ಭಾರತದಲ್ಲಿ ಡಿಜಿಟಲ್ ಪ್ರಮಾಣ ಪತ್ರ, ಅಮೆರಿಕದಲ್ಲಿ ಕಾಗದದ ದಾಖಲೆ: ಕೊರೊನಾ ಲಸಿಕೆ ಪ್ರಕ್ರಿಯೆ ಹೋಲಿಸಿದ ನಂದನ್ ನಿಲೇಕಣಿ

TV9 Digital Desk

| Edited By: ganapathi bhat

Updated on:Apr 05, 2022 | 1:14 PM

ಭಾರತವು ವಿಶ್ವದ ಲಸಿಕೆ ರಾಜಧಾನಿಯಾಗಿ ಕಾಣಿಸಿಕೊಳ್ಳುತ್ತಿದೆ. ಡಿಜಿಟಲ್ ಸೌಕರ್ಯ, ಆರ್.ಎಸ್. ಶರ್ಮಾ ಅಭಿವೃದ್ಧಿಪಡಿಸಿದ ಕೊವಿನ್ ಆ್ಯಪ್ ಅದ್ಭುತವಾಗಿದೆ ಎಂದು ತಿಳಿಸಿರುವ ನಂದನ್ ನಿಲೇಕಣಿ, ತಮ್ಮ ಗೆಳೆಯರೊಬ್ಬರ ವಿದೇಶಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಡಿಜಿಟಲ್ ಪ್ರಮಾಣ ಪತ್ರ, ಅಮೆರಿಕದಲ್ಲಿ ಕಾಗದದ ದಾಖಲೆ: ಕೊರೊನಾ ಲಸಿಕೆ ಪ್ರಕ್ರಿಯೆ ಹೋಲಿಸಿದ ನಂದನ್ ನಿಲೇಕಣಿ
ನಂದನ್ ನಿಲೇಕಣಿ (ಸಂಗ್ರಹ ಚಿತ್ರ)
Follow us


ಇನ್ಫೊಸಿಸ್ ಸಹ-ಸಂಸ್ಥಾಪಕ ಹಾಗೂ ಆಧಾರ್ ಕಾರ್ಡ್ ಜಾರಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಉದ್ಯಮಿ ನಂದನ್ ನಿಲೇಕಣಿ, ಕೊರೊನಾ ನಿರ್ವಹಣೆಯಲ್ಲಿ ಭಾರತ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಡಿಜಿಟಲ್ ವೇದಿಕೆಯ ಮುಖಾಂತರ ಸರಳ, ಸುಲಭವಾಗಿ ಯಾವುದೇ ಗೊಂದಲಗಳು ಉಂಟಾಗದಂತೆ ಕೊವಿಡ್-19 ವಿರುದ್ಧದ ಲಸಿಕೆ ವಿತರಣೆ ನಡೆಯುವಂತೆ ಆಗಿದೆ ಎಂದು ನಿಲೇಕಣಿ ಸಂತಸ ಹಂಚಿಕೊಂಡಿದ್ದಾರೆ.

ಭಾರತವು ವಿಶ್ವದ ಲಸಿಕೆ ರಾಜಧಾನಿಯಾಗಿ ಕಾಣಿಸಿಕೊಳ್ಳುತ್ತಿದೆ. ಡಿಜಿಟಲ್ ಸೌಕರ್ಯ, ಆರ್.ಎಸ್. ಶರ್ಮಾ ಅಭಿವೃದ್ಧಿಪಡಿಸಿದ ಕೊವಿನ್ ಆ್ಯಪ್ ಅದ್ಭುತವಾಗಿದೆ ಎಂದು ತಿಳಿಸಿರುವ ನಂದನ್ ನಿಲೇಕಣಿ, ತಮ್ಮ ಗೆಳೆಯರೊಬ್ಬರ ವಿದೇಶಿ ಅನುಭವವನ್ನು ಹಂಚಿಕೊಂಡಿದ್ದಾರೆ.

