ಭಾರತದಲ್ಲಿ ರೂಪಾಂತರಿ ಕೊರೊನಾ ಪತ್ತೆ, ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು
ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ನಮ್ಮ ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಅಷ್ಟೇ ಅಲ್ಲದೆ ಚಂಡೀಗಡ, ರಾಜಸ್ಥಾನದಲ್ಲೂ ಕೊವಿಡ್-19 ಸೋಂಕು ಹಲವರಲ್ಲಿ ಪತ್ತೆಯಾಗುತ್ತಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಇಂದು (ಮಾರ್ಚ್ 24) ಹೊಸ ಕೊವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ದೆಹಲಿ: ಭಾರತದಲ್ಲಿ ರೂಪಾಂತರ ಕೊರೊನಾ ವೈರಾಣು ಪತ್ತೆಯಾಗಿದೆ. ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಈ ಬಗ್ಗೆ ಟ್ವೀಟ್ ಮಾಡಿದೆ. ಮಹಾರಾಷ್ಟ್ರದಲ್ಲಿ ಸಾರ್ಸ್ ಕೋವ್-2 ಎಂಬ ಕೊರೊನಾ ರೂಪಾಂತರಿ ತಳಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವೈರಸ್‌ನ ಇ484ಕ್ಯೂ, ಎಲ್452ಆರ್ ರೂಪಾಂತರಿ ಪತ್ತೆಯಾಗಿದ್ದು, ಟೆಸ್ಟಿಂಗ್ ವೇಳೆ ಶೇ. 15ರಿಂದ 20ರಷ್ಟು ಮಾದರಿಗಳಲ್ಲಿ ಈ ವೈರಾಣು ಕಾಣಿಸಿಕೊಂಡಿದೆ.
2020ರ ಕೊವಿಡ್-19 ತಳಿಗೂ ಈ ವರ್ಷದ ಕೊವಿಡ್ ತಳಿಗೂ ಹೋಲಿಕೆ ಮಾಡಲಾಗಿದೆ. ಕೊರೊನಾ ವೈರಸ್‌ನ ಇ484ಕ್ಯು ಮತ್ತು ಎಲ್452ಆರ್ ರೂಪಾಂತರಗಳು ಹೆಚ್ಚಿರುವುದು ಪತ್ತೆಯಾಗಿದೆ ಎಂದು ರೂಪಾಂತರ ವೈರಸ್ ಬಗ್ಗೆ ಆರೋಗ್ಯ ಸಚಿವಾಯ ಮಾಹಿತಿ ಹಂಚಿಕೊಂಡಿದೆ.
ಕೇರಳದ 14 ಜಿಲ್ಲೆಯ 2,032 ಮಾದರಿಗಳನ್ನು ಟೆಸ್ಟ್ ಗೆ ಒಳಪಡಿಸಲಾಗಿತ್ತು. ಈ ಪೈಕಿ ಕೊರೊನಾ ವೈರಸ್‌ನ n440k ರೂಪಾಂತರ ತಳಿಯು 11 ಜಿಲ್ಲೆಗಳ 123 ಮಾದರಿಗಳಲ್ಲಿ ಪತ್ತೆಯಾಗಿದೆ. ಈ ರೂಪಾಂತರ ವೈರಸ್ ತಳಿ 16 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಆದರೆ, ಕೊರೊನಾ ಪ್ರಕರಣಗಳ ದಿಢೀರ್ ಏರಿಕೆಗೂ ರೂಪಾಂತರ ತಳಿಗಳಿಗೂ ನೇರ ಸಂಬಂಧ ಇರೋದನ್ನು ಖಚಿತ ಪಡಿಸಲು ಸಾಧ್ಯವಿಲ್ಲ. ಇದಕ್ಕೆ ಇನ್ನಷ್ಟು ವಿಶ್ಲೇಷಣೆಗಳು ಆಗಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
The top 10 districts where maximum active cases are concentrated are – Pune, Nagpur, Mumbai, Thane, Nashik, Aurangabad, Bengaluru Urban, Nanded, Jalgaon and Akola. Nine districts from Maharashtra and one fro, Karnataka: Union Health Secretary Rajesh Bhushan#COVID19 pic.twitter.com/xWneLDYb4I
— ANI (@ANI) March 24, 2021
ದೇಶದಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣಗಳು ಕಂಡುಬಂದಿರುವ ಹತ್ತು ಜಿಲ್ಲೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಿದೆ. ಪುಣೆ, ನಾಗ್ಪುರ, ಮುಂಬೈ, ಥಾಣೆ, ನಾಸಿಕ್, ಔರಂಗಾಬಾದ್, ನಂದೆಡ್, ಜಾಲ್ಗಾಂವ್, ಅಕೊಲ ಮತ್ತು ಬೆಂಗಳೂರು ನಗರ ಈ ಪಟ್ಟಿಯಲ್ಲಿದೆ. ಮಹಾರಾಷ್ಟ್ರದ ಒಂಭತ್ತು ಜಿಲ್ಲೆ ಹಾಗೂ ಕರ್ನಾಟಕ ರಾಜಧಾನಿ ಬೆಂಗಳೂರನ್ನು ಕೂಡ ಗುರುತಿಸಲಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ನಮ್ಮ ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಅಷ್ಟೇ ಅಲ್ಲದೆ ಚಂಡೀಗಡ, ರಾಜಸ್ಥಾನದಲ್ಲೂ ಕೊವಿಡ್-19 ಸೋಂಕು ಹಲವರಲ್ಲಿ ಪತ್ತೆಯಾಗುತ್ತಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಇಂದು (ಮಾರ್ಚ್ 24) ಹೊಸ ಕೊವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವುದನ್ನು ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ ದಂಡ ವಿಧಿಸುವ ವಿಚಾರವನ್ನು ಕೂಡ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ನಿಯಮಾವಳಿ: ಮಾಸ್ಕ್ ಹಾಕದಿದ್ದರೆ ₹ 250 ದಂಡ!
ಇದನ್ನೂ ಓದಿ: Bangalore Covid-19 Case Updates: ಜುಲೈವರೆಗೂ ಕೊರೊನಾ ಸೋಂಕು ಕಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ತಜ್ಞರು
Published On - 7:19 pm, Wed, 24 March 21