West Bengal Election 2021 Opinion Poll: ಟಿಎಂಸಿಗೆ 146 ಸೀಟು, ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವು ಎಂದ ಜನ

ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸಿದಾಗ ಟಿಎಂಸಿಯಿಂದ ಬಿಜೆಪಿಗೆ ಸೇರಿದ ನಾಯಕರ ಪೈಕಿ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಸಹಾಯವಾಗಲಿದೆಯೇ? ಟಿಎಂಸಿಗೆ ಹೊಡೆತ ನೀಡಲಿದೆಯೇ? ಎಂದು ಕೇಳಿದ ಪ್ರಶ್ನೆಗೆ ಶೇಕಡಾ 34.5 ಮಂದಿ ಹೌದು ಎಂದು ಉತ್ತರಿಸಿದ್ದಾರೆ.

West Bengal Election 2021 Opinion Poll: ಟಿಎಂಸಿಗೆ 146 ಸೀಟು, ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವು ಎಂದ ಜನ
ಮಮತಾ ಬ್ಯಾನರ್ಜಿ- ಸುವೇಂದು ಅಧಿಕಾರಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 24, 2021 | 8:16 PM

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮಾರ್ಚ್ 27ಕ್ಕೆ ಆರಂಭವಾಗಲಿದೆ. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆ ದ ಗಡಿಮೀರಿ ಇಡೀ ದೇಶದ ಗಮನ ಸೆಳೆದಿದೆ. ಮತ್ತೊಮ್ಮೆ ಅಧಿಕಾರಕ್ಕೇರಲೇ ಬೇಕು ಎಂಬ ಜಿದ್ದಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವ ಟಿಎಂಸಿ ಕಾರ್ಯತಂತ್ರ ರೂಪಿಸುತ್ತಿದೆ. ಇತ್ತ ಬಿಜೆಪಿ ಟಿಎಂಸಿ ಪಕ್ಷವನ್ನು ಪರಾಭವಗೊಳಿಸಿ ಬಂಗಾಳದಲ್ಲಿ ಕಮಲ ಅರಳಿಸುತ್ತೇವೆ ಎಂದು ಹೇಳುತ್ತಿದೆ. ಟಿಎಂಸಿ-ಬಿಜೆಪಿ ಪಕ್ಷದ ಪೈಪೋಟ ನಡುವೆ ತಮ್ಮ ಅಳಿವು- ಉಳಿವಿನ ಹೋರಾಟವನ್ನು ಕಾಂಗ್ರೆಸ್, ಎಡಪಕ್ಷ ಮೈತ್ರಿಕೂಟ ಮಾಡುತ್ತಿದೆ. 5 ಜಿಲ್ಲೆಗಳ 30 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಬಂಕುರಾ ಜಿಲ್ಲೆಯಲ್ಲಿ 4 , ಪಶ್ಚಿಮ ಮಿಡ್ನಾಪುರದಲ್ಲಿ 6, ಝಾಗ್ರಾಂನಲ್ಲಿ 4, ಪೂರ್ವ ಮಿಡ್ನಾಪುರ್​ನಲ್ಲಿ 7 ಮತ್ತು ಪುರುಲಿಯಾದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಚ್ 27ರಂದು ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆಯನ್ನು Tv9 ಚುನಾವಣಾ ಅಧ್ಯಯನ ತಂಡ ಪ್ರಸ್ತುತ ಪಡಿಸಿದ್ದು ಸಮೀಕ್ಷೆಯ ವಿವರಗಳು ಇಂತಿವೆ .

ಪಶ್ಚಿಮ ಬಂಗಾಳದಲ್ಲಿ ಪ್ರಧಾನಿಯವರ ಮೆಗಾ ರ‍್ಯಾಲಿಯಿಂದ ಬಿಜೆಪಿಗೆ ಲಾಭವಾಗಿದ್ದೆಷ್ಟು ಎಂಬ ಪ್ರಶ್ನೆಗೆ ಶೇಕಡಾ 41 ಮಂದಿ ಹೆಚ್ಚು ಲಾಭವಾಗಿದೆ ಎಂದಿದ್ದಾರೆ. ಶೇ 11.7 ಮಂದಿ ಸ್ವಲ್ಪ ಲಾಭವಾಗಿದೆ ಎಂದು ಹೇಳಿದ್ದು ಶೇ. 37.4 ಮಂದಿ ಇಲ್ಲ ಎಂದಿದ್ದಾರೆ. ಶೇಕಡಾ 9.9 ಮಂದಿ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಕೋಮು ವಿಭಜನೆಯ ಆರೋಪವಿದೆ. ಇದನ್ನು ನೀವು ಒಪ್ಪುತ್ತೀರಾ? ಎಂಬ ಪ್ರಶ್ನೆಗೆ ಸಂಪೂರ್ಣವಾಗಿ ಒಪ್ಪುತ್ತೇವೆ ಎಂದು ಹೇಳಿದವರು ಶೇಕಡಾ 39.3 ಮಂದಿ. ಸ್ವಲ್ಪ ಒಪ್ಪುತ್ತೇವೆ ಎಂದು ಹೇಳಿದವರು ಶೇ 15.4 ಮಂದ. ಶೇಕಡಾ 28.9 ಮಂದಿ ಒಪ್ಪುವುದಿಲ್ಲ ಎಂದು ಹೇಳಿದ್ದು, ಶೇಕಡ 16.4 ಮಂದಿ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