ನನ್ನ ಗೆಳೆಯರೊಬ್ಬರು ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಲಸಿಕೆ ಪಡೆದುಕೊಂಡಿರುವುದಕ್ಕೆ ಪ್ರಮಾಣ ಪತ್ರವನ್ನು ಕಾಗದದಲ್ಲಿ ಬರೆದು ಕೊಡಲಾಗಿದೆ. ಆದರೆ, ನನ್ನ ಕೊರೊನಾ ಲಸಿಕೆ ಪ್ರಮಾಣ ಪತ್ರ ಡಿಜಿಟಲ್ ರೂಪದಲ್ಲಿದೆ ಹಾಗೂ ಕ್ಯೂಆರ್ ಕೋಡ್ ಕೂಡ ಹೊಂದಿದೆ. ಲಸಿಕೆ ಪಡೆದುಕೊಂಡ ಎರಡು ನಿಮಿಷದ ಒಳಗಾಗಿ ಫೋನ್ ಮೂಲಕ ಪ್ರಮಾಣ ಪತ್ರ ಸಿಕ್ಕಿದೆ ಎಂದು ನಿಲೇಕಣಿ ತಿಳಿಸಿದ್ದಾರೆ. ಇವೆಲ್ಲವೂ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಬ್ಲೂಮ್ ವೆಂಚರ್ಸ್ ಆಯೋಜಿಸಿದ್ದ ಕ್ಲಬ್ ಹೌಸ್ ಸೆಷನ್​ನಲ್ಲಿ ನಂದನ್ ನಿಲೇಕಣಿ ಭಾಗವಹಿಸಿದ್ದಾರೆ. ಏಂಜೆಲ್ ಹೂಡಿಕೆದಾರ ಬಾಲಾಜಿ ಶ್ರೀನಿವಾಸನ್ ಮತ್ತು ಬ್ಲೂಮ್​ನ ಕಾರ್ತಿಕ್ ರೆಡ್ಡಿ ಜೊತೆ ಮಾತನಾಡುತ್ತಾ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಸಮಾರಂಭದಲ್ಲಿ ಅವರು ತಮ್ಮ ಪಯಣವನ್ನು ನೆನಪಿಸಿಕೊಂಡಿದ್ದಾರೆ. 2009ರಲ್ಲಿ UIDAI (Unique Identification Authority of India)ನಲ್ಲಿ ಕೆಲಸ ಮಾಡಲು ತೊಡಗಿದೆ. ಸಾರ್ವಜನಿಕ ವಲಯದಲ್ಲಿ ಕೋಟ್ಯಾಂತರ ಜನರಿಗೆ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕನಸಿತ್ತು. ಅದಕ್ಕಾಗಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ನವೋದ್ಯಮದ ರೀತಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಎಂದು ಆಧಾರ್ ಅಭಿವೃದ್ಧಿಪಡಿಸಿದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ UID ಯೋಜನೆಯನ್ನು ಮೊದಲು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ವಿರೋಧಿಸಿತ್ತು. ಆದರೆ, ಬಳಿಕ ಬಹುದೊಡ್ಡ ಮಟ್ಟದಲ್ಲಿ ಅದನ್ನು ಅಳವಡಿಸುವ ಕೆಲಸವನ್ನು ಮಾಡಿತು.

ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತನಾಡಿದ ದಿನವನ್ನು ನಿಲೇಕಣಿ ಹಂಚಿಕೊಂಡಿದ್ದಾರೆ. 2014ರ ಜುಲೈ 1ರಂದು ನಾನು ಪ್ರಧಾನ ಮಂತ್ರಿಯವರನ್ನು ಭೇಟಿಯಾದೆ. ಅವರು ಬಹಳ ಬುದ್ಧಿವಂತರು ಹಾಗೂ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವವರಾಗಿದ್ದಾರೆ. ಅವರು ಮತ್ತು ಈಗಿನ ಕೇಂದ್ರ ಸರ್ಕಾರ ಸದ್ಯ ಆಧಾರ್​ನ ಅತ್ಯಂತ ದೊಡ್ಡ ಬೆಂಬಲಿಗರಾಗಿದ್ದಾರೆ. ಅಂದು ಬೆಂಬಲಿಸಿದ್ದ ಪಕ್ಷ ಇಂದು ವಿರೋಧ ವ್ಯಕ್ತಪಡಿಸುತ್ತಿದೆ. ಹಾಗಾಗಿ, ರಾಜಕೀಯ ವ್ಯತ್ಯಾಸಗಳನ್ನು ಬದಿಗಿರಿಸಿ ಉಪಾಯಗಳನ್ನು ಅಳವಡಿಸಲು ಕೆಲಸ ಮಾಡಬೇಕಿದೆ. ಅಮೆರಿಕ ಸಾರ್ವಜನಿಕ ವಲಯದಿಂದ ದೂರವಾಗುತ್ತಿದ್ದರೆ ಭಾರತ ಈ ವಲಯವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ.

COVID VACCINATION CERTIFICATE

ಕೊರೊನಾ ಲಸಿಕೆ ಪ್ರಮಾಣ ಪತ್ರ ಡಿಜಿಟಲ್ ರೂಪದಲ್ಲಿ ಹೀಗೆ ಸಿಗುತ್ತಿದೆ

ಇದನ್ನೂ ಓದಿ: Tv9 Digital Live | 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ

ಭಾರತದಲ್ಲಿ ರೂಪಾಂತರಿ ಕೊರೊನಾ ಪತ್ತೆ, ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು


ತಾಜಾ ಸುದ್ದಿ

Related Stories

Click on your DTH Provider to Add TV9 Kannada