ಅವಕಾಶ ಇರುತ್ತದೆ. ಆರಂಭದಲ್ಲಿ ಹಣಕಾಸು ಸೇವೆಗಳಿಗಾಗಿ ಅಭಿವೃದ್ಧಿಪಡಿಸಲಾಗಿದ್ದರೂ ಇದೇ ವ್ಯವಸ್ಥೆಯನ್ನು ಯಾವುದೇ ವಲಯಕ್ಕೆ ಅನ್ವಯಿಸಬಹುದು,”ಎಂದು ಅವರು ಹೇಳಿದ್ದಾರೆ.

ಈಗಾಗಲೇ ಎಎ ಕಾರ್ಯ ನಿರ್ವಹಿಸುತ್ತಿರುವಂಥವು
ಇನ್ನೂ ಮುಂದುವರಿದು,, “ವಾಸ್ತವವಾಗಿ, ಆರೋಗ್ಯ ರಕ್ಷಣೆಗೆ ಎಎ ಫ್ರೇಮ್​ವರ್ಕ್ ಅನ್ವಯಿಸುವ ಬಗ್ಗೆ ಚರ್ಚೆ ಇದೆ. ಆದ್ದರಿಂದ ಜನರು ತಮ್ಮ ಡೇಟಾವನ್ನು ಬಳಸಲು ಉತ್ತಮ ಆರ್ಥಿಕ ಸೇವೆಗಳು ಮತ್ತು ಆರೋಗ್ಯ ವಲಯದಲ್ಲಿ ಸಾಲಗಳನ್ನು ಪಡೆಯಲು ಸಂಪರ್ಕ ಪಡೆಯುತ್ತಾರೆ. ಆದ್ದರಿಂದ ಇದು ನಿಜವಾಗಿಯೂ ಪರಿವರ್ತನೆಯ ಕ್ರಮದ ಆರಂಭವಾಗಿದೆ ಎಂದು ಹೇಳಿದ್ದಾರೆ.

CAMSFinServ, ಕುಕೀಜರ್ ಟೆಕ್ನಾಲಜೀಸ್, ಫಿನ್‌ಸೆಕ್ AA ಟೆಕ್ನಾಲಜೀಸ್ ಮತ್ತು NSEL ಅಸೆಟ್ ಡೇಟಾ ಪ್ರಸ್ತುತ ನಾಲ್ಕು ಪರವಾನಗಿ ಪಡೆದ AAಗಳು ಕಾರ್ಯನಿರ್ವಹಿಸುತ್ತಿವೆ. ಪರ್ಫಿಯೋಸ್ ಅಕೌಂಟ್ ಅಗ್ರಿಗೇಶನ್ Svcs, PhonePe ಮತ್ತು ಯಾಡ್ಲಿ ಫಿನ್​ಸಾಫ್ಟ್​ ತಾತ್ವಿಕವಾಗಿ ಅನುಮೋದನೆಯನ್ನು ಪಡೆದಿವೆ. ಬ್ಯಾಂಕ್​ಗಳ ಹೊರತಾಗಿ, FIP/FIU ಅನುಷ್ಠಾನದ ವಿವಿಧ ಹಂತಗಳಲ್ಲಿರುವ ಬಜಾಜ್ ಫಿನ್‌ಸರ್ವ್, DMI ಫೈನಾನ್ಸ್, Fi, ಕೈರೋಸ್ ಕ್ಯಾಪಿಟಲ್, ಲೆಂಡಿಂಗ್‌ಕಾರ್ಟ್ ಮತ್ತು ನಿಯೋಗ್ರೋತ್ ಕ್ರೆಡಿಟ್ ಸಹ ಇವೆ.

ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್ ಪ್ರಮಾಣ ಪತ್ರ, ಅಮೆರಿಕದಲ್ಲಿ ಕಾಗದದ ದಾಖಲೆ: ಕೊರೊನಾ ಲಸಿಕೆ ಪ್ರಕ್ರಿಯೆ ಹೋಲಿಸಿದ ನಂದನ್ ನಿಲೇಕಣಿ

(What Is Account Aggregator Framework How It Will Help To Democratise Credit)

Click on your DTH Provider to Add TV9 Kannada