ಬಿಜೆಪಿ ಮತ್ತು ಟಿಎಂಸಿ ಪಕ್ಷಕ್ಕೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್- ಎಡಪಕ್ಷ-ಅಬ್ಬಾಸ್ ಸಿದ್ದಿಖಿ ಅವರ ಮೈತ್ರಿಕೂಟವಿದೆ. ಈ ಮೈತ್ರಿಕೂಟ ಟಿಎಂಸಿಗೆ ಹೊಡೆತ ನೀಡಲಿದೆಯೇ? ಎಂದು ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಶೇ 31.3 ಮಂದಿ ಖಂಡಿತ ಎಂದು ಉತ್ತರಿಸಿದ್ದಾರೆ. ಸ್ವಲ್ಪ ಮಟ್ಟದಲ್ಲಿ ಹೊಡೆತ ನೀಡಲಿದೆ ಎಂದು ಶೇ 21.7 ಮಂದಿ ಹೇಳಿದ್ದು , ಶೇಕಡಾ 28.8 ಮಂಂದಿ ಇಲ್ಲ ಹಾಗು ಶೇಕಡಾ 18.2 ಮಂದಿ ಗೊತ್ತಿಲ್ಲ ಎಂದಿದ್ದಾರೆ.

ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸಿದಾಗ ಟಿಎಂಸಿಯಿಂದ ಬಿಜೆಪಿಗೆ ಸೇರಿದ ನಾಯಕರ ಪೈಕಿ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಸಹಾಯವಾಗಲಿದೆಯೇ? ಟಿಎಂಸಿಗೆ ಹೊಡೆತ ನೀಡಲಿದೆಯೇ? ಎಂದು ಕೇಳಿದ ಪ್ರಶ್ನೆಗೆ ಶೇಕಡಾ 34.5 ಮಂದಿ ಹೌದು ಎಂದು ಉತ್ತರಿಸಿದ್ದಾರೆ. ಸುವೇಂದು ಬಿಜೆಪಿಗೆ ಬಂದಿರುವುದರಿಂದ ಟಿಎಂಸಿಗೆ ಸ್ವಲ್ಪ ಹೊಡೆತ ಸಿಗಲಿದೆ ಎಂದು ಹೇಳಿದವರು ಶೇಕಡಾ 15.4 ಮಂದಿ. ಇಲ್ಲ ಎಂದು ಹೇಳಿದವರು ಶೇ.39.9 ಮಂದಿ, ಗೊತ್ತಿಲ್ಲ ಎಂದು ಹೇಳಿದವರು 10.2 ಮಂದಿ.

ನಿಮ್ಮ ಚುನಾವಣಾ ಕ್ಷೇತ್ರದಲ್ಲಿ ಟಿಎಂಸಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯೇ ಎಂಬ ಪ್ರಶ್ನೆಗೆ ಶೇಕಡಾ 42.3 ಮಂದಿ ಹೌದು ಎಂದು ಹೇಳಿದ್ದಾರೆ. ಇಲ್ಲ ಎಂದು ಹೇಳಿದವರ ಸಂಖ್ಯೆ ಶೇಕಡಾ 34.3 ಮಂದಿ. ಗೊತ್ತಿಲ್ಲ ಎಂದು ಹೇಳಿದವರ ಸಂಖ್ಯೆ ಶೇಕಡಾ 23.4ರಷ್ಟಿದೆ. ನಿಮ್ಮ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯೇ ಎಂದು ಮತದಾರರಲ್ಲಿ ಕೇಳಿದಾಗ ಶೇ 41.5 ಮಂದಿ ಹೌದು ಎಂದು ಹೇಳಿದ್ದಾರೆ. ಶೇಕಡಾ 34.3 ಮಂದಿ ಇಲ್ಲ ಎಂದು ಹೇಳಿದ್ದು ಶೇಕಡಾ 25.1 ಮಂದಿ ಇಲ್ಲ ಎಂದು ಹೇಳಿದ್ದಾರೆ.  ನಿಮ್ಮ ಚುನಾವಣಾ ಕ್ಷೇತ್ರದಲ್ಲಿ ಕಾಂಗ್ರೆಸ್- ಎಡಪಕ್ಷ- ಐಎಸ್​ಎಫ್ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯೇ? ಎಂದು ಕೇಳಿದ ಪ್ರಶ್ನೆಗೆ ಶೇಕಡಾ 33.6 ಮಂದಿ ಹೌದು ಎಂದು ಹೇಳಿದ್ದಾರೆ. ಶೇ. 33.3ಮಂದಿ ಇಲ್ಲ ಎಂದು ಹೇಳಿದ್ದು ಶೇಕಡಾ 33.1ಮಂದಿ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

ನಂದಿಗ್ರಾಮದಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂದು ನಿಮಗೆ ಅನಿಸುತ್ತಿದೆ ಎಂದು ಮತದಾರರಲ್ಲಿ ಕೇಳಿದಾಗ ಟಿಎಂಸಿ ಎಂದು ಶೇಕಡಾ 46.0 ಮಂದಿ ಹೇಳಿದ್ದಾರೆ. ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದವರ ಸಂಖ್ಯೆ ಶೇಕಡಾ 36.1.  ಕಾಂಗ್ರೆಸ್-ಎಡಪಕ್ಷ -ಐಎಸ್​ಎಫ್ ಮೈತ್ರಿಕೂಟ ಗೆಲ್ಲುತ್ತಿದೆ ಎಂದವರು ಶೇಕಡಾ 10.0ಮಂದಿ, ಶೇಕಡಾ 7.9 ಮಂದಿ ಗೊತ್ತಿಲ್ಲ ಎಂದು ಹೇಳಿದ್ದಾರೆ.

6 ದಿನಗಳಲ್ಲಿ ನಂದಿಗ್ರಾಮದಲ್ಲಿ ಮೂಡ್ ಎಷ್ಟು ಬದಲಾಯಿತು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಮಾರ್ಚ್ 19ರಲ್ಲಿ ಟಿಎಂಸಿ ಪರ ಶೇಕಡಾ 50 ಜನರು ಅಭಿಪ್ರಾಯ ವ್ಯಕ್ತಪಡಿಸಿದರೆ ಮಾರ್ಚ್ 24ರ ವೇಳೆಗೆ ಅಭಿಪ್ರಾಯ ವ್ಯಕ್ತಪಡಿಸಿದವರ ಸಂಖ್ಯೆ ಶೇಕಡಾ 46 ಆಗಿದೆ. ಇಲ್ಲಿ ಮಾರ್ಚ್ 19ಕ್ಕೆ ಗೊತ್ತಿಲ್ಲ ಎಂದು ಹೇಳಿದವರು ಯಾರೂ ಇರಲಿಲ್ಲ. ಆದರೆ ಮಾರ್ಚ್ 24ಕ್ಕೆ ಶೇ 7.9 ಮಂದಿ ಇದಕ್ಕೆ ಉತ್ತರಿಸಿದ್ದಾರೆ.

ಸಿಂಗೂರ್​ನಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂಬ ಪ್ರಶ್ನೆಗೆ ಟಿಎಂಸಿ ಎಂದು ಉತ್ತರಿಸಿದವರು ಶೇಕಡಾ 43.6 ಮಂದಿ. ಶೇಕಡಾ 34.7 ಮಂದಿ ಬಿಜೆಪಿ ಎಂದು ಹೇಳಿದ್ದಾರೆ. ಕಾಂಗ್ರೆಸ್- ಎಡಪಕ್ಷ- ಐಎಸ್ಎಫ್ ಪಕ್ಷ ಎಂದವರು ಶೇ. 9.1 ಮಂದಿ. 12.6 ಮಂದಿ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರ ಕೆಲಸ ನಿರ್ವಹಣೆಗೆ ನೀವು ಎಷ್ಟು ಅಂಕ ನೀಡುತ್ತೀರಿ ಎಂಬ ಪ್ರಶ್ನೆಗೆ ಉತ್ತಮ ಎಂದು ಹೇಳಿದವರ ಸಂಖ್ಯೆ ಶೇಕಡಾ 57. ಕಳಪೆ ಎಂದವರ ಸಂಖ್ಯೆ ಶೇಕಡಾ 43 ಆಗಿದೆ

ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಎಷ್ಟು ಮತಗಳು ಸಿಗಬಹುದು? ಎಂಬ ಪ್ರಶ್ನೆಗೆ ಮತದಾರರ ಉತ್ತರ ಹೀಗಿದೆ ಟಿಎಂಸಿ – ಶೇ 39.6 ಬಿಜೆಪಿ – ಶೇ 37.1 ಎಡಪಕ್ಷ – ಕಾಂಗ್ರೆಸ್ -ಐಎಸ್ಎಫ್- ಶೇ 17.4 ಇತರೆ- 5.9%

ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಎಷ್ಟು ಸೀಟುಗಳು ಸಿಗಬಹುದು ಎಂಬ ಪ್ರಶ್ನೆಗೆ ಸಮೀಕ್ಷೆಯಲ್ಲಿ ಸಿಕ್ಕದ ಉತ್ತರ ಹೀಗಿದೆ.

ಒಟ್ಟು ಸೀಟು- 294 ಟಿಎಂಸಿ- 146 ಬಿಜೆಪಿ -122 ಎಡಪಕ್ಷ ಕಾಂಗ್ರೆಸ್ ಐಎಸ್ಎಫ್ -23 ಇತರೆ- 3

ಇದನ್ನೂ ಓದಿ: West Bengal Election 2021 Opinion Poll: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ

Published On - 8:14 pm, Wed, 24 March 21